ಮಂಗಳೂರು: ಕಣಜದ ಹುಳು ಕಡಿತದಿಂದ ಗೃಹರಕ್ಷಕ ದಳದ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಎಂಬಲ್ಲಿ ನಡೆದಿದೆ.
ಕಟೀಲು ಬಳಿಯ ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್ (35) ಮೃತ ದುರ್ದೈವಿ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಕಣಜದ ಹುಳುಗಳ ದಾಳಿಗೊಳಲಾಗಿದ್ದ ಕಿನ್ನಿಗೋಳಿ ಶಾಲಾ ಮಕ್ಕಳನ್ನು ರಕ್ಷಿಸಿದ್ದರು. ಈ ವೇಳೆ ಅವರು ಹುಳುಗಳ ಕಡಿತಕ್ಕೆ ಒಳಗಾಗಿದ್ದರು. ಕಡಿತಕ್ಕೊಳಗಾದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ತಾವು ಚಿಕಿತ್ಸೆ ಪಡೆಯಲು ನಿರಾಕರಿಸಿ ಮನೆಗೆ ತೆರಳಿದ್ದರು. ಆದರೆ ಮನೆಯಲ್ಲಿ ನೋವಿನಿಂದ ತೀವ್ರ ಅಸ್ವಸ್ಥರಾದ ಅವರು ಮೃತಪಟ್ಟಿದ್ದಾರೆ..