ಕಂಗನಾ ನಟನೆಯ ‘ಧಾಕಡ್​’ ಚಿತ್ರ ನೋಡಲು ಒಬ್ಬರೂ ಬರಲಿಲ್ಲ; ಹಲವು ಕಡೆಗಳಲ್ಲಿ ಶೋ ಕ್ಯಾನ್ಸಲ್​ | Kangana Ranaut starrer Dhaakad movie shows cancelled due to lack of audience


ಕಂಗನಾ ನಟನೆಯ ‘ಧಾಕಡ್​’ ಚಿತ್ರ ನೋಡಲು ಒಬ್ಬರೂ ಬರಲಿಲ್ಲ; ಹಲವು ಕಡೆಗಳಲ್ಲಿ ಶೋ ಕ್ಯಾನ್ಸಲ್​

ಕಂಗನಾ ರಣಾವತ್

Dhaakad Movie Box Office Collection: ಗಲ್ಲಾಪೆಟ್ಟಿಗೆಯಲ್ಲಿ ಕಂಗನಾ ರಣಾವತ್​ ನಟನೆಯ ‘ಧಾಕಡ್​’ ಸಿನಿಮಾ ಊಹಿಸಲೂ ಆಗದ ರೀತಿಯಲ್ಲಿ ಸೋತಿದೆ. ಪ್ರೇಕ್ಷಕರು ಈ ಚಿತ್ರದ ಬಗ್ಗೆ ಕಿಂಚಿತ್ತೂ ಆಸಕ್ತಿ ತೋರಿಸಿಲ್ಲ.

ಸಿನಿಮಾ ರಂಗದಲ್ಲಿ ಸೋಲು-ಗೆಲುವು ಸಹಜ. ಆದರೆ ತೀರಾ ಹೀನಾಯಾವಾಗಿ ಸೋತರೆ ಸಖತ್​ ಬೇಸರ ಆಗುತ್ತದೆ. ನಟಿ ಕಂಗನಾ ರಣಾವತ್ (Kangana Ranaut) ಅವರಿಗೆ ನಿಜಕ್ಕೂ ಅಂತಹ ದುಸ್ಥಿತಿ ಬಂದಿದೆ. ಅವರು ಬಾಲಿವುಡ್​ನಲ್ಲಿ (Bollywood) ಲೇಡಿ ಸೂಪರ್​ ಸ್ಟಾರ್​ ರೀತಿ ವರ್ತಿಸುತ್ತಿದ್ದರು. ಹಿಂದಿ ಚಿತ್ರರಂಗದ ಬೇರೆ ನಟ-ನಟಿಯರನ್ನು, ನಿರ್ದೇಶಕರನ್ನು ಹೀಯಾಳಿಸುತ್ತಿದ್ದರು. ಆದರೆ ಈಗ ಅವರ ಸಿನಿಮಾವೇ ಹೀನಾಯವಾಗಿ ಸೋತಿದೆ. ಕಂಗನಾ ರಣಾವತ್​ ನಟನೆಯ ‘ಧಾಕಡ್​’ ಚಿತ್ರ (Dhaakad Movie) ಮೇ 20ರಂದು ವಿಶ್ವಾದ್ಯಂತ ಬಿಡುಗಡೆ ಆಯಿತು. ಮೂರು ದಿನ ಕಳೆಯುವುದರೊಳಗೆ ಈ ಚಿತ್ರ ಗಂಟುಮೂಟೆ ಕಟ್ಟಿಕೊಂಡು ಥಿಯೇಟರ್​ನಿಂದ ಎತ್ತಂಗಡಿ ಆಗಿದೆ. ಹಲವು ಕಡೆಗಳಲ್ಲಿ ಈ ಸಿನಿಮಾವನ್ನು ನೋಡಲು ಒಬ್ಬನೇ ಒಬ್ಬ ಪ್ರೇಕ್ಷಕ ಕೂಡ ಬಂದಿಲ್ಲ ಎಂಬುದು ವಿಪರ್ಯಾಸ! ಹಾಗಾಗಿ ಚಿತ್ರಮಂದಿರದವರು ಈ ಸಿನಿಮಾದ ಶೋ ಕ್ಯಾನ್ಸಲ್​ ಮಾಡಿದ್ದಾರೆ. ಇದರಿಂದಾಗಿ ಕಂಗನಾ ರಣಾವತ್​ ಅವರಿಗೆ ತೀವ್ರ ಮುಖಭಂಗ ಆಗಿದೆ. ಇದು ಅವರ ವೃತ್ತಿಜೀವನದ ಅತಿ ದೊಡ್ಡ ಸೋಲು ಎಂದು ಬಣ್ಣಿಸಲಾಗುತ್ತಿದೆ. ‘ಧಾಕಡ್​’ ಚಿತ್ರದ ಕಳಪೆ ಪ್ರದರ್ಶನದಿಂದಾಗಿ ಕಂಗನಾ ರಣಾವತ್​ ಅವರ ಚಾರ್ಮ್​ ಕುಸಿದು ಹೋಗಿದೆ.

‘ಧಾಕಡ್​’ ಸಿನಿಮಾದಲ್ಲಿ ಕಂಗನಾ ರಣಾವತ್​ ಅವರು ಆ್ಯಕ್ಷನ್​ ಅವತಾರ ತಾಳಿದ್ದಾರೆ. ಭರ್ಜರಿಯಾಗಿ ಅವರು ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ. ಟ್ರೇಲರ್​ ಬಿಡುಗಡೆ ಆದಾಗ ಅನೇಕರು ಮೆಚ್ಚುಗೆ ಸೂಚಿಸಿದ್ದರು. ಸಲ್ಮಾನ್​ ಖಾನ್​ ಕೂಡ ಈ ಚಿತ್ರದ ಟ್ರೇಲರ್ ಅನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಶುಭ ಹಾರೈಸಿದ್ದರು. ಏನೇ ಮಾಡಿದರೂ ಕೂಡ ಈ ಸಿನಿಮಾ ಬಗ್ಗೆ ಆಸಕ್ತಿ ತೋರಿಸಿಲ್ಲ. ಮೇ 20ರಂದು ‘ಧಾಕಡ್​’ ಬಿಡುಗಡೆಯಾದ ಬಹುತೇಕ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿದ್ದವು. ಸಿನಿಮಾ ನೋಡಿದ ಕೆಲವೇ ಕೆಲವು ಮಂದಿ ಕೂಡ ಒಳ್ಳೆಯ ಅಭಿಪ್ರಾಯ ಹಂಚಿಕೊಂಡಿಲ್ಲ. ಇದರಿಂದಾಗಿ ‘ಧಾಕಡ್​’ ಚಿತ್ರ ತೀವ್ರ ಸೋಲು ಅನುಭವಿಸಿದೆ.

TV9 Kannada


Leave a Reply

Your email address will not be published. Required fields are marked *