ಏನಾದರೊಂದು ವಿಚಾರಕ್ಕೆ ಸುದ್ದಿಯಾಗುತ್ತಾ ವಿವಾದದಲ್ಲಿ ಸಿಲುಕಿಕೊಳ್ಳೋದರಲ್ಲಿ ಕಂಗನಾ ಹೆಸರು ಪದೇ ಪದೇ ಕೇಳಿ ಬರ್ತಾನೆ ಇರುತ್ತೆ. ಇತ್ತೀಚೆಗಷ್ಟೇ ಕಂಗನಾ ಟ್ವಿಟರ್​ ಖಾತೆ ನಿಷ್ಕ್ರಿಯಗೊಂಡು ಸುದ್ದಿಯಾಗಿದ್ದರು. ಇದೀಗ ಕಂಗನಾಗೆ ಕೊರೊನಾ ದೃಢಪಟ್ಟಿದ್ದು, ಈ ವೈರಸ್​ ನನ್ನ ದೇಹದಲ್ಲಿ ಪಾರ್ಟಿ ಮಾಡ್ತಿದೆ ಅನ್ನೋದು ನನಗೆ ಗೊತ್ತೇ ಆಗ್ಲಿಲ್ಲ. ಇದೊಂದು ಸಣ್ಣ ಸಮಯದ ಜ್ವರ. ನಾವು ಭಯ ಪಟ್ರೆ ಇದು ಜಾಸ್ತಿನೇ ಹೆದರಿಸುತ್ತೆ ಅಂದಿದ್ದಾರೆ.

ಹೌದು.. ಕೆಲ ದಿನಗಳಿಂದ ನಟಿ ಕಂಗನಾ ರಣಾವತ್​ಗೆ ಸುಸ್ತು ಹಾಗೇ ಕಣ್ಣಿನಲ್ಲಿ ಉರಿ ಕಾಣಿಸಿಕೊಂಡಿದ್ದು ಕೊರೊನಾ ಟೆಸ್ಟ್​ ನೀಡಿದ್ದಾರೆ. ಸದ್ಯ ರಿಪೋರ್ಟ್​​ ಪಾಸಿಟಿವ್​ ಬಂದಿದ್ದು ಕ್ವಾರಂಟೈನ್​ ಆಗಿದ್ದಾರೆ. ಈ ಬಗ್ಗೆ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ತಿಳಿಸಿರುವ ಕಂಗನಾ, ‘ನನಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ. ನಾನು ಕ್ವಾರಂಟೈನ್​ನಲ್ಲಿದ್ದೇನೆ. ಈ ವೈರಸ್​ ನನ್ನ ದೇಹದಲ್ಲಿ ಪಾರ್ಟಿ ಮಾಡ್ತಿದೆ ಅನ್ನೋದು ನನಗೆ ಗೊತ್ತೇ ಆಗ್ಲಿಲ್ಲ. ಇದೀಗ ನನ್ನ ಕೈಯಲ್ಲಿದೆ, ನಾನು ಇದನ್ನ ನಾಶ ಮಾಡುತ್ತೇನೆ. ನಿಮಗಿಂತ ದೊಡ್ಡ ಶಕ್ತಿ ಬೇರಾವುದೂ ಇಲ್ಲ. ಕೊರೊನಾ ಬಂದಾಕ್ಷಣ ಹೆದರಬೇಡಿ, ನೀವೆಷ್ಟು ಭಯ ಪಡುತ್ತೀರೋ ವೈರಸ್​ ನಿಮ್ಮನ್ನ ಅಷ್ಟೇ ಹೆದರಿಸುತ್ತದೆ. ಕೋವಿಡ್​-19 ಕೇವಲ ಒಂದು ಸಣ್ಣ ಸಮಯದ ಜ್ವರ. ಇದನ್ನ ಎಲ್ಲರೂ ಒಟ್ಟಿಗೆ ನಾಶ ಮಾಡೋಣ’ ಅಂತ ಜನರಲ್ಲಿ ಇನ್ನಷ್ಟು ಧೈರ್ಯ ತುಂಬಿದ್ದಾರೆ.

ತಮ್ಮ ಊರು ಹಿಮಾಚಲಕ್ಕೆ ಹೊರಟಿದ್ದ ಕಂಗನಾಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅದರಂತೆ ಟೆಸ್ಟ್​ ಮಾಡಿಸಿದ ನಂತರ ಪಾಸಿಟಿವ್​ ಇರೋದು ದೃಢಪಟ್ಟಿದೆ. ಇನ್ನು ಟ್ವಿಟರ್​​ ತಂಡ ತಮ್ಮ ಖಾತೆಯನ್ನ ನಿಷ್ಕ್ರಿಯ ಗೊಳಿಸಿರುವ ಬಗ್ಗೆ ಕಂಗನಾ ಮಾತನಾಡಿದ್ದು, ತಮ್ಮ ಅಭಿಪ್ರಾಯಗಳನ್ನ ನೀಡಲು ಟ್ವಿಟರ್​ ಒಂದೇ ಮಾಧ್ಯಮವಲ್ಲ. ಇನ್ನಷ್ಟು ಸಾಮಾಜಿಕ ಮಾಧ್ಯಮಗಳಿವೆ ಅಂದಿದ್ದಾರೆ.

 

View this post on Instagram

 

A post shared by Kangana Ranaut (@kanganaranaut)

The post ಕಂಗನಾಗೆ ಕೊರೊನಾ ಪಾಸಿಟಿವ್​; ವೈರಸ್​ ನನ್ನ ದೇಹದಲ್ಲಿ ಪಾರ್ಟಿ ಮಾಡ್ತಿದೆ ಅಂತ ತಿಳಿಯಲೇ ಇಲ್ಲ appeared first on News First Kannada.

Source: newsfirstlive.com

Source link