ಓದಿದ್ದು 10ನೇ ತರಗತಿ..ಸತ್ತ ವ್ಯಕ್ತಿಯ ಹೆಸರಿನ ಮೇಲೆ ಟ್ರೀಟ್​ಮೆಂಟ್​..ಡುಪ್ಲಿಕೇಟ್​ ಡಾಕ್ಟರ್​ ಮೇಲೆ ಬಿತ್ತು ಕೇಸ್​


ಥಾಣೆ(ಮಹಾರಾಷ್ಟ್ರ): ಮೃತ ವೈದ್ಯನ ಪದವಿಯನ್ನು ಬಳಸಿಕೊಂಡು ನಗರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡ್ತಿದ್ದ ವ್ಯಕ್ತಿಯ ವಿರುದ್ಧ ಕೇಸ್​ ದಾಖಲಾಗಿದೆ.

ಏನಿದು ಪ್ರಕರಣ..?
55 ವರ್ಷದ ಆರೋಪಿ ವಿನೋದ್​ ರೈ ಎಂಬಾತ ಓದಿದ್ದು ಕೇವಲ 10 ನೇ ತರಗತಿ ಮಾತ್ರ. ಸತ್ತ ವೈದ್ಯರೊಬ್ಬರ ಪ್ರಮಾಣ ಪತ್ರಗಳು, ಹಾಗೂ ವೈದ್ಯಕೀಯ ಪದವಿ ಬಳಸಿಕೊಂಡಿದ್ದ ಈ ಆರೋಪಿ, ಆಸ್ಪತ್ರೆ ಇಟ್ಟುಕೊಂಡು ರೋಗಿಗಳಿಗೆ ಟ್ರೀಟ್​ಮೆಂಟ್​ ಮಾಡ್ತಾ ಇದ್ದ. ನಕಲಿ ವೈದ್ಯನಾಗಿದ್ದುಕೊಂಡು ಬರೋಬ್ಬರಿ 2 ವರ್ಷಗಳವರೆಗೆ ಈತ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾನೆ ಅಂದ್ರೆ ನೀವು ನಂಬಲೇ ಬೇಕು..

ಉಲ್ಲಾಸನಗರದ ವೈದ್ಯಾಧಿಕಾರಿಯೊಬ್ಬರು ತಪಾಸಣೆಯ ವೇಳೆ ಈತನ ಮಾಹಿತಿ ಸಂಗ್ರಹಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಬಂದ ಹಿನ್ನೆಲೆ ದಿಢೀರ್​ ದಾಳಿ ನಡೆಸಿದ ಪೊಲೀಸರು ಆಸ್ಪತ್ರೆಯನ್ನು ರೇಡ್​ ಮಾಡಿ ನಕಲಿ ವೈದ್ಯನ ಮೇಕೆ ಕೇಸ್​ ಜಡಿದಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 419 ಮತ್ತು 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನಿಗೆ ನೋಟಿಸ್ ಜಾರಿ ಮಾಡಿದ್ದು, ಇದುವರೆಗೆ ಯಾವುದೇ ಬಂಧನವಾಗಿಲ್ಲ ಎಂದು ತಿಳಿಸಿದ್ದಾರೆ.

 

News First Live Kannada


Leave a Reply

Your email address will not be published.