ಬೆಂಗಳೂರು: ಹನುಮಂತನಗರಲ್ಲಿ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮಣ್ಣು ಕುಸಿದು ಕಾರ್ಮಿಕರೊಬ್ಬರು ಸಿಲುಕಿದ ಘಟನೆ ನಡೆದಿದೆ. ಸೂಕ್ತ ಸಮಯಕ್ಕೆ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿದ್ದು, ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ.

ಶಂಕರ್ ನಾಗ್ ಸರ್ಕಲ್​ನ ಕೆಂಪೇಗೌಡ ಲೇಔಟ್​​ನಲ್ಲಿ ನೂತನವಾಗಿ ಖಾಸಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ವೇಳೆ ಸಿಬ್ಬಂದಿ, ರಸ್ತೆ ಬದಿ ಮಣ್ಣು ತೆಗೆಯುತ್ತಿದ್ದರಿಂದ ಮಣ್ಣು ಕುಸಿತವಾಗಿದೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಕಾರ್ಮಿಕನ ರಕ್ಷಣೆ ಮಾಡಿದ್ದಾರೆ.

The post ಕಟ್ಟಡ ಕಾಮಗಾರಿ ವೇಳೆ ರಸ್ತೆ ಬದಿ ಮಣ್ಣು ಕುಸಿತ.. ಬೆಂಗಳೂರಲ್ಲಿ ತಪ್ಪಿದ ಭಾರೀ ಅನಾಹುತ appeared first on News First Kannada.

Source: newsfirstlive.com

Source link