ಬೆಳಗಾವಿ: ಮೆಡಿಕಲ್ ಆಕ್ಸಿಜನ್​ನನ್ನ ಹೊತ್ತು ಬೆಳಗಾವಿ ಆಸ್ಫತ್ರೆಯತ್ತ ಸಾಗುತ್ತಿದ್ದ ಟ್ಯಾಂಕರ್​ ಅಪಘಾತಕ್ಕೀಡಾಗಿದೆ. ನಿನ್ನೆ ರಾತ್ರಿ ತಾಲೂಕಿನ ಮುತ್ನಾಳ ಗ್ರಾಮದ ಬಳಿಯ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ- 4ರಲ್ಲಿ ನಡೆದಿದೆ.

ಓವರ್​ ಟೇಕ್​​ ಮಾಡುವ ವೇಳೆ ಮುಂದೆ ಸಾಗುತ್ತಿದ್ದ ಲಾರಿಗೆ ಆಕ್ಸಿಜನ್ ಟ್ಯಾಂಕರ್ ಅಪ್ಪಳಿಸಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಆಕ್ಸಿಜನ್ ಟ್ಯಾಂಕರ್ ಟೈರ್ ಬ್ಲಾಸ್ಟ್ ಆಗಿ, ಎಕ್ಸಲ್ ತುಂಡಾಗಿದೆ. ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಹಾಗೂ ಸಂಬಂಧಿತ ಅಧಿಕಾರಿಗಳು ಭೇಟಿನೀಡಿದ್ದು, ಆಕ್ಸಿಜನ್ ಸ್ಥಳಾಂತರಿಸುವ ಕಾರ್ಯವನ್ನ ಮಾಡುತ್ತಿದ್ದಾರೆ.

The post ಓವರ್ ಟೇಕ್ ಮಾಡುವ ಭರದಲ್ಲಿ ಲಾರಿಗೆ ಡಿಕ್ಕಿ ಹೊಡೆದ ಆಕ್ಸಿಜನ್​ ಟ್ಯಾಂಕರ್ appeared first on News First Kannada.

Source: newsfirstlive.com

Source link