ಬೆಂಗಳೂರು: ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಇಂದು ಕಂಠೀರವ ಸ್ಟುಡಿಯೋ ಹಾಗೂ ಪುನೀತ್ ರಾಜ್ಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ್ದರು.
ಪುನೀತ್ ನಮ್ಮನ್ನು ಅಗಲಿ ಇಂದಿಗೆ 12 ದಿನಗಳು ಕಳೆದಿದೆ. ಈಗಾಗಲೇ ತಮಿಳುನಾಡಿನ ಹಲವು ಸ್ಟಾರ್ ನಟರು, ಪುನೀತ್ರ ಅಂತಿಮ ದರ್ಶನ ಪಡೆದು ರಾಜ್ ಕುಟುಂಬಸ್ಥರಿಗೆ ಸಂತ್ವಾನ ಹೇಳಿದ್ದಾರೆ. ಇಂದು ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಆಗಮಿಸಿದ್ದ ಡಿಎಂಕೆ ಶಾಸಕ, ನಟ ಉದಯನಿಧಿ ಸ್ಟಾಲಿನ್, ಅಪ್ಪು ಪತ್ನಿ ಅಶ್ವಿನಿ, ಶಿವರಾಜ್ಕುಮಾರ್ಗೆ ಸಂತ್ವಾನ ಹೇಳಿದರು.
ಇದಕ್ಕೂ ಮುನ್ನ ಕಂಠೀರವ ಸ್ಟುಡಿಯೋಗೆ ಆಗಮಿಸಿದ ಉದಯನಿಧಿ ಸ್ಟಾಲಿನ್, ಪುನೀತ್ ಸಮಾಧಿ ದರ್ಶನ ಪಡೆದು, ಸಮಾಧಿಗೆ ಹೂವಿ ನ ಹಾರ ಹಾಕಿ ನಮನ ಸಲ್ಲಿಸಿದ್ದರು.