ಓಮಿಕ್ರಾನ್​ ಆತಂಕ: ಬಟ್ಟೆಯ ಮಾಸ್ಕ್​ಗಳ ಬಳಕೆ ಬೇಡ ಎಂದ ತಜ್ಞರು | Experts says stop using the cloth mask to securing from omicron


ಓಮಿಕ್ರಾನ್​ ಆತಂಕ: ಬಟ್ಟೆಯ ಮಾಸ್ಕ್​ಗಳ ಬಳಕೆ ಬೇಡ ಎಂದ ತಜ್ಞರು

ಪ್ರಾತಿನಿಧಿಕ ಚಿತ್ರ

ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಮಾಸ್ಕ್​ನೊಂದಿಗೇ ಜೀವನ ನಡೆಸುವಂತಾಗಿದೆ. ಕಳೆದ ಕೆಲವು ದಿನಗಳಿಂದ ಕೊರೋನಾಗಿಂತ 10 ಪಟ್ಟು ವೇಗವಾಗಿ  ಹರಡುವ ಓಮಿಕ್ರಾನ್​ ಆತಂಕ ಹೆಚ್ಚಿಸಿದೆ. ಹೀಗಾಗಿ  ಮಾಸ್ಕ್​ಅನ್ನು ಸರಿಯಾದ ವಿಧಾನದಲ್ಲಿ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ  ಕೈಗಳನ್ನು ಸ್ಯಾನಿಟೈಸ್​ ಮಾಡಿಕೊಳ್ಳುವ ಅಭ್ಯಾಸವನ್ನು ಮರೆಯುವಂತಿಲ್ಲ. ಕೊರೋನಾ ಆರಂಭವಾದಾಗಿನಿಂದ ತಜ್ಞರು ನೀಡಿರುವ ಸಲಹೆ ಮಾಸ್ಕ್​ ಧರಿಸಿವುದು. ಈ ಕಾರಣದಿಂದ ಅಂಗಡಿಗಳಲ್ಲಿ ಮಾಸ್ಕ್​ಗೆ ಬೇಡಿಕೆ ಹೆಚ್ಚಿತ್ತು. ದರವೂ ದುಬಾರಿಯಾಗಿತ್ತು. ಹೀಗಾಗಿ  ಮನೆಗಳಲ್ಲೇ ಬಟ್ಟೆಯ ಮಾಸ್ಕ್​​ಅನ್ನು ತಯಾರಿಸಿ ಉಪಯೋಗಿಸುವ ಕ್ರಮ ಜಾರಿಗೆ ಬಂದಿತು.  ಆದರೆ ಈಗ ಓಮಿಕ್ರಾನ್​ ಎಲ್ಲೆಡೆ ವೇಗವಾಗಿ ಹರಡುತ್ತಿದೆ. ಇದೀಗ ಅಧ್ಯಯನದಲ್ಲಿ ಬಟ್ಟೆಯ ಮಾಸ್ಕ್​ ಸುರಕ್ಷಿತವಲ್ಲ ಎನ್ನುವ ಅಂಶ ಬಯಲಾಗಿದೆ.

ಬಟ್ಟೆ ಮಾಸ್ಕ್​ಅನ್ನು ಯಾಕೆ ಬಳಸಬಾರದು?

ಕೊರೋನಾ ಅಥವಾ ಓಮಿಕ್ರಾನ್​ ಸೋಂಕು ಉಸಿರು ಮತ್ತು ಮೂಗಿನ ದ್ರವದಿಂದ ಬರುತ್ತಿದೆ, ಹೀಗಾಗಿ ಮೂಗು ಮತ್ತು ಬಾಯಿಯನ್ನು ಸರಿಯಾದ ಕ್ರಮದಲ್ಲಿ ಮುಚ್ಚಿಕೊಳ್ಳುವುದು ಅಗತ್ಯವಾಗಿದೆ. ಬಟ್ಟೆಯ  ಮಾಸ್ಕ್​​ನಲ್ಲಿ ಒಂದೇ ಪದರವಿರುವ ಕಾರಣ  ಸೋಂಕು ಸುಲಭವಾಗಿ ಹರಡುತ್ತದೆ. ಅಲ್ಲದೆ ಒಂದು ಬಾರಿ ಬಳಸಿದ ಬಟ್ಟೆಯ ಮಾಸ್ಕ್​ಅನ್ನು ಬಿಸಿನೀರಿನಿಂದ ಶುದ್ಧಗೊಳಿಸಿದರೆ ಮಾತ್ರ ಉಪಯೋಗಕ್ಕೆ ಯೋಗ್ಯವಾಗಿರುತ್ತದೆ. ಒಂದೇ ಪದರದ ಬಟ್ಟೆಯ ಮಾಸ್ಕ್​ ಹಾಕಿಕೊಂಡು ಸೀನಿದಾಗ ಅಥವಾ ಕೆಮ್ಮಿದಾಗ ಸುಲಭವಾಗಿ ಹನಿಗಳು ಎದುರಿಗುರುವವರಿಗೆ ತಗುಲುತ್ತದೆ. ಹೀಗಾಗಿ ಬಟ್ಟೆಯ ಮಾಸ್ಕ್​ಗಳನ್ನು ಬಳಸುವುದನ್ನು ನಿಲ್ಲಿಸಿ ಎನ್ನುತ್ತಾರೆ ತಜ್ಞರು.

ನಿಮ್ಮ ಮಾಸ್ಕ್​ಗಳ ಬಗ್ಗೆ ತಿಳಿದುಕೊಳ್ಳಿ
ಬಟ್ಟೆಯ ಮಾಸ್ಕ್
ಸುಲಭವಾಗಿ ಸ್ವಚ್ಛಗೊಳಿಸಿ, ಮರುಬಳಕೆ ಮಾಡಬಹುದಾದ ಮಾಸ್ಕ್​ ಎಂದರೆ ಅದು ಬಟ್ಟೆಯ ಮಾಸ್ಕ್​. ನೀವು ಒಂದು ಬಾರಿ ಬಳಸಿ ಸ್ವಚ್ಛಗೊಳಿಸಿ ಮತ್ತೆ ಬಳಸಬಹುದು, ನೀವು ಜನಜಂಗುಳಿಯೆಡೆಗೆ, ಧೂಳಿರುವ ಪ್ರದೇಶಗಳಿಗೆ ಹೋಗುವಾಗ ಪ್ರಾಥಮಿಕ ಹಂತದ ಮುನ್ನೆಚ್ಚರಿಕ ಕ್ರಮವಾಗಿ ಬಟ್ಟೆಯ ಮಾಸ್ಕ್​ಅನ್ನು ಧರಿಸಿ. ಆದರೆ ನೆನಪಿಡಿ ಸೋಂಕಿನ ಲಕ್ಷಣಗಳು ಕಂಡುಬಂದರೆ ಬಟ್ಟೆಯ ಮಾಸ್ಕ್​ ಅನ್ನು ನಿರ್ಬಂಧಿಸಿ.

ಸರ್ಜಿಕಲ್​ ಮಾಸ್ಕ್​
ಒಂದು ಬಾರಿ ಮಾತ್ರ ಬಳಸಲು ಯೋಗ್ಯವಾದ ಮಾಸ್ಕ್​ ಎಂದರೆ ಸರ್ಜಿಕಲ್ ​ ಮಾಸ್ಕ್​. ಸರ್ಜಿಕಲ್​ ಮಾಸ್ಕ್​ ಅನ್ನು ಒಂದು ಬಾರಿ ತೊಳೆದರೆ ಅದರ ದಾರಗಳು ಸಡಿಲಗೊಂಡು ಬಳಕೆಗೆ ಯೋಗ್ಯವಾಗದ ರೀತಿಯಾಗುತ್ತದೆ. ಅಲ್ಲದೆ  ಸರ್ಜಕಲ್​ ಮಾಸ್ಕ್​ಗಳನ್ನು ಒಂದು ಬಾರಿ ನೀರಿಗೆ ಹಾಕಿದ ಮೇಲೆ ಅದರ ಪದರಗಳು ತೆಳ್ಳಗಾಗುತ್ತವೆ. ಇದರಿಂದ ಸೋಂಕು ಹರಡುವ ಅಪಾಯ ಹೆಚ್ಚಿರುತ್ತದೆ.

ಬಟ್ಟೆ ಮತ್ತು ಸರ್ಜಿಕಲ್​ ಮಾಸ್ಕ್​
ಈ ಮಾಸ್ಕ್​ಗಳನ್ನು ಚೆನ್ನಾಗಿ ಶೋಧಿಸಿದ ವಸ್ತುಗಳಿಂದ ನಿರ್ಮಿಸಲಾಗುತ್ತದೆ. ಆದರೆ ಇವು ದುರ್ಬಲವಾಗಿರುತ್ತದೆ. ಹೀಗಾಗಿ ಮರುಬಳಕೆಗೆ ಯೋಗ್ಯವಲ್ಲ. ಆದರೆ ಇವುಗಳು ಮೊದಲ ಬಳಕೆಯಲ್ಲಿ ಉತ್ತಮವಾಗಿ ರಕ್ಷಣೆ ನೀಡುತ್ತವೆ. ಎರಡು ಪದರಗಳಿಂದ ಕೂಡಿದ ಮಾಸ್ಕ್​ ಶೇ.75ರಷ್ಟು ಸುರಕ್ಷತೆ ನೀಡುತ್ತದೆ ಎನ್ನಲಾಗಿದೆ.

N95 ಮಾಸ್ಕ್​
ಅಮೇರಿಕನ್ ಕಾನ್ಫರೆನ್ಸ್ ಆಫ್ ಗವರ್ನಮೆಂಟ್ ಇಂಡಸ್ಟ್ರಿಯಲ್ ಹೈಜೀನಿಸ್ಟ್ಸ್ ಪ್ರಕಾರ N95 ಮಾಸ್ಕ್​ ಬಳಕೆಗೆ ಯೋಗ್ಯವಾದ ಮಾಸ್ಕ್​ ಆಗಿದೆ. ಸೋಂಕಿತ ವ್ಯಕ್ತಿ ಮಾಸ್ಕ್ ಧರಿಸದಿದ್ದರೂ N95 ಮಾಸ್ಕ್​ ಧರಿಸಿದವರಿಗೆ ಸೋಂಕು ಹರಡಲು ಎರಡೂವರೆ ಗಂಟೆಗಳ ಅವಧಿ ಬೇಕು. ಸೋಂಕಿತ ವ್ಯಕ್ತಿ ಮಾಸ್ಕ್ ಧರಿಸಿದ್ದರೆ. ಸೋಂಕು ಇತರರಿಗೆ ಹರಡಲು 25 ಗಂಟೆಗಳ ಕಾಲ ಸಮಯ ಬೇಕು ಎಂದು ಹೇಳಿದೆ.  ಹೀಗಾಗಿ ಕೊರೋನಾ ಇರಲಿ, ಓಮಿಕ್ರಾನ್ ಇರಲಿ N95 ಮಾಸ್ಕ್​ ಸುರಕ್ಷತೆ ದೃಷ್ಟಿಯಿಂದ ಬಳಕಗೆ ಯೋಗ್ಯ ಎನ್ನುತ್ತಾರೆ ತಜ್ಞರು.

TV9 Kannada


Leave a Reply

Your email address will not be published. Required fields are marked *