ರಿಯಲ್ ಹೀರೋ ಸೋನು ಸೂದ್​ ಮಾಡ್ತಿರುವ ಸಮಾಜ ಸೇವೆಗೆ ಇಡೀ ದೇಶವೇ ತಲೆಬಾಗಿದೆ. ಇನ್ನು ಸೋನು ಸೂದ್ ಅವರಿಂದ ಸಹಾಯ ಪಡೆದ ಬಡವರು, ನಿರ್ಗತಿಕರು, ಸಾಮಾನ್ಯ ಜನರು ಅವರನ್ನ ದೇವರ ರೀತಿಯಲ್ಲಿ ಕಾಣ್ತಿರೋದು ಗೊತ್ತಿರೋ ವಿಷಯವೇ. ಅದರಂತೆ ಸೋನು ಸೂದ್​​ ಅವರ ಫೋಟೋ, ಕಟೌಟ್​​ಗಳನ್ನ ಇಟ್ಟು ಕೆಲವ್ರು ಪೂಜೆ ಮಾಡಿ, ಹಾಲಿನ ಅಭಿಷೇಕ ಮಾಡ್ತಿದ್ದಾರೆ.

ಇದೀಗ ತಮ್ಮ ಅಭಿಮಾನಿಗಳಿಗೆ ಸೋನು ಸೂದ್, ದೊಡ್ಡ ಕರೆಯನ್ನ ನೀಡಿದ್ದಾರೆ. ಅದೇನಂದ್ರೆ ದಯಮಾಡಿ ಎಲ್ಲರೂ ಹಾಲನ್ನ ಉಳಿಸಿ, ಕೆಲವರಿಗೆ ಅಗತ್ಯ ಇರುತ್ತದೆ. ಯಾರೂ ಸಹ ನನ್ನ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಬೇಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಆಂಧ್ರಪ್ರದೇಶದ ಕುರ್ನೂಲ್ ಮತ್ತು ನೆಲ್ಲೂರಿನಲ್ಲಿ ಸೋನು ಸೂದ್​ ಫೋಟೋಗೆ ಹಾಲಿನ ಅಭಿಷೇಕ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೇ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಸೋನು ಸೂದ್.. ನನಗೆ ಗೌರವ ಸಲ್ಲಿಸುವ ಆಸೆಯಲ್ಲಿ ಹಾಲನ್ನ ಯಾರೂ ಹಾಳು ಮಾಡಬೇಡಿ.. ಅಗತ್ಯ ಇರೋರಿಗೆ ಅದನ್ನ ಉಳಿಸಿ ಅಂತಾ ಹೇಳಿದ್ದಾರೆ.

The post ‘ಕಟೌಟ್​ ಮೇಲೆ ಹಾಲು ಸುರಿಯುವ ಬದಲು ಅಗತ್ಯ ಇರುವವರಿಗೆ ನೀಡಿ’ ಸೋನು ಸೂದ್ ಮನವಿ appeared first on News First Kannada.

Source: newsfirstlive.com

Source link