ಓಪನ್ ಆದ ದಿನವೇ ಬಂದ್ ಆಯ್ತು ಈ ಬಾರ್.. ರೊಚ್ಚಿಗೆದ್ದ ಗ್ರಾಮಸ್ಥರು ಮಾಡಿದ್ದೇನು..?

ಓಪನ್ ಆದ ದಿನವೇ ಬಂದ್ ಆಯ್ತು ಈ ಬಾರ್.. ರೊಚ್ಚಿಗೆದ್ದ ಗ್ರಾಮಸ್ಥರು ಮಾಡಿದ್ದೇನು..?

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಅಂಚೆ ಚೋಮನಹಳ್ಳಿ ಗ್ರಾಮಸ್ಥರು ಇಂದು ಏಕಾಏಕಿ ಬಾರ್ ಒಂದರ ಮುಂದೆ ಜಮಾಯಿಸಿದ್ದರು. ಹಾಗಂತ ಅವರು ಬೆಳ್ಳಂಬೆಳಗ್ಗೆ ಎಣ್ಣೆ ಖರೀದಿಸಲು ಬಂದಿರಲಿಲ್ಲ.. ಬದಲಿಗೆ ಬಾರ್​ನ ಬಾಗಿಲನ್ನೇ ಹಾಕಿಸಲು ಮುಂದಾಗಿದ್ದರು.

ಈ ಗ್ರಾಮದಲ್ಲಿ ಗ್ರಾ. ಪಂಚಾಯಿತಿ ಹಾಗೂ ಗ್ರಾಮಸ್ಥರ ಗಮನಕ್ಕೆ ಬಾರದಂತೆ ದಿಢೀರ್ ಬಾರ್ ತೆರೆಯಲು ಮಾಲೀಕ ಮುಂದಾಗಿದ್ದ ಎನ್ನಲಾಗಿದೆ. ಹೀಗಾಗಿ ಓಪನ್ ಆಗಿದ್ದ ಬಾರ್ ಬಂದ್ ಮಾಡಿಸಿ ಅಲ್ಲೇ ಕೂತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ನೆಮ್ಮದಿಯಾಗಿರುವ ಜನರನ್ನ ಕುಡುಕರನ್ನಾಗಿಸ್ತೀರ ಎಂದು ಬಾರ್ ಮಾಲೀಕರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

The post ಓಪನ್ ಆದ ದಿನವೇ ಬಂದ್ ಆಯ್ತು ಈ ಬಾರ್.. ರೊಚ್ಚಿಗೆದ್ದ ಗ್ರಾಮಸ್ಥರು ಮಾಡಿದ್ದೇನು..? appeared first on News First Kannada.

Source: newsfirstlive.com

Source link