ಒಳಗಿದ್ದಾಗ ಬಿಳಿ, ಹೊರಗಿದ್ದಾಗ ಗುಲಾಬಿ; ಎಲ್ಲ ಆ ಸೂರ್ಯನ ಕರಾಮತ್ತು! – Womans dress instantly changes from white to pink as she steps out in the Sun Watch intriguing viral video


Dress : ‘ರೀ ಮೇಡಮ್ಮೋರೆ, ನಿಮ್ಮ ಡ್ರೆಸ್​ನೊಳಗೆ ಯಾರೋ ಒಬ್ಬ ಮಹಾಶಯ ಅಡಗಿ ಕೂತಿದಾರೆ. ಅವರು ಸ್ಪೀಡಾಗಿ ಡ್ರೆಸ್ಸಿಗೆ ಬಣ್ಣಾ ಬಳೀತಿದಾರೆ, ಅಷ್ಟೇಯಾ…’ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ನಿಮಗೇನು ಅನ್ನಿಸುತ್ತದೆ ಈ ವಿಡಿಯೋ ನೋಡಿದಲ್ಲಿ.

ಒಳಗಿದ್ದಾಗ ಬಿಳಿ, ಹೊರಗಿದ್ದಾಗ ಗುಲಾಬಿ; ಎಲ್ಲ ಆ ಸೂರ್ಯನ ಕರಾಮತ್ತು!

Woman’s dress instantly changes from white to pink as she steps out in the Sun

Viral Video : ಒಳಗೊಂದು ಬಣ್ಣ ಹೊರಗೊಂದು ಬಣ್ಣ. ಬೇಕಾದಾಗ ಬೇಕಾದ ಬಣ್ಣವನ್ನು ಮೇಲೆಮಾಡಿ ತೊಡಬಹುದಾದಂಥ ಬಟ್ಟೆಗಳ ಬಗ್ಗೆ ನಿಮಗೆ ಗೊತ್ತಿದೆ. ಆದರೆ ನೆರಳಿನಲ್ಲಿದ್ದಾಗ ಒಂದು ಬಣ್ಣ, ಬಿಸಿಲಿಗೆ ಬಂದರೆ ಇನ್ನೊಂದು ಬಣ್ಣ. ಇಂತ ಡ್ರೆಸ್​ ನೀವು ನೋಡಿದ್ದೀರಾ? ಹಾಗಿದ್ದರೆ ಈ ವಿಡಿಯೋ ನೋಡಿ. ಇಜ್ಜಿ ಎನ್ನುವ ಕಲಾವಿದೆ ಇಂಥ ಮ್ಯಾಜಿಕ್​ ಡ್ರೆಸ್ ಅನ್ನು ತೊಟ್ಟಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ತಾನು ಖರೀದಿಸಿದ PH5 ಎಂಬ ಬ್ರ್ಯಾಂಡ್​ ಕೂಡ ಟ್ಯಾಗ್ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಇದೀಗ ವೈರಲ್ ಆಗಿದೆ. ಈತನಕ 25.6 ಮಿಲಿಯನ್​ ಜನರು ನೋಡಿದ್ದಾರೆ. 2.3 ಮಿಲಿಯನ್ ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

‘ವಾವ್ ಕೂಲ್​’ ಎಂದಿದ್ದಾರೆ ಒಬ್ಬರು. ‘ಎಲ್ಲಾ ಸುಳ್ಳು. ಈ ಡ್ರೆಸ್​ನೊಳಗೆ ಯಾರೋ ಒಬ್ಬ ವ್ಯಕ್ತಿ ಅಡಗಿ ಕುಳಿತಿದ್ದಾರೆ. ಅತ್ಯಂತ ಸ್ಪೀಡಾಗಿ ನಿಮ್ಮ ಉಡುಗೆಗೆ ಬಣ್ಣ ಹಚ್ಚುತ್ತಿದ್ದಾರೆ’ ಎಂದು ತಮಾಷೆ ಮಾಡಿದ್ದಾರೆ ಇನ್ನೊಬ್ಬರು. ‘ಇದು ನಿಜಕ್ಕೂ ಅಚ್ಚರಿ ಮತ್ತು ಅದ್ಭುತ’ ಎಂದು ಮಗದೊಬ್ಬರು ಮೆಚ್ಚಿದ್ದಾರೆ.

ಬೇಕಾ ನಿಮಗೂ ಇಂಥ ಡ್ರೆಸ್​?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.