ಬೆಂಗಳೂರು: ಲಾಕ್​ಡೌನ್ ಹಾಗೂ ಕೊರೊನಾ ಅಲೆ ನಿಂತ ಬಳಿಕ ಜನರ ಮುಂದೆ ನನ್ನ ಚಾರಿಟಬಲ್​ ಟ್ರಸ್ಟ್​ನ ಅಕೌಂಟ್​ನಲ್ಲಿ ಇರುವ ಹಣದ ಬಗ್ಗೆ ಮಾಹಿತಿ ನೀಡುತ್ತೇನೆ ಅಂತಾ ನಟ ರಿಯಲ್ ಸ್ಟಾರ್​ ಉಪೇಂದ್ರ ಹೇಳಿದ್ದಾರೆ.

ನ್ಯೂಸ್​ಫಸ್ಟ್ ನಡೆಸಿದ ‘ನಮ್ಮ ಬೆಂಗಳೂರು, ನಮ್ಮ ರಕ್ಷಣೆ’ ಅಭಿಯಾನದಲ್ಲಿ ಮತನಾಡಿದ ಉಪೇಂದ್ರ.. ನಾವು ಒಂದು ಕೈಯಲ್ಲಿ ಕೊಟ್ಟಿದ್ದು ಇನ್ನೊಂದು ಕೈಯಿಗೆ ಗೊತ್ತಾಗಬಾರದು ಅನ್ನೋ ಮಾತಿದೆ. ನಮ್ಮ ಸಮಾಜ ಸೇವೆ, ಜನರಿಗೆ ನೀಡುವ ಸಹಾಯ ಹಾಗಿರಬೇಕು.

ಇಂತಹ ಅಭಿಯಾನದಲ್ಲಿ ನಾವು ಪಾಲ್ಗೊಳ್ಳಬೇಕು. ಎಲ್ಲಿಯೂ ಕೂಡ ಜನರನ್ನ ಪ್ಯಾನಿಕ್ ಮಾಡುವ ಕೆಲಸ ಆಗಬಾರದು. ಎಲ್ಲರೂ ಧೈರ್ಯವನ್ನ ನೀಡಿದ್ರೆ ಮಾತ್ರ ಕೊರೊನಾದಂತಹ ಮಾರಿಯನ್ನ ಎದುರಿಸಬಹುದು. ನಾನು ಜನರಿಗೆ ಮಾಡುತ್ತಿರುವ ಕೆಲಸ ಮುಂದುವರಿದಿದೆ. ಈ ಲಾಕ್​ಡೌನ್, ಕೊರೊನಾ ಅಲೆ ತಗ್ಗಿದ ನಂತರ ನನ್ನ ಚಾರಿಟಬಲ್ ಟ್ರಸ್ಟ್​ನ ಅಕೌಂಟ್​ ಹಣವನ್ನ ಜನರಿಗೆ ಮುಕ್ತವಾಗಿ ಕೊಟ್ಟುಬಿಡ್ತೇನೆ ಅಂತಾ ಹೇಳಿದ್ದಾರೆ.

ನಾನು ಮಾಡುತ್ತಿರುವ ಈ ಸೇವೆಗೆ ಅದೆಷ್ಟೋ ಸ್ನೇಹಿತರು ಕೈಜೋಡಿಸಿದ್ದಾರೆ. ನನಗೆ ಪರಿಚಯ ಇಲ್ಲದವರೂ ಸಹ ನನ್ನ ಸಹಾಯಹಸ್ತದಲ್ಲಿ ಕೈಜೋಡಿಸಿದ್ದಾರೆ. ಎಷ್ಟೋ ರೈತರು ಬಂದಿದ್ದಾರೆ, ಬೇರೆ ಬೇರೆ ಊರುಗಳಿಂದ ಕರೆ ಮಾಡುತ್ತಿದ್ದಾರೆ ಎಂದರು.

The post ‘ಕಂಪ್ಲೀಟ್ ಲಾಕ್ಡೌನ್ ಮುಗಿದ್ಮೇಲೆ ನನ್ನ ಟ್ರಸ್ಟ್​ ಹಣವನ್ನ ಮುಕ್ತವಾಗಿ ಜನಕ್ಕೆ ಹಂಚುತ್ತೇನೆ’ appeared first on News First Kannada.

Source: newsfirstlive.com

Source link