ಒಮಿಕ್ರಾನ್ 2 ಕೇಸ್ ಪತ್ತೆಯಾಗಿದೆ, ಇನ್ನೂ 5 ಕೇಸ್​ ರಿಸಲ್ಟ್​ ಬರಬೇಕು -ಡಾ.ಕೆ.ಸುಧಾಕರ್


ಬೆಂಗಳೂರು: ಆರೋಗ್ಯ ಸೌಧದಲ್ಲಿ ವೈದ್ಯಕೀಯ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​​ ಮೂಲಕ ಸಭೆ ನಡೆಸಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್​​, ಒಮಿಕ್ರಾನ್​ ಎದುರಿಸಲು ಯಾವುದೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ಸಭೆಯಲ್ಲಿ 21 ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಜೊತೆಗೆ ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್ ಅವರು, ಸಭೆಯಲ್ಲಿ ಒಮಿಕ್ರಾನ್​ ರೂಪಾಂತರಿಯನ್ನು ಎದುರಿಸಲು ಕೆಲವು ಸಲಹೆ ಸೂಚನೆ ‌ಕೊಡುವುದಾಗಿದೆ. ಇದುವರೆಗೂ ರಾಜ್ಯದಲ್ಲಿ ಎರಡು ಕೇಸ್​​ ಪತ್ತೆಯಾಗಿದ್ದು, ಇನ್ನು ಐದು ಕೇಸ್​​ ರಿಸಲ್ಟ್ ಬರಬೇಕು. ಮುಂದಿನ ಎರಡು ತಿಂಗಳು ಹೇಗೆ ಸಿದ್ಧವಾಗಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವು.

ಫೋನ್ ಸ್ವಿಚ್​ ಆಫ್ ಮಾಡಿದ್ರೆ ಪೊಲೀಸರು ಸ್ಟ್ರಾಂಗ್ ಆಗಿದ್ದಾರೆ
2 ಕೇಸ್ ಪತ್ತೆಯಾಗಿದೆ, ಇನ್ನೂ 5 ಕೇಸ್​ ರಿಸಲ್ಟ್​ ಬರಬೇಕು. ಮುಂದಿನ 2 ತಿಂಗಳು ನಮಗೆ ಬಹಳ ನಿರ್ಣಾಯಕವಾಗಿದ್ದು, ಸೋಂಕು ತಡೆಗೆ ಮೆಡಿಕಲ್ ಕಾಲೇಜುಗಳ ಅಗತ್ಯ ಇದೆ. ಹಿರಿಯ ವೈದ್ಯರು ಜವಾಬ್ದಾರಿ ನಿರ್ವಹಿಸಬೇಕಿದೆ. 18 ಸಾವಿರ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿದ್ದಾರೆ. ತರಬೇತಿ ನೀಡಿ ಸೋಂಕು ತಡೆಗೆ ಬಳಸಿಕೊಳ್ಳುತ್ತೇವೆ. ವೈದ್ಯಕೀಯ ಸಂಸ್ಥೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 21 ಜಿಲ್ಲೆಗಳಲ್ಲಿ ಪರಿಣಾಮಕಾರಿ ಚಿಕಿತ್ಸೆ, ಎಷ್ಟು ಐಸೊಲೇಷನ್ ಬೆಡ್​ ಬೇಕು ಎಂಬ ಬಗ್ಗೆ ಚರ್ಚೆ ಮಾಡಲಾಯಿತು. ವಿದೇಶದಿಂದ ಬಂದು ಎಲ್ಲರಿಗೂ ತಪಾಸಣೆ, ವಿದೇಶದಿಂದ ಬಂದವರು ಸಹಕಾರ ನೀಡಬೇಕು. ಫೋನ್​ ರಿಸೀವ್​ ಮಾಡದೇ ತಪ್ಪಿಸಿಕೊಳ್ಳಬಾರದು. ಸೋಂಕು ತಡೆಗೆ ಸರ್ಕಾರದೊಂದಿಗೆ ಸಹಕರಿಸಿ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಮನವಿದರು.

ನಮಗೆ ಮೆಡಿಕಲ್ ‌ಕಾಲೇಜ್ ಬಹಳ ಮುಖ್ಯ. ಹಿರಿಯ ವೈದ್ಯರು ‌ಜವಾಬ್ದಾರಿಯಿಂದ ವರ್ತಿಸಬೇಕು. ದಾದಿಯರ ಸೇವೆ ಮುಖ್ಯ. ಪ್ಯಾರಾ ಮೆಡಿಕಲ್ ಮಾಡುವ 18 ಸಾವಿರ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಟ್ರೈನಿಂಗ್ ಕೊಡಲಾಗುತ್ತದೆ. ಅವರನ್ನು ಇದಕ್ಕೆ ಬಳಕೆ‌ ಮಾಡಿಕೊಳ್ಳಲು ತಯಾರಿ ಮಾಡಲಾಗುತ್ತದೆ. ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆ ಮಾಡಿಕೊಳ್ಳುತ್ತಿದ್ದಾರೆ.

ಗೃಹ ವೈದ್ಯರಿಗೆ ಕೋವಿಡ್ ರಿಸ್ಕ್ ಅಲೋಯನ್ಸ್ ಇದುವರೆಗೂ ಸಿಕ್ಕಿಲ್ಲ. ಒಟ್ಟು 73 ಕೋಟಿ ರೂಪಾಯಿ ಕೊಡಬೇಕು. 21 ಜಿಲ್ಲೆಗಳಲ್ಲಿ ಪರಿಣಕಾರಿಯಾಗಿ ಹೇಗೆ ಚಿಕಿತ್ಸೆ ನೀಡಬೇಕು ಎಂಬ ಚರ್ಚೆ ನಡೆಸಲಾಗಿದೆ. ಎಷ್ಟು ಐಸೋಲೇಷನ್ ಬೆಡ್ ಬೇಕು..? ಡೆಲ್ಟಾ ವೈರಸ್ ನಿಂದ ಬಂದವರಿಗೂ ಹಾಗೂ ಒಮಿಕ್ರಾನ್ ವೈರಸ್ ಬಂದವರನ್ನ ಬೇರ್ಪಡಿಸಬೇಕಾ..? ಎಂಬ ಬಗ್ಗೆಯೂ ಇದೇ ವೇಳೆ ಸಲಹೆ ಪಡೆದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

The post ಒಮಿಕ್ರಾನ್ 2 ಕೇಸ್ ಪತ್ತೆಯಾಗಿದೆ, ಇನ್ನೂ 5 ಕೇಸ್​ ರಿಸಲ್ಟ್​ ಬರಬೇಕು -ಡಾ.ಕೆ.ಸುಧಾಕರ್ appeared first on News First Kannada.

News First Live Kannada


Leave a Reply

Your email address will not be published. Required fields are marked *