ಮೈಸೂರು: ಕಾಡಿನಿಂದ ನಾಡಿಗೆ ಬಂದ ಆನೆಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಂಪಾಟ ನಡೆಸಿದ ಘಟನೆ ಹುಣಸೂರು-ಎಚ್.ಡಿ ಕೋಟೆ ರಸ್ತೆಯಲ್ಲಿರುವ ಗುರುಪುರ ಟಿಬೆಟ್ ಕ್ಯಾಂಪ್ ಬಳಿ ನಡೆದಿದೆ.
ನಾಗರಹೊಳೆ ಅರಣ್ಯದಿಂದ ಬಂದ ಕಾಡಾನೆಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಸಾರ್ವಜನಿಕರನ್ನೂ ಬೆನ್ನತ್ತಿ ಓಡಿ ಬಂದು ಸ್ಥಳದಲ್ಲಿ ಸಾಕಷ್ಟು ಆತಂಕವನ್ನುಂಟು ಮಾಡಿದೆ. ಬಳಿಕ ವಿಷಯ ತಿಳಿದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಆನೆಯನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
The post ಕಂಬಕ್ಕೆ ಗುದ್ದಿ ಕರೆಂಟ್ ಜೊತೆ ಒಂಟಿ ಸಲಗ ರಂಪಾಟ.. ದಿಗಿಲು ಹುಟ್ಟಿಸಿದ ಗಜರಾಜ appeared first on News First Kannada.