ಬೆಂಗಳೂರು: ಅಕ್ರಮವಾಗಿ ಮದ್ಯ ಮಾರುತ್ತಿರುವವರನ್ನ‌ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ನಗರದಲ್ಲಿ 10 ಗಂಟೆಯ ನಂತರ ಅತ್ಯಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಸೇವೆಗೂ ನಿಷೇಧ ಹೇರಲಾಗಿದೆ. ಆದ್ರೆ ಈ ಆರೋಪಿಗಳು10 ಗಂಟೆಯ ನಂತರವೂ ಮದ್ಯವನ್ನ ಮಾರಾಟ ಮಾಡ್ತಿದ್ದರು ಎನ್ನಲಾಗಿದೆ. ಶಿವಲಿಂಗ್ ಬಿನ್ ಸಣ್ಣಯ್ಯ, ಮನು ಬಿನ್ ಪುಟ್ಟಸ್ವಾಮಿ, ಭಾಸ್ಕರ್ ಬಿನ್ ಬಸವರಾಜು ಬಂಧಿತ ಆರೋಪಿಗಳು.

10 ಗಂಟೆಯ ನಂತರ ಅಕ್ರಮವಾಗಿ, ಹತ್ತು ಸಾವಿರ ಮೌಲ್ಯದ ಮದ್ಯವನ್ನ 23 ಸಾವಿರಕ್ಕೆ ಮಾರಾಟ ಮಾಡ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಹೋಗಿ ಆರೋಪಿಗಳಿಂದ ನಗದು ಹಣವನ್ನ ಜಪ್ತಿ ಮಾಡಿ ಮೂವರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಸದ್ಯ, ಈ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಒನ್ ಟು ಡಬಲ್​​ ರೇಟ್​ಗೆ ಮದ್ಯ ಮಾರಾಟ; ಪೊಲೀಸ್ ಖೆಡ್ಡಾಗೆ ಬಿದ್ದ ದಂಧೆಕೋರರು appeared first on News First Kannada.

Source: newsfirstlive.com

Source link