ಕೊಪ್ಪಳ: ಕಾರಹುಣ್ಣಿಮೆ ಹಿನ್ನೆಲೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಎತ್ತಿನ ಓಟದ ಸ್ಪರ್ಧೆ ಏರ್ಪಿಡಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಕೊರೊನಾದ ನಡುವೆ ಕೂಡ ಎತ್ತಿನ ಓಟದ ಸ್ಪರ್ಧೆ ನಡೆಸಿ ಹಳ್ಳಿಗಳಲ್ಲಿ ಹಬ್ಬ ಆಚರಿಸಲಾಯ್ತು.

ಈ ವೇಳೆ ಹಲವೆಡೆ ಅವಘಡಗಳು ನಡೆದ್ವು ವೇಗವಾಗಿ ಓಡಿ ಬರುತ್ತಿದ್ದ ಎತ್ತುಗಳ ಕಾಲಿಗೆ ಸಿಲುಕಿ ಯುವಕನೊಬ್ಬ ಕೆಳಗೆ ಬಿದ್ದ ಘಟನೆ ಕೊಪ್ಪಳ ತಾಲೂಕು ತಿಗರಿ ಗ್ರಾಮದಲ್ಲಿ ಜರುಗಿದೆ. ಅದೃಷ್ಟ ವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

The post ಓಟದ ವೇಳೆ ಎತ್ತುಗಳ ಕಾಲಿಗೆ ಸಿಲುಕಿದ ಯುವಕ, ತಪ್ಪಿದ ಅನಾಹುತ appeared first on News First Kannada.

Source: newsfirstlive.com

Source link