ಮಂಗಳೂರು: ಅರಬ್ಬೀ ಸಮುದ್ರದಲ್ಲಿ ತೌಕ್ತೆ ಚಂಡಮಾರುತದ ಪ್ರಭಾವದಿಂದ ನಿನ್ನೆ ಭಾರೀ ಮಳೆಯಾಗಿತ್ತು. ಇಂದು ಮಂಗಳೂರು ಸುತ್ತಮುತ್ತ ತಗ್ಗಿದ ತೌಕ್ತೆ ಪ್ರಭಾವ ತಗ್ಗಿದ್ದು, ನಿನ್ನೆ ರಾತ್ರಿಯಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ.

ಆದ್ರೆ ಮಂಗಳೂರು ಹೊರವಲಯದ ಉಳ್ಳಾಲ , ಸೋಮೇಶ್ವರ, ಕೈಕೊ, ಕೋಟೆಪುರ, ಸಸಿಹಿತ್ಲು, ಪಣಂಬೂರು, ಪ್ರದೇಶದಲ್ಲಿ ಕಡಲ ಕೊರೆತ ಮುಂದುವರೆದಿದೆ. ಈ ಹಿನ್ನೆಲೆ ಇಂದು ಕಡಲ ಕಿನಾರೆಯಿಂದ 245 ಜನರನ್ನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.  ನಿನ್ನೆ ಸಂಜೆ ಮೀನುಗಾರಿಕಾ ಸಚಿವ ಅಂಗಾರ ಕಡಲ ಕೊರೆತ ಸಂಭವಿಸಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಕಡಲ ತಡಿಯಲ್ಲಿ ಅಪಾಯದಲ್ಲಿರುವ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಹಿನ್ನೆಲೆ ಪಣಂಬೂರು, ಹೊಯಿಗೆ ಬಜಾರ್, ಕೋಟೆಪುರ , ಉಳ್ಳಾಲ ಮಸ್ಜಿದ್ ಪ್ರದೇಶ, ಸೋಮೇಶ್ವರ, ಸಸಿಹತ್ಲು ಕಿನಾರೆಯಿಂದ ಜನರನ್ನ ಸ್ಥಳಾಂತರಿಸಲಾಗಿದೆ.

The post ಕಡಲಕೊರೆತ: ಮಂಗಳೂರು ಸಮುದ್ರ ಕಿನಾರೆಯಿಂದ 245 ಜನರ ಸ್ಥಳಾಂತರ appeared first on News First Kannada.

Source: newsfirstlive.com

Source link