ಒಬ್ಬನ ಹತ್ಯೆ..6 ಭಾರತೀಯ ಮೀನುಗಾರರನ್ನು ಕಿಡ್ನಾಪ್ ಮಾಡಿದ ಪಾಕಿಸ್ತಾನ


ಗುಜರಾತಿನ ಕಡಲಿಗೆ ಮೀನುಗಾರಿಕೆಗೆ ಅಂತ ಇಳಿದಿದ್ದ ಮೀನುಗಾರರ ಮೇಲೆ ಪಾಕಿಸ್ತಾನ ಜಲಸೈನಿಕರು ದೌರ್ಜನ್ಯ ಮೆರೆದಿದ್ದಾರೆ. ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ  ಭಾರತೀಯ ಮೀನುಗಾರಿಕಾ ಹಡಗಿನ ಮೇಲೆ ಪಾಕಿಸ್ತಾನಿ ನೇವಿ ಸೈನಿಕರು, ಗುಂಡಿನ ದಾಳಿ ನಡೆಸಿದ್ದು ಒಬ್ಬನನ್ನ ಹತ್ಯೆ ಮಾಡಿದ್ದಾರೆ. ಅಲ್ಲದೇ, 6 ಜನ ಮೀನುಗಾರರನ್ನು ಕಿಡ್ನಾಪ್ ಮಾಡಿರೋ ಮಾಹಿತಿ ಲಭ್ಯವಾಗಿದೆ. ಇನ್ನು ಹತ್ಯೆಗೀಡಾದ ಮೀನುಗಾರನನ್ನು ಶ್ರಿಧರ್ ಎಂದು ಗುರ್ತಿಸಲಾಗಿದೆ.

ಗುಜತಿನನ ದ್ವಾರಕಾದ ಒಖಾ ಎಂಭಲ್ಲಿ ಭಾರತದ ಜಲ್​ಪರಿ ಹೆಸರಿನ ಮೀನುಗಾರಿಕಾ ಹಡಗಿನ ಮೇಲೆ ಫೈರಿಂಗ್ ಮಾಡಿ.. ಭಾರತಕ್ಕೆ ಎಚ್ಚರಿಕೆಯನ್ನ ಪಾಕಿಸ್ತಾನ ರವಾನಿಸಿದೆ. ಇನ್ನು ಈ ಘಟನೆ ಬಗ್ಗೆ ಅಧಿಕೃತವಾಗಿ ಹೆಚ್ಚಿನ ಮಾಹಿತಿಯನ್ನ ಕೇಂದ್ರ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆಗಳು ನೀಡಿಲ್ಲ.

News First Live Kannada


Leave a Reply

Your email address will not be published.