ಹಾಸನ: ಸಕಲೇಶಪುರ ತಾಲೂಕಿನ ಆನೇಮಹಲ್​ನಲ್ಲಿ ತಾಯಿ ತನ್ನ ಮಗುವಿಗೂ ನೇಣು ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ಪೋಷಕರು ಎರಡನೇ ಮದುವೆ ಮಾಡಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಪ್ರಜ್ವಲ (26), ಸಾಧ್ವಿ (2) ಮೃತ ದುರ್ದೈವಿಗಳು.

ಪ್ರಜ್ವಲ ಅವರ ಪತಿ ಸುರೇಂದ್ರ ಅಪಘಾತದಲ್ಲಿ ಸಾವನ್ನಪ್ಪಿದ್ದು ಈ ಆಘಾತದಿಂದ ಪ್ರಜ್ವಲ ಇನ್ನೂ ಹೊರಬಂದಿರಲಿಲ್ಲ.. ಮಗಳ ಸ್ಥಿತಿ ಕಂಡು ಪ್ರಜ್ವಲ ಪೋಷಕರು ಆನೆಮಹಲ್ ಗ್ರಾಮದ ಮೋಹನ್‌ ಎಂಬುವವರೊಂದಿಗೆ ವಿವಾಹ ಮಾಡಿದ್ದರು ಎನ್ನಲಾಗಿದೆ.

ಜೂ.16 ರಂದು ವಿವಾಹ‌ ನಡೆದಿದ್ದು ವಿವಾಹವಾದ ಎರಡು ದಿನದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗುವಿಗೆ ನೇಣು ಬಿಗಿದು ನಂತರ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಕಂದಮ್ಮನನ್ನೂ ಕೊಂದು ತಾನೂ ನೇಣಿಗೆ ಶರಣಾದ ತಾಯಿ.. ಎರಡನೇ ಮದುವೆಯೇ ಕಾರಣವಾಯ್ತಾ..? appeared first on News First Kannada.

Source: newsfirstlive.com

Source link