ಕಂಠೀರವ ಸ್ಟುಡಿಯೋ ಹೊರಗೆ ‘ಪುಷ್ಪ’ ಘೋಷಣೆ; ಅಲ್ಲು ಅರ್ಜುನ್​ ನೋಡೋಕೆ ಅಭಿಮಾನಿಗಳ ದಂಡು | Fans Shouted Allu Arjun Name in Kanteerava Studio


ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Puneeth Rajkumar) ನಿಧನರಾಗಿ ಮೂರು ತಿಂಗಳ ಬಳಿಕ ಟಾಲಿವುಡ್ ನಟ ಅಲ್ಲು ಅರ್ಜುನ್ (Allu Arjun) ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಪುನೀತ್​ ಸಹೋದರ ಶಿವರಾಜ್​ಕುಮಾರ್ ಅವರನ್ನೂ ಭೇಟಿ ಮಾಡಿ ಸಮಾಧಾನದ ಮಾತುಗಳನ್ನು ಆಡಿದ್ದಾರೆ. ಇದರ ವಿಡಿಯೋ ಹಾಗೂ ಫೋಟೋಗಳು ವೈರಲ್​ ಆಗುತ್ತಿವೆ. ಅಲ್ಲು ಅರ್ಜುನ್​ ಅವರು ಪುನೀತ್​ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ್ದಾರೆ. ಇದರ ಜತೆಜತೆಗೆ ರಾಜ್​ಕುಮಾರ್​, ಪಾರ್ವತಮ್ಮ ಹಾಗೂ ಅಂಬರೀಷ್​ ಸಮಾಧಿಗೂ ನಮನ ಸಲ್ಲಿಸಿದ್ದಾರೆ. ಕಂಠೀರವ ಸ್ಟುಡಿಯೋದ ಹೊರ ಭಾಗದಲ್ಲಿ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ನೆರೆದಿದ್ದರು. ಈ ವೇಳೆ ‘ಪುಷ್ಪ’, ‘ಪುಷ್ಪ’ ಎಂದು ಅಭಿಮಾನಿಗಳು ಕೂಗಿದ್ದಾರೆ. ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಸಿನಿಮಾ (Pushpa Movie) ಇತ್ತೀಚೆಗೆ ಗೆಲುವು ಕಂಡಿದೆ. ಪುಷ್ಪರಾಜ್​ ಪಾತ್ರದಲ್ಲಿ ಅಲ್ಲು ಅರ್ಜುನ್​ ಕಾಣಿಸಿಕೊಂಡಿದೆ.

TV9 Kannada


Leave a Reply

Your email address will not be published.