ಇದೇ ಮೊದಲ ಬಾರಿಗೆ ಒಲಿಂಪಿಕ್ಸ್​​ ಕ್ರೀಡಾಕೂಟದಲ್ಲಿ ತೃತೀಯ ಲಿಂಗಿಯೊಬ್ಬರು ಆಯ್ಕೆಯಾಗಿದ್ದಾರೆ. ನ್ಯೂಜಿಲೆಂಡ್​ನ 43 ವರ್ಷದ ವೇಯ್ಟ್​ ಲಿಫ್ಟರ್ ಲಾರೆಲ್ ಹಬ್ಬಾರ್ಡ್, ಮಹಿಳೆಯರ 87 ಕೆ.ಜಿ ವಿಭಾಗದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಈ ಮೂಲಕ ಅವರು ಒಲಿಂಪಿಕ್ಸ್​ನಲ್ಲಿ ಪಾಲ್ಗೊಂಡ ಮೊದಲ ಟ್ರಾನ್ಸ್​ಜೆಂಡರ್ ಅಥ್ಲೀಟ್​ ಎಂಬ ಇತಿಹಾಸ ನಿರ್ಮಿಸಲಿದ್ದಾರೆ.

ವಿಶೇಷವೆಂದ್ರೆ ಲಾರೆಲ್ ಪುರುಷ ಕ್ರೀಡಾಪಟುವಾಗಿ ವೇಟ್ಲಿಫ್ಟ್ ವೃತ್ತಿಜೀವನಕ್ಕೆ ಕಾಲಿಟ್ಟಿದ್ದು, ತಮ್ಮ 35ನೇ ವಯಸ್ಸಿಗೆ ಲಿಂಗ ಬದಲಾವಣೆ ಮಾಡಿಕೊಂಡರು. ಈಗ ಮಹಿಳೆಯರ ವಿಭಾಗದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಹಾಗೂ ಐಒಸಿ ಸಮಿತಿ ನಿಗದಿಪಡಿಸಿದ ಎಲ್ಲಾ ಮಾನದಂಡಗಳನ್ನ ಲಾರೆಲ್ ಯಶಸ್ವಿಯಾಗಿ ಮುಗಿಸಿದ್ದಾರೆ.

The post ಒಲಿಂಪಿಕ್ಸ್​ಗೆ ಆಯ್ಕೆಯಾದ ಮೊದಲ ತೃತೀಯ ಲಿಂಗಿ ಅಥ್ಲೀಟ್ appeared first on News First Kannada.

Source: newsfirstlive.com

Source link