ಒಮಿಕ್ರಾನ್ ಆತಂಕ; ಬೆಂಗಳೂರಲ್ಲಿ ಮತ್ತೆ ಥಿಯೇಟರ್​, ಮಾಲ್ ಬಂದ್ ಆಗ್ತಾವಾ?


ಬೆಂಗಳೂರು: ಒಮಿಕ್ರಾನ್ ಆತಂಕ ಹಿನ್ನೆಲೆಯಲ್ಲಿ ಮತ್ತೆ ಸಿನಿಮಾ ಥಿಯೇಟರ್, ಮಾಲ್​​ಗಳು ಬಂದ್ ಆಗುತ್ತವಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಈಗಷ್ಟೇ ಸಿನಿ ಜಗತ್ತಿಗೆ ಹೊಸ ಕಳೆ ಬಂದಿತ್ತು, ಆದರೆ ಮತ್ತೆ ಕೊರೊನಾ ಉಲ್ಬಣ ಹಿನ್ನೆಲೆಯಲ್ಲಿ ಮತ್ತೆ ಮನರಂಜನೆಗೆ ಹೊಡೆತ ಬೀಳುತ್ತಾ ಅನ್ನೋ ಪ್ರಶ್ನೆ ಉದ್ಭವ ಆಗಿದೆ.

ಈ ವಿಚಾರಕ್ಕೆ ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ.. ಸಿನೆಮಾ, ಮಾಲ್​ಗಳಿಗೆ ಕಡಿವಾಣ ಹಾಕುವ ಬಿಬಿಎಂಪಿ ಮುಂದೆ ಇಲ್ಲ. ಸರ್ಕಾರಕ್ಕೆ ಈ ಬಗ್ಗೆ ನಾವು ಯಾವುದೇ ಪ್ರಸ್ತಾವನೆಯನ್ನೂ ಸಲ್ಲಿಸಿಲ್ಲ. ಸರ್ಕಾರದ ಆದೇಶವನ್ನ ಪಾಲನೆ ಮಾಡುವ ಕೆಲಸ ಮಾಡುತ್ತಿದ್ದೀವಿ ಎಂದು ಗೌರವ್ ಗುಪ್ತಾ ತಿಳಿಸಿದ್ದಾರೆ.

ಕೋವಿಡ್ ಪ್ರಕರಣಗಳು ನಗರದಲ್ಲಿ 150ರ ಆಸುಪಾಸು ಬರ್ತಿದೆ. ಮಾಸ್ಕ್ ಹಾಕುವುದು, ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯವಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಪಾಲಿಕೆ ನಿರ್ಧಾರ ಕೈಗೊಳ್ಳಲಿದೆ. ಸೋಂಕಿನ ಪ್ರಮಾಣ ಹೆಚ್ಚಾದರೆ ಮಾತ್ರ ನಿರ್ಬಂಧದ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ಒಮಿಕ್ರಾನ್’ ಯಾವ ರಕ್ತದ ಗುಂಪಿನವ್ರ ಮೇಲೆ ಹೆಚ್ಚು ಅಟ್ಯಾಕ್ ಮಾಡುತ್ತಂತೆ ಗೊತ್ತಾ..?

The post ಒಮಿಕ್ರಾನ್ ಆತಂಕ; ಬೆಂಗಳೂರಲ್ಲಿ ಮತ್ತೆ ಥಿಯೇಟರ್​, ಮಾಲ್ ಬಂದ್ ಆಗ್ತಾವಾ? appeared first on News First Kannada.

News First Live Kannada


Leave a Reply

Your email address will not be published. Required fields are marked *