ಬೆಂಗಳೂರು: ರಾಜ್ಯಕ್ಕೆ ಕೋವಿಡ್ ರೂಪಾಂತರಿ ತಳಿ ಓಮಿಕ್ರಾನ್ ಕಾಲಿಟ್ಟಿರೊ ಹಿನ್ನೆಲೆ ಪಾಲಿಕೆ ಫುಲ್ ಅಲರ್ಟ್ ಆಗಿದ್ದು ತಾಂತ್ರಿಕ ಸಲಹಾ ಸಮಿತಿ ತಜ್ಞರು ನೀಡಿರೊ ಸಲಹೆಗಳನ್ನ ಜಾರಿಗೊಳಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ನ್ಯೂಸ್ಫಸ್ಟ್ ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದ್ದು ಜಿನೊಮ್ ಸೀಕ್ವೆನ್ಸಿಂಗ್ ಗೆ ಸ್ಯಾಂಪಲ್ ಕಳಿಸಿದಾಗಲೇ ಬಿಬಿಎಂಪಿ ಅಲರ್ಟ್ ಅಗಿದೆ. ಈ ಕುರಿತು ತಜ್ಞರ ಜೊತೆ ಹಲವು ಸಭೆಗಳನ್ನ ನಡೆಸಿದ್ದೇವೆಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಚಿಸಿದ್ದೇವೆ. ಹಿರಿಯ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಮಾನಿಟರ್ ಮಾಡುವ ಕೆಲಸ ಆಗ್ತಿದೆ. ವಿದೇಶದಿಂದ ಬರುವ ಪ್ರಯಾಣಿಕರಿಗೆ ಟೆಸ್ಟಿಂಗ್ ಮಾಡಿ ಕ್ವಾರಂಟೈನ್ ಕಡ್ಡಾಯ ಮಾಡ್ತೇವೆ.
ಇನ್ನು ಟೆಸ್ಟ್ ಮಾಡಿ ಸ್ಯಾಂಪಲ್ ಸಂಗ್ರಹಿಸಿ ಸೀಕ್ವೆನ್ಸಿಂಗ್ ಗೆ ಕಳಿಸಲಾಗ್ತಿದೆ ನಗರದಲ್ಲಿರುವ ಕಂಟೈನ್ಮೆಂಟ್ ಜೋನ್ ಗಳ ಮೇಲೆ ನಿಗಾವಹಿಸಲಾಗಿದೆ. ಕ್ಲಸ್ಟರ್ ಗಳಾದ್ರೆ ಅದ್ರ ಮೇಲೆ ಹೆಚ್ಚು ಗಮನಹರಿಸ್ತೇವೆ ಸಭೆ-ಸಮಾರಂಭಗಳು, ಪಾರ್ಟಿ, ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮಗಳನ್ನು ಜಾರಿ ಮಾಡುವಂತೆ ತಜ್ಞರು ಸೂಚಿಸಿದ್ದಾರೆ ಹೀಗಾಗಿ ಕೋವಿಡ್ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.