ಬೆಂಗಳೂರು: ಕಮೀಷನರ್​​​ ಕಮಲ್​ ಪಂತ್​​ ಆದೇಶದ ಬಳಿಕ ಬೆಂಗಳೂರು ಪೊಲೀಸರು ಕಳೆದ ಎರಡು ವಾರಗಳಿಂದ ರೌಡಿಗಳ ಮನೆ ಮೇಲೆ ದಾಳಿ ನಡೆಸುತ್ತಿದ್ದಾರೆ. ಇಂದು ಬಾಣಸವಾಡಿ ಪೊಲೀಸರು ರೌಡಿಗಳ ಮನೆ ಮೇಲೆ ದಾಳಿ ಮಾಡಿದಾಗ ಮೂರು ಕಂಟ್ರಿ ಮೇಡ್​​ ಪಿಸ್ತೂಲ್​​ಗಳು ಪತ್ತೆಯಾಗಿದೆ.

ಹೌದು, ಬಾಣವಾಸವಾಡಿ ಪೊಲೀಸರು ಈಗ ಕಂಟ್ರಿ ಮೇಡ್​​ ಪಿಸ್ತೂಲ್ ಪತ್ತೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಫಯಾಜ್ ಉಲ್ಲಾ, ಮಹಮ್ಮದ್ ಅಲಿ ಹಾಗೂ ಸೈಯ್ಯದ್ ಸಿರಾಜ್ ಎಂಬಾತನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇನ್ನು, ಫಯಾಜ್ ಉಲ್ಲಾ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ರೌಡೀಶೀಟರ್ ಆಗಿದ್ದ. ಹಾಗೆಯೇ ಮಹಮ್ಮದ್ ಅಲಿ ಶಿವಾಜಿನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದು, ಹಲವು ಕೇಸಗಳಿದ್ದವು. ಇವರು ಮಹಾರಾಷ್ಟ್ರದ ಕೊಪ್ಪರ್ ಗಾವ್​​ನಿಂದ ಪಿಸ್ತೂಲ್ ತರಿಸಿಕೊಂಡಿದ್ದರು. ಹೀಗಾಗಿ ಬಾಣಸವಾಡಿ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಮೂವರು ಆರೋಪಿಗಳ ಬಂಧನ ಮಾಡಿದ್ದಾರೆ.

The post ಕಂಟ್ರಿ ಮೇಡ್​​ ಪಿಸ್ತೂಲ್ ಪತ್ತೆ; ಮೂವರು ಖತರ್ನಾಕ್​​ ರೌಡಿಗಳ ಬಂಧನ appeared first on News First Kannada.

Source: newsfirstlive.com

Source link