ಹಾಸನ: ಇಂದಿನಿಂದ ಹಾಸನ ಜಿಲ್ಲೆ ಅನ್​​ಲಾಕ್​ ಆಗಿದ್ದು, ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ನೀಡಿದ್ದಾರೆ.

ಈ‌ ಹಿಂದೆ ಮೂರು ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಉಳಿದ ನಾಲ್ಕು ದಿನಗಳು ಸಂಪೂರ್ಣ ಲಾಕ್ ಡೌನ್ ಮಾಡಿ ಜಿಲ್ಲಾಡಳಿತ ಆದೇಶ ನೀಡಿತ್ತು. ಸದ್ಯ ಅನ್​ಲಾಕ್​ ಆಗಿರುವುದರಿಂದ ರಾಜ್ಯ ಸರ್ಕಾರ ಹೊರಡಿಸಿರುವ ನಿಯಮಗಳು ಹಾಸನ ಜಿಲ್ಲೆಯಲ್ಲಿ ಜಾರಿ ಆಗಲಿದೆ.

ಜಿಲ್ಲೆಯಲ್ಲಿ ಕಡಿಮೆಯಾದ ಕೊರೊನಾ ಪಾಸಿಟಿವ್ ರೇಟ್ 4.69ಕ್ಕೇ ಇಳಿಕೆಯಾಗಿದೆ. ಅನ್​​ಲಾಕ್​ಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿರುವುದರಿಂದ ಬೇಲೂರು ಚನ್ನಕೇಶವ ದೇವಾಲಯ ಓಪನ್ ಆಗಿದ್ದು, ಮಹಾದ್ವಾರಕ್ಕೆ ಅರ್ಚಕರು ಪೂಜೆ ಸಲ್ಲಿಸಿದರು. ಅರ್ಚಕರಿಗೆ ಸ್ಥಳೀಯ ಶಾಸಕ ಲಿಂಗೇಶ್ ಮತ್ತು ದೇವಾಲಯ ಮುಖ್ಯ ಕಾರ್ಯನಿರ್ವಹಣಧಿಕಾರಿ ವಿದ್ಯುನ್ ಲತಾ ಸಾಥ್ ನೀಡಿದರು.

The post ಕಡಿಮೆಯಾದ ಕೊರೊನಾ ಪಾಸಿಟಿವ್ ರೇಟ್- 2 ತಿಂಗಳ ಬಳಿಕ ಹಾಸನ ಜಿಲ್ಲೆ ಅನ್​ಲಾಕ್ appeared first on News First Kannada.

Source: newsfirstlive.com

Source link