ಫೆಬ್ರವರಿ 7 ರಿಂದ ಫೆಬ್ರವರಿ 14ರವರೆಗೂ ಪ್ರೇಮಿಗಳ ದಿನದ ಡಿಫೆರೆಂಟ್ ಸೆಲೆಬ್ರೇಷನ್ಸ್ ನೋಡಿದ್ದೇವೆ. ನಿಮಗೆ ಗೊತ್ತಾ..? ಪ್ರೇಮಿಗಳ ವಿರೋಧಿ ದಿನವನ್ನೂ ಆಚರಿಸುತ್ತಾರೆ. ಇದನ್ನು ಫೆಬ್ರವರಿ 15 ರಿಂದ ಫೆಬ್ರವರಿ 21ರವರೆಗೂ ಪ್ರೇಮಿಗಳ ವಿರೋಧಿ ದಿನಗಳನ್ನಾಗಿ ಆಚರಿಸುತ್ತಾರೆ.
ಇದರಲ್ಲಿ ಸ್ಲಾಪ್ ಡೇ, ಕಿಕ್ ಡೇ, ಪರ್ಫ್ಯೂಮ್ ಡೇ, ಫ್ಲರ್ಟಿಂಗ್ ಡೇ, ಕನ್ಫೆಷನ್ ಡೇ, ಮಿಸ್ಸಿಂಗ್ ಡೇ, ಬ್ರೇಕ್ ಆಫ್ ಡೇ ಈ ರೀತಿ ಪ್ರೇಮಿಗಳ ವಿರೋಧಿ ದಿನಗಳನ್ನು ಸೆಲೆಬ್ರೇಟ್ ಮಾಡ್ತಾರೆ. ಇಂದು ಅಂದ್ರೆ ಫೆಬ್ರವರಿ 20 ಮಿಸ್ಸಿಂಗ್ ಡೇ. ಇದು ಪ್ರೇಮಿಗಳ ವಿರೋಧಿ ವಾರದ ಆರನೇ ದಿನವಾಗಿದೆ. ಮಿಸ್ಸಿಂಗ್ ಡೇ ಕೇವಲ ಪ್ರೇಮಿಗಳಿಗೆ, ಪ್ರೇಮಿಗಳ ವಿರೋಧಿಗಳಿಗೇ ಮಾತ್ರ ಸಿಮೀತವಾಗಿಲ್ಲ.
ನಿಮಗೆ ಇಷ್ಟವಾದ ಸ್ಪೆಷಲ್ ವ್ಯಕ್ತಿಗೂ ಸಲ್ಲುತ್ತದೆ. ಕುಟುಂಬ, ಸ್ನೇಹಿತರು ಅಥವಾ ನಿಮ್ಮ ಕ್ರಶ್ ಅನ್ನ ನೀವು ಜಾಸ್ತಿ ಮಿಸ್ ಮಾಡಿಕೊಳ್ಳುತ್ತಿದ್ದರೆ ಈಗಲೇ ಫೋನ್ ತೆಗೆದುಕೊಳ್ಳಿ.. ಅವರಿಗೆ ಕಾಲ್ ಮಾಡಿ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದು ಹೇಳಿಬಿಡಿ!