‘ಒಬ್ಬರಾದ ಮೇಲೆ ಒಬ್ಬರು ಹೋಗುತ್ತಿದ್ದಾರೆ’; ರಾಜೇಶ್​ ನಿಧನಕ್ಕೆ ಕಂಬನಿ ಮಿಡಿದ ಎಸ್​. ನಾರಾಯಣ್​ | S Narayan mourns the demise of senior actor Kalatapasvi Rajesh


ಹಿರಿಯ ನಟ ರಾಜೇಶ್​ (Kalatapasvi Rajesh) ಇನ್ನಿಲ್ಲ ಎಂಬ ಸುದ್ದಿ ಕೇಳಿ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. 82ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜೇಶ್​ ಅವರು ಫೆ.19ರಂದು ನಿಧನರಾದರು. ಹಲವು ದಶಕಗಳ ಕಾಲ ಚಿತ್ರರಂಗಕ್ಕೆ ಅವರು ಸೇವೆ ಸಲ್ಲಿಸಿದ್ದರು. ಡಾ. ರಾಜ್​ಕುಮಾರ್​ ಕಾಲದಿಂದ ಇತ್ತೀಚೆಗಿನ ‘ಓಲ್ಡ್​ ಮಾಂಕ್​’ (Old Monk Movie) ಸಿನಿಮಾದವರೆಗೂ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದರು. ಈ ಚಿತ್ರದಲ್ಲಿ ಎಸ್​. ನಾರಾಯಣ್ ಕೂಡ ನಟಿಸಿದ್ದು, ರಾಜೇಶ್​ ಕುರಿತು ಕೆಲವು ನೆನಪುಗಳನ್ನು ಅವರು ಮೆಲುಕು ಹಾಕಿದ್ದಾರೆ. ‘ತುಂಬ ಜನರನ್ನು ನಾವು ಕಳೆದುಕೊಂಡೆವು. ಕಣ್ಣ ಮುಂದೆಯೇ ಒಬ್ಬರಾದ ಮೇಲೆ ಒಬ್ಬರು ಹೋಗುತ್ತಿದ್ದಾರೆ. ಸಹ-ನಿರ್ದೇಶಕನಾಗಿ ನಾನು ಅವರ ಜೊತೆ ಕೆಲಸ ಮಾಡಿದ್ದೆ. ಎಲ್ಲಿ ಸಿಕ್ಕರೂ ಚೆನ್ನಾಗಿ ಮಾತನಾಡಿಸುತ್ತಿದ್ದರು. ಅಂದಿನ ಕಾಲದಲ್ಲಿ ‘ಕ್ರಾಂತಿವೀರ’ ಚಿತ್ರದಲ್ಲಿ ಡಾ. ರಾಜ್​ಕುಮಾರ್​ ಅವರಿಗೆ ಸರಿಸಮನಾಗಿ ರಾಜೇಶ್​ ನಟಿಸಿದ್ದರು. ಅಂಥ ಒಳ್ಳೆಯ ಕಲಾವಿದರನ್ನು ಕಳೆದುಕೊಂಡಿರುವುದು ನೋವಿನ ಸಂಗತಿ’ ಎಂದು ಎಸ್​. ನಾರಾಯಣ್​ ಹೇಳಿದ್ದಾರೆ. ‘ಓಲ್ಡ್​ ಮಾಂಕ್​’ ಚಿತ್ರದಲ್ಲಿ ರಾಜೇಶ್​ ಮತ್ತು ಎಸ್​. ನಾರಾಯಣ್​ (S Narayan) ನಟಿಸಿದ್ದಾರೆ. ಆದರೆ ಒಟ್ಟಿಗೆ ತೆರೆಹಂಚಿಕೊಳ್ಳುವ ಅವಕಾಶ ಸಿಗಲಿಲ್ಲ. ‘ಅವರು ನಟಿಸಿದ ಚಿತ್ರದಲ್ಲಿ ನಾನೂ ಇದ್ದೇನೆ ಎಂಬುದೇ ನನಗೆ ಹೆಮ್ಮೆ’ ಎಂದು ಎಸ್​. ನಾರಾಯಣ್​ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *