ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್‍ಗೆ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕೊರೊನಾ ನಾಶ ಮಾಡುವ ಧೈರ್ಯದ ಮಾತುಗಳನ್ನು ಸಹ ಆಡಿದ್ದಾರೆ.

ಸೋಂಕು ತಗುಲಿರುವ ಕುರಿತು ಫೇಸ್ಬುಕ್‍ನಲ್ಲಿ ಖಚಿತಪಡಿಸಿರುವ ಅವರು, ಕಳೆದ ಕೆಲವು ದಿನಗಳಿಂದ ನನಗೆ ಸುಸ್ತು, ಅಶಕ್ತಿ ಹಾಗೂ ಕಣ್ಣುಗಳು ಉರಿಯುತ್ತಿದ್ದವು. ನಾನಗೆ ಹಿಮಾಚಲಕ್ಕೆ ಹೋಗುವ ಆಸೆ ಇದೆ. ಹೀಗಾಗಿ ನಿನ್ನೆ ಕೊರೊನಾ ಟೆಸ್ಟ್ ಮಾಡಿಸಿಕೊಂಡೆ, ಇಂದು ರಿಸಲ್ಟ್ ಬಂದಿದ್ದು, ಪಾಸಿಟಿವ್ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

I was feeling tired and weak with slight burning sensation in my eyes for past few days, was hoping to go to himachal so…

Posted by Kangana Ranaut on Friday, May 7, 2021

ನಾನು ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ಈ ವೈರಸ್ ನನ್ನ ದೇಹದೊಳಗೆ ಹೊಕ್ಕಿಕ್ಕೊಳ್ಳುತ್ತೆ ಎಂದು ಭಾವಿಸಿರಲಿಲ್ಲ. ಇದೀಗ ಪಾಸಿಟಿವ್ ಬಂದಿದ್ದು, ಇದನ್ನು ಸರ್ವನಾಶ ಮಾಡುತ್ತೇನೆ. ನಿಮಗೂ ಮೀರಿ ಯಾರೂ ಯಾವುದೇ ರೀತಿಯ ಪವರ್‍ನ್ನು ಯಾರಿಗೂ ನೀಡಬೇಡಿ. ನೀವು ಅದಕ್ಕೆ ಹೆದರಿದರೆ, ಅದು ನಿಮ್ಮನ್ನು ಹೆದರಿಸುತ್ತದೆ. ಬನ್ನಿ ಎಲ್ಲರೂ ಸೇರಿ ಕೋವಿಡ್-19 ಸರ್ವನಾಶ ಮಾಡೋಣ. ಇದು ಸಣ್ಣ ಪ್ರಮಾಣದ ಜ್ವರವಲ್ಲದೆ, ಇನ್ನೂ ಹೆಚ್ಚಿನ ಒತ್ತಡ ತರುತ್ತಿದೆ. ಇದೀಗ ಕೆಲವು ಜನರ ಮನಸ್ಸಿನ ಆಳಕ್ಕೆ ಇಳಿದಿದೆ ಎಂದು ಬರೆದುಕೊಮಡಿದ್ದಾರೆ.

ಇತ್ತೀಚೆಗೆ ಕಂಗನಾ ರಣಾವತ್ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಸ್ಪಸ್ಪೆಂಡ್ ಮಾಡಲಾಗಿದ್ದು, ಈ ಕುರಿತು ಸಹ ಸಾಕಷ್ಟು ಚರ್ಚೆಯಗಿತ್ತು. ಬಂಗಾಳ ಹಿಂಸಾಚಾರದ ಕುರಿತು ಕಂಗನಾ ಟ್ವೀಟ್ ಮಾಡಿದ್ದಕ್ಕೆ ಅವರ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ.

The post ಕಂಗನಾ ರಣಾವತ್‍ಗೆ ಕೊರೊನಾ ಸೋಂಕು appeared first on Public TV.

Source: publictv.in

Source link