ಬಳ್ಳಾರಿ: ಸಾಮಾನ್ಯವಾಗಿ ಹಾವು ಕಂಡರೆ ಮಾರುದ್ದ ಓಡಿ ಹೋಗುವ ಜನರ ಮಧ್ಯೆ, ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಯುವನೋರ್ವ ಆಸ್ಪತ್ರೆಗೆ ಬಂದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಳ್ಳಿಯಲ್ಲಿ ನಡೆದಿದೆ.

ಇಂದು ಮುಂಜಾನೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗ್ರಾಮದ ಯುವಕ ಕಾಡಪ್ಪನ ಕಾಲಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ಎಚ್ಚರಗೊಂಡ ಕಾಡಪ್ಪ ಪಕ್ಕದಲ್ಲಿ ಇದ್ದ ಹಾವನ್ನು ನೋಡಿದ್ದಾನೆ. ಕೂಡಲೇ ಆ ಹಾವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಗ್ರಾಮದ ಮಧ್ಯದಲ್ಲಿಯೇ ನಡೆದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಇದನ್ನೂ ಓದಿ : ದಾರಿ ತಪ್ಪಿ ಬಳ್ಳಾರಿ ನಗರಕ್ಕೆ ಕರಡಿ ಎಂಟ್ರಿ

ಕಾಡಪ್ಪ ಹಾವು ಹಿಡಿದುಕೊಂಡು ಆಸ್ಪತ್ರೆಯ ಮುಂದೆ ಚಿಕಿತ್ಸೆಗಾಗಿ ಕಾದು ಕುಳಿತಿದ್ದು, ಆಸ್ಪತ್ರೆ ಆಗಮಿಸಿದ ವೈದ್ಯರು ಕಾಡಪ್ಪ ಕೈಯಲ್ಲಿ ಇದ್ದ ಹಾವುನ್ನು ಕಂಡ ಹೌಹಾರಿದ್ದಾರೆ. ಆಸ್ಪತ್ರೆಯ ಮುಂದೆ ಹಾವು ಹಿಡಿದುಕೊಂಡು ಕುಳಿತ ಕಾಡಪ್ಪನನ್ನು ನೋಡಲು ಜನ ಮುಗಿಬಿದಿದ್ದರು. ಬಳಿಕ ಆಸ್ಪತ್ರೆಯ ವೈದ್ಯರು ಕಾಡಪ್ಪನ ಕೈಯಲ್ಲಿ ಇದ್ದ ಹಾವನ್ನು ಬಿಡಿಸಿ ಚಿಕಿತ್ಸೆ ನೀಡಿದ್ದಾರೆ.

The post ಕಚ್ಚಿದ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದ ಭೂಪ appeared first on Public TV.

Source: publictv.in

Source link