’ಒದ್ಹೊತ್ತು ಊಟ ಬಿಡ್ತಿನಿ ಹೊರತು ಸೆಕ್ಸ್​ ಬಿಡಲ್ಲ’.. ಡಿವೋರ್ಸ್​ ಬಳಿಕ ಸಮಂತಾ ವಿಡಿಯೋ ವೈರಲ್


ನಟ ಅಕ್ಕಿನೇನಿ ನಾಗ ಚೈನತ್ಯರೊಂದಿಗೆ ವಿಚ್ಛೇದನ ಪಡೆದುಕೊಂಡ ಬಳಿಕ ನಟಿ ಸಮಂತಾ ಸದ್ಯ ಸಿನಿಮಾಗಳತ್ತ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಎರಡ್ಮೂರು ಬಿಗ್​ ಬಜೆಟ್​ ಸಿನಿಮಾಗಳಿಗೆ ಓಕೆ ಎಂದಿರುವ ಅವರು ಇತ್ತೀಚಿಗೆ ಹಾಲಿವುಡ್​​ ಸಿನಿಮಾಗೂ ಸೈ  ಹೇಳಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿ ಹವಾ ಸೃಷ್ಟಸಿದ್ದರು.

ಇತ್ತೀಚಿನ ದಿನಗಳಲ್ಲಿ ಸಮಂತಾ ವೈಯಕ್ತಿಕ ಜೀವನ ಭಾರೀ ಸುದ್ದಿಯಾಗುತ್ತಿದೆ.. ಅವರ ಡಿವೋರ್ಸ್​, ಪ್ರೆಗ್ನೆನ್ಸಿ ರೂಮರ್ಸ್, ಬಾಲಿವುಡ್​ಎಂಟ್ರಿ, ನಾಗ ಚೈತನ್ಯ ಅವರ ಜೊತೆಗಿನ ಮನಸ್ತಾಪ, ಎಲ್ಲವೂ ಗಾಸಿಪ್​ ಗಾಳಿಪಟವಾಗಿ ಹಾರಿದ್ದೇ ಹಾರಿದ್ದು. ಸದ್ಯ ಸಮಂತಾ ಹಾಲಿವುಡ್​ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ವೈರಲ್​ ಆಗುತ್ತಿದ್ದಂತೆ ಅವರ ಹಳೆಯ ವಿಡಿಯೋವೊಂದು ಸೋಷಿಯಲ್​ ಸಮುದ್ರದಲ್ಲಿ ಧುತ್ತನೆ ಮತ್ತೇ ಸದ್ದು ಮಾಡ ತೊಡಗಿದೆ. ಹಾಗಿದ್ರೆ ಯಾವ ಆ ವಿಡಿಯೋ, ಅದ್ಯಾಕೆ ಮತ್ತೇ ಸುದ್ದಿಯಾಗುತ್ತಿದೆ ಗೊತ್ತಾ?

ಯೆಸ್​ ಸಮಂತಾ 2017ರಲ್ಲಿ ತೆಲಗು ವಾಹಿನಿ ನಡೆಸಿದ ಸಂದರ್ಶನವೊಂದರ ತುಣುಕುಗಳ ಪಡ್ಡೆ ಹುಡುಗರ ಎದೆಯಲ್ಲಿ ಕಚುಗುಳಿ ಇಡುತ್ತಿದೆ. ಈ ವಿಡಿಯೋದಲ್ಲಿ ಅವರು ತೀರಾ ಖಾಸಗಿಯಾದ ವಿಚಾರವೊಂದನ್ನ ಹೇಳಿದ್ದರು ಅದು ಆಗ ಸಾಕಷ್ಟು ವೈರಲ್​ ಆಗಿತ್ತು. ನಿರೂಪಕಿಯೊಬ್ಬರು ಸಂದರ್ಶನ ನಡೆಸುವಾಗ ನಿಮಗೆ ಆಹಾರ ಬೇಕೋ ಅಥವಾ ಸೆಕ್ಸ್​ ಬೇಕೋ ಎಂಬ ಪ್ರಶ್ನೆಯನ್ನ ಕೇಳಿದಾಗ ಹಾಟ್​ ಬೆಡಗಿ ಸಮಂತಾ ನನಗೆ ಸೆಕ್ಸ್​ ಬೇಕು ಎಂದು ಉತ್ತರಿಸಿದ್ದರು.

News First Live Kannada


Leave a Reply

Your email address will not be published. Required fields are marked *