ಒಮಿಕ್ರಾನ್​​​ಗೆ ನೀಡಬೇಕಾದ ಲಸಿಕೆ ಬಗ್ಗೆ ರಾಹುಲ್​ ಗಾಂಧಿ ಹೇಳಿದ್ದೇನು?


ದೇಶದಲ್ಲಿ ಮಾರಕ ಕೊರೋನಾ ವೈರಸ್​​ ರೂಪಾಂತರಿ ಒಮಿಕ್ರಾನ್​ ಆತಂಕ ಹೆಚ್ಚಿಸಿದೆ. ಹೀಗಾಗಿ ಒಮಿಕ್ರಾನ್​​ಗೂ ಕೋವ್ಯಾಕ್ಸಿನ್​​ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಕಡ್ಡಾಯ ಆದೇಶ ಹೊರಡಿಸಿದೆ. ಈ ಸಂಬಂಧ ಮಾತಾಡಿರುವ ಕಾಂಗ್ರೆಸ್​ ವರಿಷ್ಠ ರಾಹುಲ್​​ ಗಾಂಧಿ, ಒಮಿಕ್ರಾನ್​​ ವಿರುದ್ಧ ನಮ್ಮ ಲಸಿಕೆಗಳು ಕೆಲಸ ಮಾಡ್ತಿಲ್ಲ. ಯಾವ ಲಸಿಕೆ ನೀಡುತ್ತಿದ್ದೇವೆ ಎಂಬ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇರಬೇಕು ಎಂದಿದ್ದಾರೆ.

ಈಗ ಕಾಣಿಡಿಕೊಂಡಿರುವುದು ಒಮಿಕ್ರಾನ್​​, ಕೊರೋನಾದ ರೂಪಾಂತರಿ. ಕೊರೋನಾ ಲಸಿಕೆ ಒಮಿಕ್ರಾನ್​​ ಲಸಿಕೆಗಿಂತಲೂ ಭಿನ್ನ ಇರಲಿದೆ. ನನಗೆ ಬಂದ ಮಾಹಿತಿ ಪ್ರಕಾರ ಕೊರೋನಾ ವ್ಯಾಕ್ಸಿನ್​​​​ ಒಮಿಕ್ರಾನ್​​ಗಲ್ಲ. ಇದು ಪರಿಣಾಮಕಾರಿಯಾಗಿ ಕೆಲಸ ಮಾಡೋದಿಲ್ಲ ಎಂದು ವ್ಯಾಕ್ಸಿನ್​​ ಬಗ್ಗೆ ರಾಹುಲ್​ ಗಾಂಧಿ ಅನುಮಾನ ವ್ಯಕ್ತಪಡಿಸಿದರು.

News First Live Kannada


Leave a Reply

Your email address will not be published. Required fields are marked *