ಮೈಸೂರು: ನನ್ನ ವರ್ಗಾವಣೆಯನ್ನ‌ ನಿರೀಕ್ಷೆ ಮಾಡಿರಲಿಲ್ಲ. ನಾನು ವೈಯುಕ್ತಿಕ ದ್ವೇಷಕ್ಕೆ ರೋಹಿಣಿ ಸಿಂಧೂರಿ ವಿರುದ್ದ ಧ್ವನಿ ಎತ್ತಿರಲಿಲ್ಲ ಅಂತ ಐಎಎಸ್ ಅಧಿಕಾರಿ ಶಿಲ್ಪಾ ನಾಗ್​ ಹೇಳಿದ್ದಾರೆ.

ವರ್ಗಾವಣೆ ಬೆನ್ನಲ್ಲೇ ಇಂದು ನ್ಯೂಸ್‌ಫಸ್ಟ್‌ ಜೊತೆ ಮಾತನಾಡಿದ ಅವರು, ನನ್ನ ಧ್ವನಿಗೆ ಜಯ ಸಿಕ್ಕಿದೆ, ವ್ಯವಸ್ಥೆ ಸರಿ ಹೋಗಿದೆ ಎಂದರು. ಒಬ್ಬ ವ್ಯಕ್ತಿಯಿಂದ ಹಾಳಾಗಿದ್ದ ವಾತಾವರಣ ಸರಿ ಹೊಗಿದೆ. ಸಮಾಧಾನವಾಗಿ ಯೋಚನೆ ಮಾಡಿದಾಗ ಸೇವೆ ಮುಂದುವರೆಸಬೇಕು ಅನಿಸಿತು. ಸರ್ಕಾರಿ ಅಧಿಕಾರಿಗಳಿಗೆ ಒಂದೇ ಸ್ಥಳ ಖಾಯಂ ಅಲ್ಲ. ಹೋದ ತಕ್ಷಣ ಕ್ವಿಕ್‌ ಆಗಿ ಎಲ್ಲವನ್ನೂ ಅರಿತುಕೊಳ್ಳಬೇಕು. ನಾನು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಂದವಳು. ಸರ್ಕಾರ ನಿರ್ಧಾರಕ್ಕೆ ನಾನು ಗೌರವಿಸುತ್ತೇನೆ ಎಂದು ಹೇಳಿದ್ರು.

ಮೈಸೂರಿನ ಜನ ವಿಶಾಲ ಹೃದಯದವರು. ಮೈಸೂರಿನಲ್ಲಿ ಕೆಲಸ ಮಾಡಲು ಎಲ್ಲರಿಗೂ ಅದೃಷ್ಟ.
ನನಗೆ ಡಿಸಿಯವರನ್ನ ಬಿಟ್ಟು ಯಾರ ಅಸಹಕಾರವೂ ಇರಲಿಲ್ಲ. ನಮ್ಮ ಮೈಸೂರು ಪಾಲಿಕೆ ಕಾರ್ಯಗಳನ್ನ ಜನ ನೆನೆಸಿಕೊಂಡಿದ್ದಾರೆ ಎಂದು ಶಿಲ್ಪ ನಾಗ್ ಹೇಳಿದ್ರು.

ರೋಹಿಣಿ ಸಿಂಧೂರಿಯಿಂದ ಕಿರುಕುಳವಾಗ್ತಿದೆ ಅಂತ ಶಿಲ್ಪಾ ನಾಗ್ ಆರೋಪ ಮಾಡಿ ಕಣ್ಣೀರು ಹಾಕುತ್ತಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆ ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿಯವರನ್ನ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿದ್ದ ಡಾ.ಗೌತಮ್ ಬಗಾದಿಯವರನ್ನ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.

ಇನ್ನು, ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ನಿರ್ದೇಶಕರಾಗಿ (ಇ– ಆಡಳಿತ) ವರ್ಗಾವಣೆ ಮಾಡಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲಕ್ಷ್ಮೀಕಾಂತ ರೆಡ್ಡಿಯವರನ್ನ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ನೇಮಿಸಲಾಗಿದೆ.

 

The post ಒಬ್ಬ ವ್ಯಕ್ತಿಯಿಂದ ಹಾಳಾಗಿದ್ದ ವಾತಾವರಣ ಸರಿ ಹೋಗಿದೆ -ಶಿಲ್ಪಾ ನಾಗ್ appeared first on News First Kannada.

Source: newsfirstlive.com

Source link