ಏಷ್ಯಾ-ಪೆಸಿಫಿಕ್ ರಾಷ್ಟ್ರಗಳು ತಮ್ಮ ಆರೋಗ್ಯ ಕ್ಷೇತ್ರಗಳ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಕರೆ ನೀಡಿದೆ.
ಮುಂದಿನ ದಿನಗಳಲ್ಲಿ ಒಮಿಕ್ರಾನ್ ಕೊರೊನಾ ಸೋಂಕಿನ ಮತ್ತಷ್ಟು ತೀವ್ರತೆ ಎದುರಿಸಲು ಸಿದ್ಧರಾಗಿ, ಓಮಿಕ್ರಾನ್ ರೂಪಾಂತರ ತಡೆಗಟ್ಟುವಲ್ಲಿ ಕ್ರಮ ಕೈಗೊಳ್ಳಬೇಕಿದೆ. ಇದಕ್ಕಾಗಿ ರೋಗದ ತೀವ್ರತೆ ತಡೆಗಟ್ಟಲು ಜನರಿಗೆ ಲಸಿಕೆ ಹಾಕಬೇಕು ಎಂದು ಒಮಿಕ್ರಾನ್ ಭೀತಿ ಎದುರಿಸುತ್ತಿರುವ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಮುನ್ನೆಚ್ಚರಿಕೆ ನೀಡಿದೆ.
ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಒಮಿಕ್ರಾನ್ ರೂಪಾಂತರಿ ಪತ್ತೆಯಾಗಿತ್ತು. ಆ ಬಳಿಕ ಒಮಿಕ್ರಾನ್ ಸೃಷ್ಟಿಸುವ ತೀವ್ರತೆ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ಈಗಾಗಲೇ ಕನಿಷ್ಠ 30ಕ್ಕೂ ಹೆಚ್ಚು ದೇಶಗಳಲ್ಲಿ ಒಮಿಕ್ರಾನ್ ವರದಿಯಾಗಿದ್ದು, ಆಸ್ಟ್ರೇಲಿಯಾ, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್, ಮಲೇಷ್ಯಾ ಸೇರಿದಂತೆ ಭಾರತದಲ್ಲೂ ಒಪಿಕ್ರಾನ್ ವೈರಸ್ ವರದಿಯಾಗಿದೆ. ಆದ್ದರಿಂದ ಒಮಿಕ್ರಾನ್ ಬಗ್ಗೆ ಹೆಚ್ಚಿನ ನಿಗಾ ಕೈಗೊಳ್ಳಲು WHO ಹೇಳಿದೆ.
The post ಒಮಿಕ್ರಾನ್ ಎದುರಿಸೋಕೆ ಸಜ್ಜಾಗಿ -ಏಷ್ಯಾ-ಪೆಸಿಫಿಕ್ ರಾಷ್ಟ್ರಗಳಿಗೆ WHO ಕರೆ appeared first on News First Kannada.