ಉಡುಪಿ: ತೌಕ್ತೆ ಚಂಡಮಾರುತದ ಹಿನ್ನೆಲೆ ನಿನ್ನೆ ಕಡಲ ಅಬ್ಬರಕ್ಕೆ ಸಿಲುಕಿದ್ದ ಮತ್ತೊಂದು ಬೋಟ್ ಇಂದು ಪತ್ತೆಯಾಗಿದೆ. ಕಾಪು ಬೀಚ್‌ನಿಂದ 25 ನಾಟಿಕಲ್ ಮೈಲಿ ದೂರದಲ್ಲಿ ಬೋಟ್ ಕಾಣಿಸಿಕೊಂಡಿದೆ.

ಸದ್ಯ ಬೋಟ್‌ನಲ್ಲಿ 9 ಮಂದಿ ಸುರಕ್ಷಿತವಾಗಿದ್ದಾರೆ. ಅವರೆಲ್ಲಾ ತಮ್ಮನ್ನು ರಕ್ಷಣೆ ಮಾಡುವಂತೆ ಸೆಲ್ಫಿ ವಿಡಿಯೋ ಮೂಲಕ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಬೋಟ್​ನಲ್ಲಿ ಇರುವವರನ್ನ ಸುರಕ್ಷಿತವಾಗಿ ದಡಕ್ಕೆ ಕರೆತರಲು ಕೋಸ್ಟ್ ಗಾರ್ಡ್ ಸಿಬ್ಬಂದಿ ಪ್ರಯತ್ನ ಮಾಡ್ತಿದ್ದಾರೆ.

ಈ ಮಧ್ಯೆ  ರಕ್ಷಣಾ ಕಾರ್ಯಚರಣೆ ಕಡಲ ಅಲೆಗಳ ಅಬ್ಬರ ಅಡ್ಡಿಯಾಗಿದೆ. ಸಮುದ್ರ ಅಬ್ಬರ ಕಡಿಮೆಯಾಗ್ತಿದ್ದಂತೆ ರಕ್ಷಣಾ ಕಾರ್ಯಚರಣೆ ಮುಂದುವರೆಯಲಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಜಿ ಜಗದೀಶ್, ಶಾಸಕರ ಲಾಲಾಜಿ ಮೆಂಡನ್ ಎಸ್‌.ಪಿ ಎಸ್ ವಿಷ್ಣುವರ್ಧನ್ ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ.

 

The post ಕಡಲಬ್ಬರಕ್ಕೆ ಸಿಲುಕಿದ್ದ ಮತ್ತೊಂದು ಬೋಟ್ ಪತ್ತೆ, ಸಹಾಯಕ್ಕಾಗಿ 9 ಮಂದಿ ಮೊರೆ appeared first on News First Kannada.

Source: newsfirstlive.com

Source link