ಒರಿಯೋ ಬಿಸ್ಕೆಟ್​ನಿಂದ​ ಪಕೋಡಾ ತಯಾರಾಯ್ತು! ವಿಲಕ್ಷಣ ಆಹಾರ ಸಂಯೋಜನೆ ನೋಡಿ ಮೂಗು ಮುರಿದ ನೆಟ್ಟಿಗರು | Ahmedabad man sells oreo pakoda video goes viral in social media


ಒರಿಯೋ ಬಿಸ್ಕೆಟ್​ನಿಂದ​ ಪಕೋಡಾ ತಯಾರಾಯ್ತು! ವಿಲಕ್ಷಣ ಆಹಾರ ಸಂಯೋಜನೆ ನೋಡಿ ಮೂಗು ಮುರಿದ ನೆಟ್ಟಿಗರು

ಓರಿಯೊ ಬಿಸ್ಕೆಟ್ ಪಕೋಡ

ಕೆಲವರು ಹೊಸ ಹೊಸ ರೆಸಿಪಿಗಳ ರುಚಿ ಸವಿಯಲು ಕಾತುರಾಗಿರುತ್ತಾರೆ. ಕೆಲವೊಮ್ಮೆ ವಿಲಕ್ಷಣ ಆಹಾರ ಸಂಯೋಜನೆಗಳು ಹೆಚ್ಚು ಇಷ್ಟವಾಗುವುದಿಲ್ಲ. ಇದೀಗ ವೈರಲ್ ಆದ ವಿಡಿಯೊದಲ್ಲಿ ವ್ಯಾಪಾರಿಯು ಒರಿಯೊ ಬಿಸ್ಕೆಟ್​ನಿಂದ ಪಕೋಡಾ ತಯಾರಿಸಿ ಮಾರಾಟ ಮಾಡಿದ್ದಾನೆ. ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ. ಕೆಲವರು ಈ ವಿಲಕ್ಷಣ ಆಹಾರ ಸಂಯೋಜನೆ ನೋಡಿ ಮೂಗು ಮುರಿದಿದ್ದಾರೆ.

ಇಲ್ಲಿಯವರೆಗೆ ಆಲೂಗಡ್ಡೆ, ಮೆಣಸು, ಈರುಳ್ಳಿಯಲ್ಲಿ ಪಕೋಡಾ ತಿಂದಿರಬಹುದು. ಆದರೆ ಎಂದಾದರೂ ಒರಿಯೊ ಬಿಸ್ಕೆಟ್​ನಿಂದ ತಯಾರಿಸಿದ ಪಕೋಡಾ ಸವಿದಿದ್ದೀರಾ? ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಸುದ್ದಿಯಲ್ಲಿದೆ ಒರಿಯೊ ಪಕೋಡ. ವಿಡಿಯೊದಲ್ಲಿ ಗಮನಿಸುವಂತೆ ವ್ಯಾಪಾರಿಯು ಒರಿಯೊ ಪ್ಯಾಕೇಟ್ ತೆಗೆದು ಬಿಸ್ಕೆಟ್​ಗಳನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ ಬಂಡಿಗೆ ಬಿಟ್ಟಿದ್ದಾರೆ. ಕಾದ ಎಣ್ಣೆಯಲ್ಲಿ ಕರಿದ ನಂತರ ಬಂಡಿಯಿಂದ ಒರಿಯೋ ಪಕೋಡಾವನ್ನು ತೆಗೆದಿದ್ದಾರೆ.

ವಿಡಿಯೊವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಗುಜರಾತ್​ನ ಅಹಮದಾಬಾದ್​ನಿಂದ ಒರಿಯೋ ಬಿಸ್ಕೆಟ್ ರೆಸಿಪಿ ವೈರಲ್ ಆಗುತ್ತಿದೆ. ಈ ವಿಡಿಯೊ ಮೂರು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಕೆಲವರು ತಮಾಷೆ ಮಾಡಿದ್ದರೆ ಇನ್ನು ಕೆಲವರು ವಿಲಕ್ಷಣ ಆಹಾರ ಸಂಯೋಜನೆ ಕಂಡು ಮೂಗು ಮುರಿದಿದ್ದಾರೆ.

ಈ ಕಣ್ಣಲ್ಲಿ ಏನೇನ್ ನೋಡ್ಬೇಕೋ ಏನೋ ಎಂದು ಓರ್ವರು ಪ್ರತಿಕ್ರಿಯೆ ನೀರಿದ್ದರೆ, ಇನ್ನು ಕೆಲವರು ಅಹಮದಾಬಾದ್​ನ ಯಾವ ಸ್ಥಳದಲ್ಲಿ ಮಾರಾಟ ಮಾಡಲಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ. ಈ ವಿಲಕ್ಷಣ ರೆಸಿಪಿ ನೋಡಿ ನನಗೆ ವಾಕರಿಕೆ ಬರುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಮನಿಕೆ ಮಗೆ ಹಿತೆ ಹಾಡಲು ಪ್ರಯತ್ನಿಸಿದ ವ್ಯಕ್ತಿ! ವಿಡಿಯೊ ಮಜವಾಗಿದೆ ನೀವೇ ನೋಡಿ

Viral Video: ಲಿಫ್ಟ್​ನೊಳಗೆ ಸಿಲುಕಿಕೊಂಡು ನೇತಾಡುತ್ತಿದ್ದ ನಾಯಿ ಮರಿಯ ಜೀವ ಉಳಿಸಿದ ಡೆಲಿವರಿ ಬಾಯ್; ವಿಡಿಯೊ ನೋಡಿ

TV9 Kannada


Leave a Reply

Your email address will not be published.