ಈಗ ಮಾವಿನ ಹಣ್ಣಿನ ಸೀಸನ್. ಮಾವಿನ ಹಣ್ಣಿನ ಪ್ರಿಯರಿಗೆ ಪರ್ವ ಕಾಲ. ಕಚ್ಚಾ ಮಾವಿನ ಹಣ್ಣಿನ ಜ್ಯೂಸ್ ಮಾಡಿಕೊಂಡು ಕುಡಿದರೆ ಈ ಬೇಸಿಗೆಗೆ ತಂಪು ನೀಡುವಷ್ಟು ಮತ್ತ್ಯಾವುದು ಇಲ್ಲ. ಅಷ್ಟೇ ಅಲ್ಲ ಇದರಿಂದ ಆರೋಗ್ಯ ಪ್ರಯೋಜನವೂ ಇದೆ. ಬೆಸಿಗೆ ಕಾಲದಲ್ಲಿ ಹಸಿವು ಕಡಿಮೆ ತಂಪಾಗಿ ಏಮಾದರೂ ಕುಡಿದು ಬಿಡುವ ಅಂತನ್ನಿಸಿ ಬಿಡುತ್ತದೆ.

ಸ್ತನ ಕ್ಯಾನ್ಸರ್ ನಿಂದ ರಕ್ಷಣೆ ನಿಡುತ್ತದೆ ಕಚ್ಚಾ ಮಾವಿನ ಜ್ಯೂಸ್ :

ಕಚ್ಚಾ ಮಾವಿನ ಜ್ಯೂಸ್ ನಲ್ಲಿರುವ ವಿಟಮಿನ್ ಸಿ ಶರೀರದ ಜೊತೆಗೆ ಪ್ರತಿಕ್ರಿಯೆ ನೀಡುತ್ತದೆ. ಇದರಿಂದ ಶರೀರದಲ್ಲಿ ಆ್ಯಂಟಿ ಆ್ಯಕ್ಸಿಡೆಂಟ್ ಗಳು ನಿರ್ಮಾಣಗೊಳ್ಳುತ್ತವೆ. ಈ ಆ್ಯಂಟಿ ಆ್ಯಕ್ಸಿಡೆಂಟ್ ಗಳ ಸಹಾಯದಿಂದ ಸ್ತನ ಕ್ಯಾನ್ಸರ್, ಸ್ಕಿನ್ ಕ್ಯಾನ್ಸರ್, ಕೊಲನ್ ಕ್ಯಾನ್ಸರ್ ಗಳಂತಹ ಕಾಯಿಲೆಗಳಿಂದ ಪಾರಾಗಲು ಕಚ್ಚಾ ಮಾವಿನ ಜ್ಯೂಸ್ ನನ್ನು ಆಗಾಗ ಸೇವಿಸುವುದು ಉತ್ತಮ.

ಡಿಪ್ರೆಶನ್ ಗೆ ರಾಮಭಾಣ :

ಈಗೀನವರಲ್ಲಿ ವಿಪರೀತ ಪ್ರಮಾಣದಲ್ಲಿ ಡಿಪ್ರೆಶನ್ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲಸದ ಒತ್ತಡ, ವೈಯಕ್ತಿಕ ಸಮಸ್ಯೆ, ಮಾನಸಿಕ ಸಮಸ್ಯೆಯ ಕಾರಣದಿಂದಾಗಿ ಡಿಪ್ರೆಶನ್ ಕೆಲವರಲ್ಲಿ ಉಂಟಾಗುತ್ತದೆ.

ಕಚ್ಚಾ ಮಾವಿನ ಹಣ್ಣಿನಲ್ಲಿರುವ ವಿಟಮಿನ್ ಬಿ6 , ಮೆದುಳನ್ನು ಒತ್ತಡ ಮುಕ್ತವಾಗಿಸುವ ಹಾರ್ಮೋನ್ ಗಳು ಶರೀರದಲ್ಲಿ ಉತ್ಪತ್ತಿಗೆ ಕಾರಣವಾಗುತ್ತದೆ ಮತ್ತು ಡಿಪ್ರೆಶನ್ ಕಡಿಮೆಗೊಳಿಸುತ್ತದೆ.

ಪಚನ ಕ್ರಿಯೆ ಸಮಸ್ಯೆಗೆ ಬೆಸ್ಟ್ :

ಯಾವಾಗಲಾದರೂ ಹೆಚ್ಚು ಊಟ ಮಾಡಿದರೆ ಅಥವಾ ಕಾರದ ಪದಾರ್ಥಗಳನ್ನು ಸೇವಿಸಿದರೆ ಡಯಾರಿಯಾ, ಹೊಟ್ಟೆ ಬಿಗಿತ, ಅಸಿಡಿಟಿ, ಹೊಟ್ಟೆನೋವು ಹಾಗೂ ಗ್ಯಾಸ್ ಗಳಂತಹ ಪಚನಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಕಚ್ಚಾ ಮಾವಿನ ಕಾಯಿಯಲ್ಲಿ ಪ್ಯಾಕ್ಟೀನ್ ಹೇರಳ ಪ್ರಮಾಣದಲ್ಲಿರುತ್ತದೆ. ಕಚ್ಚಾ ಮಾವಿನ ಕಾಯಿಯ ಜ್ಯೂಸ್ ಪಚನ ಕ್ರಿಯೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

ರೋಗಗಳ ವಿರುದ್ಧ ಹೋರಾಡುವಂತಹ ಕ್ಷಮತೆಯನ್ನು ಹೆಚ್ಚಿಸುತ್ತದೆ :

ಕಚ್ಚಾ ಮಾವಿನ ಪಾನಕ ಅಥವಾ ಜ್ಯೂಸ್ ನಲ್ಲಿ ವಿಟಮಿನ್ ಸಿ ಹಾಗೂ ಆ್ಯಂಟಿ ಆ್ಯಕ್ಸಿಡೆಂಟ್ ಗಳಿರುತ್ತವೆ. ಇವು ಬ್ಯಾಕ್ಟೀರಿಯಾಗೆ ಸಂಬಂಧಿಸಿದ ಕಾಯಿಲೆಗಳ ವಿರುದ್ಧ ಹೋರಾಡುವ ಕ್ಷಮತೆಯನ್ನು ಹೆಚ್ಚಿಸುತ್ತವೆ. ಜೊತೆಗೆ ಇದರಲ್ಲಿ ಮೆಲಿಕ್, ಸಿಟ್ರಿಕ್ ಹಾಗೂ ಆ್ಯಕ್ಸಾಲಿಕ್ ನಂತಹ ಹಲವು ಆಮ್ಲಗಳಿರುತ್ತವೆ. ಇವುಗಳು ಲೀವರ್ ನನ್ನು ಆರೋಗ್ಯಕರವಾಗಿರಿಸುತ್ತವೆ.  ಜಾಂಡಿಸ್ ನಂತಹ ಕಾಯಿಲೆಯಿಂದಲೂ ಕೂಡ ರಕ್ಷಣೆ ನೀಡುತ್ತವೆ ಅಂದರೇ ಅನುಮಾನ ಪಡಬೇಕಾಗಿಲ್ಲ.

ಕಚ್ಚಾ ಮಾವಿನ ಜ್ಯೂಸ್ ಕಣ್ಣಿನ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿರವ ಔಷಧ :

ಕಚ್ಚಾ ಮಾವಿನ ಜ್ಯೂಸ್ ನಲ್ಲಿ ವಿಟಮಿನ್ ಎ ಕೂಡ ಹೇರಳ ಪ್ರಮಾಣದಲ್ಲಿರುತ್ತದೆ. ಕಣ್ಣಿನ ಪೊರೆ, ಇರುಳು ಕುರುಡುತನ ಸಮಸ್ಯೆಗೆ ರಕ್ಷಣೆ ಕೂಡ ಒದಗಿಸುತ್ತದೆ.

ಆರೋಗ್ಯ – Udayavani – ಉದಯವಾಣಿ
Read More

Leave a comment