‘ಒಮಿಕ್ರಾನ್‌’ ಅಪ್ಪಿತಪ್ಪಿ ಬಂದ್ರೂ ಓಡಿಸೋದ್ಹೇಗೆ? ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಮಹತ್ವದ ಸಲಹೆ


ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್​ ಆತಂಕ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಹೈ ಅಲರ್ಟ್​ ಆಗಿದೆ. ರಾಜ್ಯಕ್ಕೆ ಒಮಿಕ್ರಾನ್​ ತಳಿ ಎಂಟ್ರಿ ಆಗದಂತೆ ಬ್ರೇಕ್​ ಹಾಕಲು ಇವತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್​ ಸರಣಿ ಸಭೆಗಳನ್ನ ನಡೆಸಿದ್ರು. ತಾಂತ್ರಿಕ ಸಲಹಾ ಸಮಿತಿ ಜೊತೆ ಮಹತ್ವದ ಸಭೆ ನಡೆಸಿ ಹೊಸ ರೂಪಾಂತರಿಯಿಂದ ಪಾರಾಗಲು ಕೆಲ ಸಲಹೆಗಳನ್ನ ಪಡೆದ್ರು.

ರಾಜ್ಯದಲ್ಲಿ ಆತಂಕ ಹುಟ್ಟಿಸಿದ ಕೊರೊನಾ ಒಮಿಕ್ರಾನ್​ ತಳಿ
ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿಯಿಂದ ಮಹತ್ವದ ಸಲಹೆ
ಎಲ್ಲೋ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಈ ತಳಿ ರಾಜ್ಯದಲ್ಲಿ ಆತಂಕ ಸೃಷ್ಟಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಹೈ ಅಲರ್ಟ್​ ಆಗಿದೆ. ಒಮಿಕ್ರಾನ್​ ರೂಪಾಂತರಿಗೆ ಬ್ರೇಕ್​ ಹಾಕಲು ಇವತ್ತು ಆರೋಗ್ಯ ಸಚಿವ ಡಾ. ಸುಧಾಕರ್​ ಸರಣಿ ಸಭೆಗಳನ್ನ ನಡೆಸಿದ್ರು. ಹೊಸ ರೂಪಾಂತರಿ ಒಮಿಕ್ರಾನ್ ತಳಿಯನ್ನ ಎದುರಿಸೋದೇಗೆ, ಅದಕ್ಕೆ ತಯಾರಿ ಏನು ಅನ್ನೊ ಬಗ್ಗೆ ತಜ್ಞರ ಜೊತೆ ಚರ್ಚಿಸಿ ಕೆಲ ಸಲಹೆಗಳನ್ನ ಪಡೆದುಕೊಂಡ್ರು..

ತಾಂತ್ರಿಕ ಸಮಿತಿ ಸಲಹೆಗಳು..

 • ಸಲಹೆ 01- ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಪಾಸಿಟಿವ್ ಬಂದ್ರೆ ಜೆನೊಮಿಕ್ಸ್ ಸಿಕ್ವೇನ್ಸ್​​ಗೆ ಒಳಪಡಿಸಿ
 • ಸಲಹೆ 02- 14 ದಿನಗಳ ಹಿಂದೆ ಬಂದಂತಹ ಅಂತರಾಷ್ಟ್ರೀಯ ಪ್ರಯಾಣಿಕರಿಗೆ RTPCR ಕಡ್ಡಾಯ
 • ಸಲಹೆ 03- ಬೌರಿಂಗ್ ಆಸ್ಪತ್ರೆಯಲ್ಲಿ ಕೊರೊನಾ ಒಮಿಕ್ರಾನ್ ಟ್ರೀಟ್‌ಮೆಂಟ್‌ಗೆ ಮೀಸಲಿಡಬೇಕು
 • ಸಲಹೆ 04- ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ರೋಗ ಲಕ್ಷಣವಿದ್ರೆ ಅಂತವರಿಗೆ ಪ್ರತ್ಯೇಕ ಚಿಕಿತ್ಸೆ
 • ಸಲಹೆ 05- ಯಾವುದೇ ರೀತಿಯ ಸರ್ಕಾರಿ ಸೌಲಭ್ಯ ಪಡೆಯಲು ವ್ಯಾಕ್ಸಿನ್ ಕಡ್ಡಾಯ ಮಾಡಬೇಕು
 • ಸಲಹೆ 06- ವಿದ್ಯುತ್, ನೀರು, ಸಿಲಿಂಡರ್, ಪೆಟ್ರೋಲ್​, ಡಿಸೇಲ್​ , ಪಿಂಚಣಿಗೆ ವ್ಯಾಕ್ಸಿನ್ ಕಡ್ಡಾಯ
 • ಸಲಹೆ 07- ಜನರು ಸಾರ್ವಜನಿಕ ಸ್ಥಳಗಳನ್ನು ಬಳಕೆ ಮಾಡಲು ಎರಡು ಡೋಸ್ ಕಡ್ಡಾಯ ಮಾಡಿ

ಇದಿಷ್ಟೇ ಅಲ್ಲ ಮೆಟ್ರೋ ಹಾಗೂ ಮಾಲ್‌ಗಳ ಪ್ರವೇಶಕ್ಕೂ ಲಸಿಕೆ ಕಡ್ಡಾಯಗೊಳಿಸಿ ಅಂತಾ ಸಲಹಾ ಸಮಿತಿ ತಿಳಿಸಿದೆ. ಅಲ್ಲದೆ ಜನದಟ್ಟಣೆ ಇರುವ ಪ್ರದೇಶದಲ್ಲಿ ಹೇಗೆ ಕೊರೊನಾ ಟೆಸ್ಟ್​ ಮಾಡಬೇಕು ಅದರ ರೂಪು ರೇಷೆ ಹೇಗಿರಬೇಕು ಅಂತಾನೂ ಸರ್ಕಾರಕ್ಕೆ ಸಲಹೆ ನೀಡಿದೆ.

ತಾಂತ್ರಿಕ ಸಮಿತಿ ಸಲಹೆಗಳು

 • ಸಲಹೆ 07- ಮೆಟ್ರೋ, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್‌, ಪಡಿತರ ಬಳಕೆಗೆ ಲಸಿಕೆ ಕಡ್ಡಾಯ
 • ಸಲಹೆ 08- ಜನಸಂದಣಿ, ಜನದಟ್ಟಣೆ ಇರುವ ಪ್ರದೇಶದಲ್ಲಿ ರ್ಯಾಂಡಮ್ ಟೆಸ್ಟಿಂಗ್ ಕಡ್ಡಾಯ
 • ಸಲಹೆ 09- ವಾರಕ್ಕೆ ಕನಿಷ್ಟವಾದರೂ 5% ಮಕ್ಕಳಿಗೆ ಕೋವಿಡ್ ಪರೀಕ್ಷೆ ನಡೆಸಬೇಕು
 • ಸಲಹೆ 10- ನಿರಂತರವಾಗಿ ಶಿಕ್ಷಕರು ಹಾಗೂ ಮಕ್ಕಳಿಗೆ ಕೋವಿಡ್ ಪರೀಕ್ಷೆ ನಡೆಸಬೇಕು
 • ಸಲಹೆ 11- ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ 500ಕ್ಕಿಂತ ಕಡಿಮೆ ಜನರಿಗೆ ಅವಕಾಶ ಕೊಡಿ
 • ಸಲಹೆ 12- ಒಳಾಂಗಣ ಕಾರ್ಯಕ್ರಮಗಳಿಗೆ ಕೇವಲ 200 ಮಂದಿಗೆ ಮಾತ್ರ ಅವಕಾಶ ಕೊಡಿ
 • ಸಲಹೆ 13- ಮಾಲ್, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಲಾಡ್ಜ್‌ಗಳಲ್ಲಿ ಲಸಿಕಾ ಅಭಿಯಾನ ನಡೆಸಿ
 • ಸಲಹೆ 14- ಸೋಷಿಯಲ್ ಮೀಡಿಯಾ, ಸುದ್ದಿ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸಿ
 • ಸಲಹೆ 15- ಲಾಕ್‌ಡೌನ್, ಒಮಿಕ್ರಾನ್ ಸಾವು ಕುರಿತಾದ ಸುಳ್ಳು ಸುದ್ದಿ ಹರಡುವುದನ್ನು ತಡೆಗಟ್ಟಿ

ಹೀಗೆ ಒಮಿಕ್ರಾನ್​ ಸೇರಿದಂತೆ ಹೊಸ ರೂಪಾಂತರಿಗಳಿಂದ ಪಾರಾಗಲು ಹಾಗೂ ಅದಕ್ಕೆ ಬ್ರೇಕ್​ ಹಾಕಲು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಕೆಲ ಮಹತ್ವದ ಸಲಹೆಗಳನ್ನ ನೀಡಿದೆ. ಲಸಿಕೆಗೆ ಸಾಕಷ್ಟು ಒತ್ತು ಕೊಡುವ ಮೂಲಕ ರೂಪಾಂತರಿಗಳಿಗೆ ಲಸಿಕೆಯೇ ಮೊದಲ ಮದ್ದು ಅಂತಾ ಹೇಳಿದೆ. ಸದ್ಯ ಸರ್ಕಾರ ಸಲಹಾ ಸಮಿತಿ ನೀಡಿರುವ ಯಾವೆಲ್ಲಾ ಸಲಹೆಗಳನ್ನ ಅನುಷ್ಠಾನಕ್ಕೆ ತರುತ್ತೆ ಅನ್ನೋದೆ ಸದ್ಯದ ಪ್ರಶ್ನೆ.

ವಿಶೇಷ ವರದಿ: ಮಧುಸೂಧನ್​ ನ್ಯೂಸ್​ ಫಸ್ಟ್​, ಬೆಂಗಳೂರು

News First Live Kannada


Leave a Reply

Your email address will not be published. Required fields are marked *