ಕಂಟೇನರ್​​ನಲ್ಲಿ ಅಕ್ರಮವಾಗಿ ಸಾಗಾಟವಾಗ್ತಿತ್ತು ಬಡವರ ಪಾಲಿನ 26 ಟನ್ ಅಕ್ಕಿ.. ಆರೋಪಿಗಳು ಅರೆಸ್ಟ್

ಕಂಟೇನರ್​​ನಲ್ಲಿ ಅಕ್ರಮವಾಗಿ ಸಾಗಾಟವಾಗ್ತಿತ್ತು ಬಡವರ ಪಾಲಿನ 26 ಟನ್ ಅಕ್ಕಿ.. ಆರೋಪಿಗಳು ಅರೆಸ್ಟ್

ಉತ್ತರ ಕನ್ನಡ: ಅನ್ನಭಾಗ್ಯ ಯೋಜನೆಯಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿ ಮೂಟೆಗಳನ್ನ ಆಹಾರ ನಿರೀಕ್ಷಕರು ದಾಳಿ ನಡೆಸಿ ವಶ ಪಡಿಸಿಕೊಂಡಿದ್ದಾರೆ

58,500 ರೂಪಾಯಿ ಮೌಲ್ಯದ 26 ಟನ್ ಅಕ್ಕಿ ಮೂಟೆಗಳನ್ನ ವಶಪಡಿಸಿಕೊಳ್ಳಲಾಗಿದೆ. ಹಾವೇರಿಯಿಂದ, ಮಂಗಳೂರಿಗೆ ತೆರಳುತ್ತಿದ್ದ ಕಂಟೇನರ್​ನಲ್ಲಿ ಅಕ್ಕಿ ಮೂಟೆಗಳನ್ನ ತುಂಬಿಸಿಕೊಂಡು ಶಿರಸಿಯ ಚಿಪಗಿ ಸರ್ಕಲ್ ಬಳಿ ಹೋಗ್ತಿದ್ದ ವೇಳೆ ಜಿಲ್ಲೆಯ ಶಿರಸಿ ಡಿವೈಎಸ್​ಪಿ ರವಿ ನಾಯ್ಕ, ಆಹಾರ ನಿರೀಕ್ಷಕರಾದ ಜಯಶ್ರೀ ಜೋಗಳೇಕರ್ ಹಾಗೂ ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಮಂಗಳೂರಿನ ಶ್ರೀ ಗಣೇಶ ಕಂಪನಿಯ ಮ್ಯಾನೇಜರ್ ಬ್ರಿಜೇಶ್ ಶೆಟ್ಟಿ ಹಾಗೂ ವಾಹನ ಚಾಲಕ ಸಂಗಪ್ಪ ಅಸೂಟಿಯವರನ್ನ ಬಂಧಿಸಿ ಅಕ್ಕಿ ಮೂಟೆಗಳನ್ನ ವಶಕ್ಕೆ ಪಡಿಸಿಕೊಂಡಿದ್ದಾರೆ.

The post ಕಂಟೇನರ್​​ನಲ್ಲಿ ಅಕ್ರಮವಾಗಿ ಸಾಗಾಟವಾಗ್ತಿತ್ತು ಬಡವರ ಪಾಲಿನ 26 ಟನ್ ಅಕ್ಕಿ.. ಆರೋಪಿಗಳು ಅರೆಸ್ಟ್ appeared first on News First Kannada.

Source: newsfirstlive.com

Source link