ಕನ್ನಡದ ಲಾಂಛನದ ಚಿತ್ರ ಪ್ರಿಂಟ್ ಮಾಡಿರುವ ಮಹಿಳೆಯರ ಒಳ ಉಡುಪುಗಳನ್ನ ಮಾರಾಟಕ್ಕಿಡುವ ಮೂಲಕ ಅಮೆಜಾನ್ ಕನ್ನಡಿಗರ ಸ್ವಾಭಿಮಾನಕ್ಕೆ ಕುತ್ತು ತರ್ತಿದೆ ಎಂದು ಕನ್ನಡ ಪರ ಸಂಘಟನೆ ಅಮೆಜಾನ್ ವಿರುದ್ಧ ಕಿಡಿಕಾರಿದೆ. ಇಂಥ ಕೆಲಸ ಮಾಡಿರುವುದಕ್ಕೆ ಅಮೆಜಾನ್ ವೆಬ್​ಸೈಟ್​ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕರವೇ ನಾಯಕ ಪ್ರವೀಣ್ ಶೆಟ್ಟಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನಿನ್ನೆ ಗೂಗಲ್ ಇಂದು ಅಮೆಜಾನ್.. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಿ.. ಕನ್ನಡಿಗರ ಸ್ವಾಭಿಮಾನಕ್ಕೆ ಕನ್ನಡಿಗರ ಅಭಿಮಾನಕ್ಕೆ ಕುತ್ತು ತರ್ತಿದ್ದಾರೆ.. ಈ ಕೂಡಲೇ ಅವರ ವಿರುದ್ಧ ತಕ್ಕ ಕ್ರಮ ತೆಗೆದುಕೊಳ್ಳಬೇಕು.. ಇದಕ್ಕೆ ಬೇಕಾದ ಪ್ರತ್ಯೇಕ್ ಸೈಬರ್ ಸೆಲ್ ರಚಿಸಿ ಎಂದು ಮನವಿ ಮಾಡಿದ್ದಾರೆ. ಇದು ಹೀಗೇ ಮುಂದುವರೆದ್ರೆ ಮಚ್ಚಿನ ಚಳುವಳಿ ಶುರು ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

The post ಒಳ ಉಡುಪಿನ ಮೇಲೆ ಕನ್ನಡದ ಲಾಂಛನ: ಅಮೇಜಾನ್ ವಿರುದ್ಧ ಕಿಡಿಯಾದ ಕರವೇ appeared first on News First Kannada.

Source: newsfirstlive.com

Source link