ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ರೂಪಾಂತರಿ ತಳಿ ಪತ್ತೆಯಾಗಿದ್ದು ಜನರು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬೆಂಗಳೂರಿನ ಇಬ್ಬರಿಗೆ ಒಮಿಕ್ರಾನ್ ದೃಢಪಟ್ಟಿದ್ದು ಒಬ್ಬರು ಸದ್ಯ ದುಬೈಗೆ ತೆರಳಿದ್ದಾರೆ ಆದ್ರೆ ಅವರ ಸಂಪರ್ಕದಕಲ್ಲಿದ್ದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಿಗೆ ನೆಗೆಟಿವ್ ಇದೆ. ಇನ್ನು ಬೆಂಗಳೂರಿನ ವೈದ್ಯರೊಬ್ಬರಿಗೆ ಪಾಸಿಟಿವ್ ಬಂದಿದ್ದು ಅವರ ಸಂಪರ್ಕದಲ್ಲಿದ್ದ ಒಟ್ಟು 5 ಜನರಿಗೆ ಪಾಸಿಟಿವ್ ಇರೋದು ಕಂಡು ಬಂದಿದೆ. ಸದ್ಯ ಅವರ ಸ್ಯಾಂಪಲ್ಗಳನ್ನು ಜಿನೋಮ್ ಸಿಕ್ವೆನ್ಸಿಂಗ್ಗೆ ಕಳಿಸಲಾಗಿದ್ದು ಇಬ್ಬರಿಗೂ ಎರಡು ಡೋಸ್ ಲಸಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಒಬ್ಬ ವ್ಯಕ್ತಿಗೆ ಟ್ರಾವೆಲ್ ಹಿಸ್ಟರಿ ಇರಲಿಲ್ಲ..
ಆಫ್ರಿಕಾದಿಂದ ಬಂದವರಿಗೆ ಪ್ರಯಾಣದ ಹಿಸ್ಟರಿ ಇತ್ತು ಆದ್ರೆ ವೈದ್ಯರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಆದರು ದೇಹದಲ್ಲಿ ಸುಸ್ತು ಕಾಣಿಸಿಕೊಂಡಿದೆ ಆಗ ಟೆಸ್ಟ್ ಮಾಡಿಸಿದಾಗ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಸದ್ಯ ಈ ಸಂಪರ್ಕಿತರನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವಿಶೇಷ ಆರೈಕೆಯೊಂದಿಗೆ ಐಸೋಲೇಟ್ ಮಾಡಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಇವರಿಗೆ ಯಾವುದೇ ತೀವ್ರತರವಾದ ಲಕ್ಷಣಗಳಿಲ್ಲ ಆರಾಮಾಗಿದ್ದಾರೆ ಎಂದಿದ್ದಾರೆ.
ಇನ್ನು ಜನರು ಈ ಕುರಿತು ಯಾವುದೇ ಭಯ ಪಡುವ ಅಗತ್ಯವಿಲ್ಲ ಯಾಕಂದ್ರೆ ಈ ಹಿಂದಿನ ತಳಿ ಡೆಲ್ಟಾದಲ್ಲಿ ರೋಗಲಕ್ಷಣಗಳು ತೀವ್ರವಾಗಿದ್ದು ಈ ತಳಿಯಲ್ಲಿ ಸದ್ಯ ಅಂತಹ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಮುಂಜಾಗೃತ ಕ್ರಮವಾಗಿ ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಭಾಗವಹಿಸುವುದನ್ನ ನಿಯಂತ್ರಿಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.