ಈಗಿನ ಯುವ ಜನತೆಯ ಒಂದು ಬಹುದೊಡ್ಡ ಸಮಸ್ಯೆ ಅಂದರೆ ಬೊಜ್ಜನ್ನು ಕರಗಿಸಿಕೊಳ್ಳುವುದು. ತಾವು ತುಂಬಾ ದಪ್ಪ ಇದ್ದು ನೋಡುಗರು ನಮ್ಮನ್ನು ನೋಡಿ ಅಣಕಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಸಣ್ಣ ಆಗಲು ಬಯಸುತ್ತಾರೆ. ಇದಕ್ಕಾಗಿ ಏನೇನೋ ಚಿಕಿತ್ಸೆಯನ್ನು ಪಡೆಯುತ್ತಾರೆ. ಅಲ್ಲದೆ ಮಾತ್ರೆಗಳನ್ನು ತಿನ್ನುತ್ತಾರೆ. ಆದ್ರೆ ದೇಹ ತೂಕವನ್ನು ನೈಸರ್ಗಿಕವಾಗಿ ಸಿಗುವ ಆಹಾರದಿಂದಲೂ ಕರಗಿಸಬಹುದು ಎಂಬುದನ್ನು ತಿಳಿಯಬೇಕು. ಇನ್ನು ನಮಗೆ ತಿಳಿಯದೇ ನಮ್ಮ ಬೊಜ್ಜು ಹೆಚ್ಚಾಗುವಂತಹ ಆಹಾರಗಳನ್ನು ಸೇವಿಸುತ್ತೇವೆ. ಇವೆಲ್ಲವನ್ನು ಕಡಿಮೆ ಮಾಡಬೇಕು. ಹಾಗಾದ್ರೆ ಯಾವ ನೈಸರ್ಗಿಕ ಆಹಾರ ನಮ್ಮ ದೇಹದ ತೂಕವನ್ನು ಅಥ‍ವಾ ಬೊಜ್ಜನ್ನು ಕರಗಿಸುತ್ತೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸಿಹಿ ಆಲೂಗಡ್ಡೆ:

ನಮ್ಮ ದೇಹ ತೂಕವನ್ನು ಕಡಿಮೆ ಮಾಡುವವಲ್ಲಿ ನಾವು ಸೇವಿಸುವ ಕಾರ್ಬೋಹೈಡ್ರೇಟ್ ಗಳ ಪಾತ್ರವೂ ಮುಖ್ಯವಾಗಿರುತ್ತದೆ. ಸಿಹಿ ಆಲೂಗಡ್ಡೆಯಲ್ಲಿ ಹೆಚ್ಚು ಕಾರ್ಬೋಹೈಡ್ರೆಡ್ ಪ್ರಮಾಣ ಮತ್ತು ಫೈಬರ್ ಅಂಶವೂ ಇದೆ. ಅಲ್ಲದೆ ಕಡಿಮೆ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿದ ತಿನಿಸು ಇದಾಗಿದೆ. ಇನ್ನು ಮೈಕ್ರೋನ್ಯೂಟ್ರೀಷಿಯನ್ ಅಂಶಗಳನ್ನು ಹೊಂದಿದೆ. ಇದ್ರಿಂದ ಆರೋಗ್ಯಕರವಾಗಿ ದೇಹವನ್ನು ಸಣ್ಣ ಮಾಡಲು ಈ ತರಕಾರಿ ಬಹಳ ಸಹಾಯವಾಗುತ್ತದೆ.

ಸೇಬು :

ದೇಹ ಕರಗಿಸಲು ಸೇಬು ಬಹಳ ಪರಿಣಾಮಕಾರಿಯಾದ ಪಾತ್ರವನ್ನು ವಹಿಸುತ್ತದೆ. ತಜ್ಞರು ಹೇಳುವ ಪ್ರಕಾರ ಸೇಬಿನಲ್ಲಿ ಹೆಚ್ಚು ಕಾರ್ಬೋಹೈಡ್ರೆಡ್ ಪ್ರಮಾಣ ಇದ್ದು, ಶೇ 86ರಷ್ಟು ನೀರಿನ ಅಂಶ ಇರುತ್ತದೆ. ಇದರಿಂದ ದೇಹದ ನೀರಿನ ಅಂಶ ಹೆಚ್ಚಿಸಲು ಮತ್ತು ಜೀರ್ಣ ಕ್ರಿಯೆಯನ್ನು ಸುಲಭ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್ ಅಂಶವು ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಓಟ್ಸ್ :

ಸಾಮಾನ್ಯವಾಗಿ ಓಟ್ಸ್ ಅನ್ನು ಈಗ ಎಲ್ಲರೂ ಬಳಸುತ್ತಿದ್ದಾರೆ. ಇದು ಕೂಡ ದೇಹ ಸಣ್ಣ ಆಗಲು ತುಂಬಾ ಸಹಾಯ ಮಾಡುತ್ತದೆ. ಕಾರ್ಬೋಹೈಡ್ರೆಡ್ ಪ್ರಮಾಣ ಹೆಚ್ಚಿರುವ ಆಹಾರಗಳ ಪೈಕಿ ಈ ಓಟ್ಸ್ ಕೂಡ ಒಂದು. ಸಕ್ಕರೆ ಅಥವಾ ಉಪ್ಪನ್ನು ಬೆರೆಸಿ ಓಟ್ಸ್ ತಿನ್ನುವ ಅಭ್ಯಾಸ ಜನರಲ್ಲಿ ಇದೆ. ಆದ್ರೆ ತಜ್ಞರು ಹೇಳುವ ಪ್ರಕಾರ, ಇದನ್ನು ಸಕ್ಕರೆ ಇಲ್ಲದೆ ಸೇವನೆ ಮಾಡಿದರೆ ಒಳ್ಳೆಯದು.

ಬ್ರೌನ್ ರೈಸ್ (ಕುಚಲಕ್ಕಿ) :

ಸಾಮಾನ್ಯವಾಗಿ ಕರಾವಳಿ ಪ್ರದೇಶದ ಜನರು ಹೆಚ್ಚು ಬಳಸುವ ಕುಚಲಕ್ಕಿ ಅನ್ನ ಕೂಡ ದೇಹದ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯಕಾರಿಯಾಗಿದೆ. ನಿಮಗೆ ಆಶ್ಚರ್ಯ ಆಗಬಹುದು, ಅನ್ನ ತಿಂದರೆ ದಪ್ಪ ಆಗಲ್ವಾ ಅಂತಾ? ಆದ್ರೆ ಈ ಬ್ರೌನ್ ರೈಸ್ ತೂಕ ಇಳಿಸಿದಲು ಉತ್ತಮ ಆಹಾರ. ಜಪಾನಿನಲ್ಲಿ 430 ಜನರ ಮೇಲೆ ಪ್ರಯೋಗ ಮಾಡಿ ತಜ್ಞರು ಅಭಿಪ್ರಾಯಕ್ಕೆ ಬಂದಿದ್ದಾರೆ. ಅಲ್ಲದೆ ಇದರಲ್ಲಿ ಫೈಬರ್ ಅಂಶ ಕೂಡ ಇದೆ.

ಗೋಧಿ ಬ್ರೆಡ್ :

ಗೋಧಿ ಪದಾರ್ಥಗಳು ದೇಹದ ತೂಕ ಇಳಿಸುವಲ್ಲಿ ಸಹಾಯಕವಾಗುವುದರ ಜೊತೆದೆ ದೇಹದ ಕಾರ್ಬ್ರೋಹೈಡ್ರೆಡ್ ಪ್ರಮಾಣ ಹೆಚ್ಚಿಸುತ್ತದೆ. ಇನ್ನು ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗುವ ಬೊಜ್ಜನ್ನು ಕರಗಿಸಲೂ ಈ ಗೋಧಿ ಬ್ರೆಡ್ ತುಂಬಾ ಸಹಾಯವಾಗುತ್ತದೆ.

ಆರೋಗ್ಯ – Udayavani – ಉದಯವಾಣಿ
Read More

By

Leave a Reply