ಬಾಲಿವುಡ್​​ನ ಸನ್ನಿ.., ಅದೆಷ್ಟೋ ಪಡ್ಡೆ ಹೈಕ್ಳ ಪಾಲಿಗೆ ಚಿನ್ನಿ. 2011ರಲ್ಲಿ ಬಾಲಿವುಡ್ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬಂದಿದ್ದ ಸನ್ನಿ ಲಿಯೋನ್, ‘‘ರಾಗಿಣಿ ಎಮ್​​ಎಮ್​ಎಸ್’’ ಚಿತ್ರದ ಮೂಲಕ ಬಾಲಿವುಡ್ ಅಂಗಳದಲ್ಲಿ ಕಂಡರು. ಮೊದ ಮೊದಲು ಅವಮಾನಗಳನ್ನ ಉಂಡರು. ತದ ನಂತರದ ದಿನಗಳಲ್ಲಿ ಸನ್ನಿ ಲಿಯೋನ್ ಗ್ರೇಟ್ ಎನ್ನಿಸಿಕೊಂಡರು.

ಕಳೆದ ಎಳೆಂಟು ವರ್ಷದಿಂದ ಗೂಗಲ್​​ನಲ್ಲಿ ಅತಿ ಹೆಚ್ಚು ಬಾರಿ ಸರ್ಚ್ ಆಗುವ ಫೇಮಸ್ ಸನ್ನಿ ಮೊನ್ನೆ ಬೀದಿ ಬೀದಿ ಸುತ್ತಿದ್ದಾರೆ.. ಅದು ಒಬ್ಬಳೆ. ಆದ್ರೆ ಯಾರಿಗೂ ಸನ್ನಿ ಲಿಯೋನ್ ಇವ್ರೇ ಅಂತ ಕಂಡು ಹಿಡಿಯೋಕೆ ಆಗ್ಲೇ ಇಲ್ವಂತೆ..

ಅಷ್ಟಕ್ಕೂ ಸನ್ನಿ ಬೀದಿ ಸುತ್ತೋಕ್ಕೆ ಹೊರಗಡೆ ಹೋಗಿದ್ದು ಯಾಕೆ..? ಅನ್ನೋ ಪ್ರಶ್ನೆಗೆ ಉತ್ತರ ತನ್ನ ಪತಿ ದೇವರು ಡನಿಲ್​​ ವೆಬರ್​ ಅವರಿಗಾಗಿ. ಡನಿಲ್ ವೆಬರ್​​ಗೆ ಆರೋಗ್ಯ ಸರಿ ಇರಲಿಲ್ವಂತೆ. ಈ ಕಾರಣಕ್ಕೆ ಗಂಡನಿಗಾಗಿ ಮಾತ್ರೆ ಖರೀದಿಸಲು ಸನ್ನಿ ಹೊರಗಡೆ ಹೋಗಿದ್ರಂತೆ. ಆಗ ಸನ್ನಿಯನ್ನ ಯಾರೊಬ್ಬರು ಗುರುತೇ ಹಿಡಿಲ್ವಂತೆ.

ನಾಲ್ಕು ವರ್ಷದ ಹಿಂದೆ ಸನ್ನಿ ಲಿಯೋನ್ ಅವರನ್ನ ನೋಡಲು ಕೇರಳದಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಸನ್ನಿ ಬರ್ತಾಳೆ ಅಂದ್ರೆ ಅಲ್ಲಿ ಜನ ಜಾತ್ರೆ ಸೇರುತ್ತೆ. ಆದ್ರೆ ಸನ್ನಿ ಲಿಯೋನ್ ಒಬ್ಬರೇ ಹೊರಗಡೆ ಓಡಾಡಿದ್ರು ಜನ ಗುರುತೆ ಹಚ್ಚಲಿಲ್ವಂತೆ.

ನಾನೇನು ಕದಿಯೋಕೆ ಹೊರಗಡೆ ಹೋಗಿರಲಿಲ್ಲ. ನಾನು ನನ್ನ ಗಂಡನಿಗೆ ಮಾತ್ರೆ ತೆಗೆದುಕೊಂಡು ಬರಲು ಹೊರಗಡೆ ಹೋಗಿದೆ. ಅವರು ಚಿಕ್ಕನ್ ತಿನ್ನೋದನ್ನ ಬಿಟ್ಟು ತರಕಾರಿ ತಿನ್ನೋದನ್ನ ಶುರು ಮಾಡಬೇಕು.
-ಸನ್ನಿ ಲಿಯೋನ್

 

View this post on Instagram

 

A post shared by Sunny Leone (@sunnyleone)

ಕೇಳಿದ್ರಲ್ಲ ಸನ್ನಿ ಲಿಯೋನ್ ಯಾಕೆ ಹೊರಗಡೆ ಒಬ್ಬರೆ ಹೋಗಿದ್ರು ಅಂತ. ಸನ್ನಿ ತನ್ನ ಗಂಡನ ಬಗ್ಗೆ ಮಾತನಾಡಿರೋ ವಿಡಿಯೋ ಈಗ ವೈರಲ್ ಕಹಾನಿಯಾಗಿದೆ. ಒಟ್ಟಿನಲ್ಲಿ 40ರ ಹರೆಯದ ಸನಿ ಲಿಯೋನ್ ಏನೇ ಮಾಡಿದ್ರು ಸದ್ದು ಗದ್ದಲ್ಲ ಫ್ಯಾನ್ಸ್​ಗಳ ಹೃದಯದಲ್ಲಿ ಆಗೇ ಆಗುತ್ತೆ.

The post ಓ ಮೈ ಗಾಡ್​.. ಒಂಟಿಯಾಗಿ ಬೀದಿ ಸುತ್ತಿದ್ರು ಸನ್ನೀನ ಯಾರೂ ಗುರುತಿಸಲಿಲ್ಲ appeared first on News First Kannada.

Source: newsfirstlive.com

Source link