ಒಮಿಕ್ರಾನ್ ಭೀತಿ.. ಪತ್ನಿ, ಇಬ್ಬರು ಮಕ್ಕಳನ್ನ ಕೊಂದ ವೈದ್ಯ..!


ನವದೆಹಲಿ: ಉತ್ತರ ಪ್ರದೇಶದಲ್ಲಿ ಒಮಿಕ್ರಾನ್ ಭಯದಿಂದ ವೈದ್ಯನೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಹತ್ಯೆಗೈದಿದ್ದಾನೆ.

ಉತ್ತರ ಪ್ರದೇಶದ ಕಾನ್ಪುರದ ಇಂದಿರಾನಗರ ಬಡಾವಣೆಯಲ್ಲಿ ಈ ರೀತಿ ವಿಲಕ್ಷಣ ಘಟನೆ ನಡೆದಿದೆ. ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್‌ ಹಾಗೂ ವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾಕ್ಟರ್ ಸುಶಿಕುಮಾರ್ ಒಮಿಕ್ರಾನ್​​​ನಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದ. ಚಂದ್ರಪ್ರಭಾ (50), ಪುತ್ರ ಶಿಖರ್ ಸಿಂಗ್ (21) ಮತ್ತು ಪುತ್ರಿ ಖುಷಿ ಸಿಂಗ್ (16) ಕೊಲೆಯಾದವರು.

ಒಮಿಕ್ರಾನ್ ಭೀತಿಯಲ್ಲೇ ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನ ಕೊಂದು ಎಸ್ಕೇಪ್ ಆಗಿದ್ದಾನೆ. ಅಲ್ಲದೇ ಈ ಬಗ್ಗೆ ತನ್ನ ಸಹೋದರನಿಗೆ ಸಂದೇಶ ಕಳಿಸಿದ್ದು, ನಾನು ಒಮಿಕ್ರಾನ್​​ನಿಂದ ಖಿನ್ನತೆಗೆ ಒಳಗಾಗಿ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ ಅಂತಾ ವರದಿಯಾಗಿದೆ.

News First Live Kannada


Leave a Reply

Your email address will not be published. Required fields are marked *