ಒಡಿಶಾ, ಪ.ಬಂಗಾಳದಲ್ಲಿ ಯಾಸ್ ಕರಿಮೋಡ.. ನಮ್ಮ ರಾಜ್ಯಕ್ಕೂ ಇದ್ಯಾ ಅಪಾಯ?

ಒಡಿಶಾ, ಪ.ಬಂಗಾಳದಲ್ಲಿ ಯಾಸ್ ಕರಿಮೋಡ.. ನಮ್ಮ ರಾಜ್ಯಕ್ಕೂ ಇದ್ಯಾ ಅಪಾಯ?

ನವದೆಹಲಿ: ತೌಕ್ತೆ ಚಂಡಮಾರುತದ ಬೆನ್ನಲ್ಲೇ ಇದೀಗ ಯಾಸ್​ ಸೈಕ್ಲೋನ್ ಅಬ್ಬರ ಶುರುವಾಗಿದೆ. ಇಂದು ಮಧ್ಯಾಹ್ನ ಒಡಿಶಾದ ಬಾಲಸೊರ್​​ನಲ್ಲಿ ಯಾಸ್ ಲ್ಯಾಂಡ್​ಫಾಲ್ ಆಗಲಿದೆ. ಈ ಸಂದರ್ಭದಲ್ಲಿ ತುಂಬಾ ಅನಾಹುತಗಳು ಸಂಭವಿಸಬಹದು, ಹೀಗಾಗಿ ಎಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ ಖಡಕ್ ಸೂಚನೆ ನೀಡಿದೆ.

ಪಶ್ಚಿಮ ಬಂಗಾಳದಲ್ಲಿ 9 ಲಕ್ಷ ಜನರು ಬೇರೆಡೆಗೆ ಸ್ಥಳಾಂತರ
ಸೈಕ್ಲೋನ್ ಅಪ್ಪಳಿಸುವ ಹಿನ್ನೆಲೆಯಲ್ಲಿ ಮುಂದಿನ ಗುರುವಾರದವರೆಗೆ ಹಲವು ಮಾರ್ಗಗಳ ಟ್ರೈನ್​ಗಳ ಓಡಾಟವನ್ನ ಕ್ಯಾನ್ಸಲ್ ಮಾಡಲಾಗಿದೆ. ಎನ್​ಡಿಆರ್​ಎಫ್​ ತಂಡ ಅಲರ್ಟ್​ ಆಗಿದ್ದು, ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಹಲವು ರಾಜ್ಯಗಳಿಗೆ ಆಗಮಿಸಿವೆ. ಇನ್ನು ರಾಷ್ಟ್ರೀಯ ಹೆದ್ದಾರಿ ಚೆನ್ನೈ ನಿಂದ ಕೋಲ್ಕತ್ತಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರಕ್ಕೂ ನಿಷೇಧ ಹೇರಲಾಗಿದೆ.

Image

ಇನ್ನು ಒಡಿಶಾದ ಸಿಎಂ ನವೀನ್ ಪಟ್ನಾಯಕ್ ಯಾಸ್​ ಎದುರಿಸಲು ನಡೆದಿರುವ ಸಿದ್ಧತೆಗಳನ್ನ ಈಗಾಗಲೇ ರಿವಿವ್ಯೂ ಮಾಡಿದ್ದಾರೆ. ಇನ್ನು ಪಶ್ಚಿಮ ಬಂಗಾಳದಲ್ಲಿ 9 ಲಕ್ಷ ಹಾಗೂ ಓಡಿಶಾದಲ್ಲಿ 2 ಲಕ್ಷ ಮಂದಿಯನ್ನ ಮುಂಜಾಗೃತ ಕ್ರಮವಾಗಿ ಬೇರೆಡೆಗೆ ಶಿಫ್ಟ್​ ಮಾಡಲಾಗಿದೆ.

ರಾಜ್ಯಕ್ಕೆ ಇದ್ಯಾ ಅಪಾಯ..?
ರಾಜ್ಯದಲ್ಲೂ ಸಹ ಯಾಸ್ ಚಂಡಮಾರುತ ತನ್ನ ಪರಿಣಾಮ ಬೀರಲಿದ್ದು ಕರಾವಳಿಯ ಜಿಲ್ಲೆಗಳಲ್ಲಿ ವರುಣ ಅಬ್ಬರಿಸಲಿದ್ದಾನೆ ಎನ್ನಲಾಗಿದೆ. ಈ ಭಾಗದಲ್ಲಿ ನಾಳೆಯಿಂದ ಅಂದ್ರೆ ಮೇ 26 ರಿಂದ 29 ರವರೆಗೆ ವ್ಯಾಪಕ ಮಳೆ ಸುರಿಯಲಿದ್ದು ಇತ್ತ ರಾಜ್ಯದ ಒಳನಾಡಿನಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್​ ಪಾಟೀಲ್ ಮಾಹಿತಿ ನೀಡಿದ್ದಾರೆ.

The post ಒಡಿಶಾ, ಪ.ಬಂಗಾಳದಲ್ಲಿ ಯಾಸ್ ಕರಿಮೋಡ.. ನಮ್ಮ ರಾಜ್ಯಕ್ಕೂ ಇದ್ಯಾ ಅಪಾಯ? appeared first on News First Kannada.

Source: newsfirstlive.com

Source link