ಕಂಗನಾ ರಣಾವತ್​ ಕಾರಿನ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು; ವಿಡಿಯೋ ಪೋಸ್ಟ್ ಮಾಡಿದ ನಟಿ | Kangana Ranaut Car attacked by Mob In Punjab Video goes viral


ಕಂಗನಾ ರಣಾವತ್​ ಕಾರಿನ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು; ವಿಡಿಯೋ ಪೋಸ್ಟ್ ಮಾಡಿದ ನಟಿ

ಕಂಗನಾ

ಕಂಗನ ರಣಾವತ್​ ಇದ್ದಲ್ಲಿ ವಿವಾದಕ್ಕೇನು ಬರ ಇರುವುದಿಲ್ಲ. ಅವರು ಅದ್ಭುತ ನಟಿ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ. ಇದರ ಜತೆಗೆ ಕಿರಿಕ್ ಮಾಡಿಕೊಳ್ಳುವ ಮೂಲಕವೂ ಸಾಕಷ್ಟು ಸುದ್ದಿಯಾಗುತ್ತಾರೆ. ವಿವಾದಾತ್ಮಕ ಹೇಳಿಕೆ ಕೊಡುತ್ತಾ ಸದಾ ಸುದ್ದಿಯಲ್ಲಿರುತ್ತಾರೆ. ಟ್ವಿಟರ್​ನಲ್ಲಿ ಅವರ ಖಾತೆ ರದ್ದಾದರೂ, ಇನ್​ಸ್ಟಾಗ್ರಾಮ್​ನಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದನ್ನು ಮುಂದುವರಿಸಿದ್ದಾರೆ. ಈಗ ಕಂಗನಾ ಕಾರಿನ ಮೇಲೆ ದಾಳಿ ನಡೆದಿದೆ. ಈ ಬಗ್ಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದರೆ.

ಕಂಗನಾ ಅವರು ಇಂದು (ಡಿಸೆಂಬರ್​ 3) ಪಂಜಾಬ್​ಗೆ ತೆರಳಿದ್ದರು. ರೈತ ಪ್ರತಿಭಟನಾಕಾರರ ವಿರುದ್ಧ ಕಂಗನಾ ಸಾಕಷ್ಟು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಈ ಕಾರಣಕ್ಕೆ ಅವರು ಪಂಜಾಬ್​ಗೆ ಎಂಟ್ರಿ ಪಡೆಯುತ್ತಿದ್ದಂತೆ ಅವರ ಕಾರಿನ ಮೇಲೆ ದಾಳಿ ನಡೆದಿದೆ. ಇದನ್ನು ಕಂಗನಾ ಖಂಡಿಸಿದ್ದಾರೆ.

‘ಇವರು ತಮ್ಮನ್ನು ತಾವು ರೈತರು ಎಂದು ಕರೆದುಕೊಳ್ಳುತ್ತಿದ್ದಾರೆ. ಆದರೆ, ನಮ್ಮಮೇಲೆ ದಾಳಿ ಮಾಡುತ್ತಾರೆ. ಬೆದರಿಕೆ ಹಾಕುತ್ತಾರೆ. ದೇಶದಲ್ಲಿ ಇಷ್ಟೊಂದು ಗುಂಪು ಹಲ್ಲೆ ನಡೆಯುತ್ತಿದೆ. ಇಷ್ಟೊಂದು ಪೊಲೀಸರಿದ್ದಾರೆ. ಆದಾಗ್ಯೂ, ನನ್ನ ಗಾಡಿಯನ್ನು ತೆಗೆದುಕೊಂಡು ಹೋಗೋಕೆ ಆಗುತ್ತಿಲ್ಲ. ನಾನು ರಾಜಕಾರಣಿಯೇ? ಇಂತಹ ವರ್ತನೆಯನ್ನು​ ಸಹಿಸಿಕೊಳ್ಳೋಕೆ ಆಗುವುದಿಲ್ಲ. ನನಗೆ ಅಲ್ಲಿಗೆ ತೆರಳದಂತೆ ಅನೇಕರು ಎಚ್ಚರಿಕೆ ನೀಡಿದ್ದರು. ಆದರೆ, ನಾನು ಇಲ್ಲಿಗೆ ಬಂದೆ’ ಎಂದಿದ್ದಾರೆ ಅವರು.

ಕೃಷಿ ಕಾಯ್ದೆಯನ್ನು ಹಿಂಪಡೆದ ಬೆನ್ನಲ್ಲೇ ಕಂಗನಾ ಅಸಮಾಧಾನ ಹೊರ ಹಾಕಿದ್ದರು. ‘ಇಂದು ಬಹುಶಃ ಖಲಿಸ್ತಾನಿ ಭಯೋತ್ಪಾದಕರು ಸರ್ಕಾರ ತೋಳನ್ನು ತಿರುಚುತ್ತಿರಬಹುದು. ಆದರೆ ಈ ಸಂದರ್ಭದಲ್ಲಿ ನಾವು ಓರ್ವ ಮಹಿಳೆಯನ್ನು ಮರೆಯುವಂತಿಲ್ಲ. ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿದ್ದ ಅವರು ಖಲಿಸ್ತಾನಿ ಉಗ್ರರನ್ನು ಸೊಳ್ಳೆಗಳಂತೆ ತಮ್ಮ ಬೂಟಿನಡಿ ಹಾಕಿ ಹೊಸಕಿದ್ದರು. ಖಲಿಸ್ತಾನಿಗಳು ದೇಶವನ್ನು ಒಡೆಯಲು ಬಿಡಲಿಲ್ಲ’ ಎಂದು ಕಂಗನಾ ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಅವರ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿತ್ತು.

TV9 Kannada


Leave a Reply

Your email address will not be published. Required fields are marked *