ಬೆಳಗಾವಿ/ಚಿಕ್ಕೋಡಿ: ಚಿನ್ನ, ಹಣ ಕದಿಯುವುದನ್ನು ನೋಡಿದ್ದೇವೆ. ಇದೀಗ ಕೊರೊನಾ ಕಾಲದಲ್ಲಿ ಕಳ್ಳರು ಔಷಧಿಗಳನ್ನೂ ಕದಿಯಲು ಆರಂಭಿಸಿದ್ದು, ರೆಮ್‍ಡಿಸಿವಿರ್ ಎಂದು ಭಾವಿಸಿ ಪೋಲಿಯೋ ಔಷಧಿ ಕದ್ದಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಕೊರೊನಾ ಅಬ್ಬರದ ನಡುವೆ ಔಷಧಿ ಕಳ್ಳತನವಾಗುತ್ತಿದ್ದು, ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಔಷಧಿ ಕಳ್ಳತನವಾಗಿದೆ. ರೆಮ್‍ಡಿಸಿವಿರ್ ಎಂದು ಭಾವಿಸಿ ಪೋಲಿಯೋ ಇಂಜೆಕ್ಷನ್ ಕದ್ದಿದ್ದಾರೆ. ಪೋಲಿಯೋ ಔಷಧಿ ಎಂದು ಗೊತ್ತಾಗಿ ಸಂಗಮೇಶ್ವರ್ ನಗರದ ಬಳಿಯ ರಸ್ತೆಯಲ್ಲೇ ಔಷಧಿ ಎಸೆದು ಖದೀಮರು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

The post ಔಷಧಿಗೇ ಕನ್ನ ಹಾಕಿದ ಖದೀಮರು- ರೆಮ್‍ಡಿಸಿವಿರ್ ಎಂದು ಪೋಲಿಯೋ ಔಷಧಿ ಕಳ್ಳತನ appeared first on Public TV.

Source: publictv.in

Source link