ಕೊರೊನಾದಂತೆ ಉಗ್ರರು ಕೂಡ ಇದೀಗ ವೇಷ ಬದಲಿಸಿ, ಬಣ್ಣ ಬದಲಿಸಿ ರೂಪಾಂತರಗೊಂಡು ಅಟ್ಯಾಕ್ ಮಾಡ್ತಿದ್ದಾರೆ. ಸಾಮಾನ್ಯ ಜನರಂತೆ ಎಂಟ್ರಿ ಕೊಡುವ ಈ ಅರೆಕಾಲಿಕ ಉಗ್ರರು ವಿಧ್ವಂಸಕ ಕೃತ್ಯಗಳನ್ನು ಎಸಗಿದ ನಂತರ ಸಣ್ಣ ಸುಳಿವನ್ನು ಬಿಟ್ಟು ಕೊಡದೇ ಎಸ್ಕೇಪ್ ಆಗ್ತಿದ್ದಾರೆ. ಭಾರತೀಯ ಭದ್ರತಾ ಪಡೆಗಳಿಗೆ ಇದೀಗ ಈ ಅರೆಕಾಲಿಕ ಉಗ್ರರು ದೊಡ್ಡ ಸವಾಲನ್ನೇ ಒಡ್ಡಿದ್ದಾರೆ.

ಭಾರತದಲ್ಲಿ ಲಾಕ್ ಡೌನ್ ವೇಳೆ ಎಲ್ಲ ವಲಯವು ಸ್ತಬ್ಧವಾಗಿತ್ತು. ಕ್ರೈಂ ರೇಟ್ ಕೂಡ ಇಳಿಕೆಯಾಗಿತ್ತು. ಭಯೋತ್ಪಾಕರು ಕೂಡ ಬಾಲ ಮುದುಡಿಕೊಂಡು ಗೂಡು ಸೇರ್ಕೊಂಡು ಬಿಟ್ಟಿದ್ರು. ಆದ್ರೆ ಯಾವಾಗ ಆರ್ಥಿಕ ಚಟುವಟಿಕೆಗಳು ಗರಿಗೆದರ ತೊಡಗಿತ್ತೋ ಪಿಸ್ತೂಲ್, ಗುಂಡುಗಳ ಶಬ್ದಗಳು ಕೂಡ ಕೇಳಲು ಶುರುವಾಗಿದೆ. ಉಗ್ರರು ವೇಷ ಬದಲಿಸಿ, ಬಣ್ಣ ಬದಲಿಸಿ ಗೂಡಿನಿಂದ ಹೊರ ಬಂದಿದ್ದು, ಬಾಲ ಬಿಚ್ಚಲು ಶುರು ಮಾಡಿದ್ದಾರೆ. ಡಿಫ್ರೆಂಟ್ ಡಿಫ್ರೆಂಟ್ ಸ್ಟೈಲಲ್ಲಿ ಅಟ್ಯಾಕ್ ಮಾಡ್ತಿದ್ದಾರೆ. ಡ್ರೋನ್ ದಾಳಿಯ ಬೆನ್ನಲ್ಲೇ ಇದೀಗ ಭಾರತೀಯ ಭದ್ರತಾ ಅಧಿಕಾರಿಗಳು ಮತ್ತೊಂದು ಆತಂಕಕಾರಿ ವಿಷ್ಯವನ್ನು ಹೊರ ಹಾಕಿದ್ದಾರೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಮತ್ತೆ ಉಗ್ರರ ಆರ್ಭಟ?
ಭದ್ರತಾ ಪಡೆಗಳಿಗೆ ಹೊಸ ಮಾದರಿಯ ಉಗ್ರರ ಕಾಟ!
ರೂಪಾಂತರಗೊಂಡ ಉಗ್ರರಿಂದ ಎದುರಾಗ್ತಿದೆ ಸಂಕಷ್ಟ!

ಕೊರೊನಾದಂತೆ ಭಯೋತ್ಪಾದಕರು ಕೂಡ ಇದೀದ ವೇಷ ಬದಲಿಸಿ, ಬಣ್ಣ ಬದಲಿಸಿ ಅಟ್ಯಾಕ್ ಮಾಡ್ತಿದ್ದಾರೆ. ಉಗ್ರರು ಇದೀಗ ಹೊಸ ರೂಪ ತಾಳಿದ್ದು ಭದ್ರತಾ ಪಡೆಗಳು ತಲೆ ನೋವು ಹೆಚ್ಚಿಸಿದೆ. ಇವ್ರ ಇತರೆ ಉಗ್ರರಂತೆ ದಾಳಿ ಮಾಡಿದ್ಮೇಲೆ ಇಲ್ಲೇ ಅಡಗಿ ಕೂರಲ್ಲ. ಉಗ್ರರ ನೆಲೆಯಲ್ಲೂ ಕೂಡ ಹೆಚ್ಚು ಸಮಯ ಇರಲ್ಲ. ಇವ್ರು ಸಾಮಾನ್ಯ ಜನರಂತೆ ಜನರ ನಡುವೆ ಓಡಾಡಿ ದಾಳಿ ಮಾಡ್ತಾರೆ. ಕೃತ್ಯ ಎಸಗಿದ ನಂತರ ಸಣ್ಣ ಸುಳಿವನ್ನು ಕೂಡ ಬಿಟ್ಟು ಕೊಡದೆ ಎಸ್ಕೇಪ್ ಆಗ್ತಿದ್ದಾರೆ. ಇವ್ರು ಹೆಚ್ಚು ಸಮಯ ಕಾಶ್ಮೀರದಲ್ಲಿ ನೆಲೆ ನಿಲ್ಲದ ಕಾರಣ, ಇವ್ರ ನೆಲೆಯನ್ನು ಹುಡುಕುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೈಬ್ರೀಡ್ ಅಥವಾ ಅರೆಕಾಲಿಕ ಎಂಬ ಹೊಸ ಮಾದರಿಯ ಉಗ್ರರ ಉಪಟಳ ಇದೀಗ ಕಾಶ್ಮೀರದಲ್ಲಿ ಹೆಚ್ಚಾಗಿದ್ದು, ಇದು ಭದ್ರತಾ ಪಡೆಗಳ ಕಳವಳಕ್ಕೂ ಕಾರಣವಾಗಿದೆ.

ದಾಳಿ ಮಾಡಲೆಂದೇ ಭಾರತಕ್ಕೆ ಎಂಟ್ರಿ ಕೊಡ್ತಿದ್ದಾರಾ ?
ಯುವಕರ ಬ್ರೈನ್ ವಾಶ್ ಮಾಡಿದ್ರಾ ಭಯೋತ್ಪಾದಕರು?
ದಾಳಿ ನಡೆಸಿ ವಾಪಸ್ ಆಗುವ ಅರೆಕಾಲಿಕ ಉಗ್ರರಾ ಇವ್ರು?

ಪಾಕಿಸ್ತಾನ ಸರ್ಕಾರ ಹಾಗೂ ಗುಪ್ತಚರ ಏಜೆನ್ಸಿ ಐಎಸ್ಐ ಕಾಶ್ಮೀರದಲ್ಲಿ ಹಲವು ಯುವಕರ ಬ್ರೈನ್ ವಾಶ್ ಮಾಡಿದ್ದು, ಯುವಕರ ಮೂಲಕವೇ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ ಎನ್ನಲಾಗಿದೆ. ಈ ಉಗ್ರರು ಕಾಶ್ಮೀರಕ್ಕೆ ದಾಳಿ ಮಾಡಲೆಂದೇ ಸಾಮಾನ್ಯ ಜನರಂತೆ ಎಂಟ್ರಿ ಕೊಡ್ತಿದ್ದು, ವಿಧ್ವಂಸಕ ಕೃತ್ಯ ಎಸಗಿದ ನಂತರ ಮತ್ತೆ ತಮ್ಮ ಗೂಡುಗಳನ್ನು ಸೇರ್ಕೊಳ್ತಿದ್ದಾರೆ. ಖಚಿತ ಸ್ಥಳ, ನಿರ್ದಿಷ್ಟ ಜನರನ್ನು ಗುರಿಯಾಗಿಸಿಕೊಂಡು ಈ ಅರೆಕಾಲಿಕ ಉಗ್ರರು ದಾಳಿ ನಡೆಸಿ ರಕ್ತ ಹರಿಸುತ್ತಿದ್ದಾರೆ. ಈ ಅರೆಕಾಲಿಕ ಉಗ್ರರಲ್ಲಿ ಹೆಚ್ಚಿನವರು ಯುವಕರೇ ಇದ್ದಾರೆ.

ಸಣ್ಣ ಪಿಸ್ತೂಲ್ ಗಳಿಂದ ದಾಳಿ ಮಾಡ್ತಿರುವ ಯುವಕರು
ಉಗ್ರರ ಪಟ್ಟಿಯಲ್ಲಿ ಇಲ್ಲ ಅರೆಕಾಲಿಕ ಉಗ್ರರ ಹೆಸರು
ಹೈಬ್ರೀಡ್ ಉಗ್ರರಿಂದ ಭಯಗೊಂಡಿರುವ ಜನಸಾಮಾನ್ಯರು

ಈ ಹೈಬ್ರೀಡ್ ಉಗ್ರರನ್ನು ಟ್ರಾಕ್ ಮಾಡ್ತಿರುವುದು ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಅರೆಕಾಲಿಕ ಉಗ್ರರು ಭದ್ರತಾ ಪಡೆಗಳ ಲಿಸ್ಟ್ ನಲ್ಲಿ ಇಲ್ಲದ ಕಾರಣ ಇವ್ರ ಚಲನವಲನಗಳನ್ನ ಪತ್ತೆ ಹಚ್ಚಿ, ಇವ್ರರನ್ನು ಟ್ರ್ಯಾಕ್ ಮಾಡುವುದು ಸುಲಭದ ಮಾತಲ್ಲ. ಇದುವೇ ಭದ್ರತಾ ಪಡೆಗಳಿಗೆ ಹೆಚ್ಚು ತಲೆ ನೋವು ತರಿಸಿದೆ. ಈ ಅರೆಕಾಲಿಕ ಉಗ್ರರು , ಐಎಸ್ಐ ನಂತಹ ಉಗ್ರ ಸಂಘಟನೆಗಳಿಂದ ತರಬೇತಿ ಪಡೆದು ದಾಳಿ ಮಾಡ್ತಿದ್ದಾರೆ ಎನ್ನಲಾಗಿದೆ. ಇವರು ಊಸರವಳ್ಳಿ ತರ ಕ್ಷಣಕ್ಕೊಂದರಂತೆ ವೇಷ ಬಣ್ಣ, ರೂಪ ಬದಲಿಸಿಕೊಳ್ತಿದ್ದಾರೆ. ದಾಳಿ ಮಾಡೋ ತನ್ಕಾ ಒಂದು ರೂಪವಾದ್ರೆ, ಇವರದ್ದು ದಾಳಿ ಮಾಡಿದ್ಮೇಲೆ ಮತ್ತೊಂದು ರೂಪ. ಕೃತ್ಯ ಎಸಗಿದ ನಂತರ ಸಾಮಾನ್ಯ ಜನರಂತೆ ಮತ್ತೆ ಜೀವನ ಶೈಲಿ ಮುಂದುವರೆಸ್ತಾರೆ. ಹೀಗೆ ವೆರೈಟಿ ವೆರೈಟಿ ರೂಪ ತಾಳಿ ದಾಳಿ ಮಾಡ್ತಿರೋದರಿಂದಲೇ ಭದ್ರತಾ ಸೇನೆಗಳಿಗೆ ಸವಾಲು ಉಂಟಾಗಿರುವುದು.

ಅಲ್ಲದೇ ಹೈಬ್ರೀಡ್ ಉಗ್ರರು ಸಾಮನ್ಯ ಜನರ ಮೇಲೆ ದಾಳಿ ಮಾಡುವ ಮೂಲಕ ಭಯದ ವಾತಾವರಣ ಸೃಷ್ಠಿಸಲು ಮುಂದಾಗಿದ್ದಾರೆ. ಅಂಗಡಿ ಮಾಲೀಕರ ಮೇಲೂ ಕೂಡ ಅಟ್ಯಾಕ್ ಮಾಡ್ತಿದ್ದಾರೆ. ಮೇಲ್ನೋಟಕ್ಕೆ ಇವರು ಸಾಮಾನ್ಯ ಜನರಂತೆ ಕಾಣುವ ಕಾರಣ ಜನರು ಕೂಡ ಇಂತಹ ವೇಷ ಬದಲಿಸಿದ ಉಗ್ರರಿಂದ ಭಯಭೀತರಾಗಿದ್ದಾರೆ.

ಅರೆಕಾಲಿಕ ಉಗ್ರರ ಮುಂದಿರುವ ಟಾರ್ಗೆಟ್ ಯಾರು?
ಈ ಹೈಬ್ರೀಡ್ ಉಗ್ರರ ಅಸಲಿ ಉದ್ದೇಶ ಏನು ಗೊತ್ತಾ?
ವಾರದ ಅಂತರದಲ್ಲೇ ಮೂರು ಬಾರಿ ಉಗ್ರರ ದಾಳಿ

ವಿಧ್ವಂಸಕ ಕೃತ್ಯ ಎಸಗಲು ಅಡ್ಡಿ ಪಡಿಸುತ್ತಿರುವ ಜನರೇ ಈ ಅರೆಕಾಲಿಕ ಉಗ್ರರ ಮೈನ್ ಟಾರ್ಗೆಟ್. ಪೊಲೀಸ್ ಸಿಬ್ಬಂದಿ ಹಾಗೂ ಭದ್ರತಾ ಪಡೆಗಳನ್ನೇ ಗುರಿಯಾಗಿಸಿ ಇವರು ದಾಳಿ ಮಾಡ್ತಿದ್ದಾರೆ. ಸಣ್ಣ ಸಣ್ಣ ಪಿಸ್ತೂಲ್ ಗಳ ಮೂಲಕವೇ ಈ ಅರೆಕಾಲಿಕ ಉಗ್ರರು ದಾಳಿ ಮಾಡ್ತಿದ್ದಾರೆ. ಜೂನ್.17 ರಂದು ಕರ್ತ್ಯವ್ಯ ಮುಗಿಸಿ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿದ ಈ ಉಗ್ರರು, ನಂತರ 5 ದಿನದ ಅಂತರದಲ್ಲಿ ಪೊಲೀಸ್ ಇನ್ಸ್ ಪೆಕ್ಟರೊಬ್ಬರನ್ನು ದಾಳಿ ಮಾಡಿ ಹತ್ಯೆ ಮಾಡಿತ್ತು. ಇದಾದ ಮರುದಿನವೇ ಅಂಗಡಿ ಮಾಲಿಕರೊಬ್ಬರ ಮೇಲೂ ಕೂಡ ಈ ಉಗ್ರರು ಪಿಸ್ತೂಲ್ ನಿಂದ ದಾಳಿ ಮಾಡಿದ್ರು. ಒಂದೇ ವಾರದ ಅಂತರದಲ್ಲಿ ಮೂರು ಬಾರಿ ದಾಳಿ ಮಾಡಿದ್ರು, ಇವ್ರ ಮುಖ ಚಹರೆಯಾಗಲಿ, ಇವ್ರ ಕಳ್ಳ ಹೆಜ್ಜೆ ಗುರುತಾಗಲಿ ಇನ್ನೂ ಕೂಡ ಭದ್ರತಾ ಅಧಿಕಾರಿಳಿಗೆ ಸ್ಪಷ್ಟವಾಗಿಲ್ಲ. ಇದುವೇ ಇದೀಗ ಅಧಿಕಾರಿಗಳ ತಳಮಳಕ್ಕೂ ಕಾರಣವಾಗಿದೆ.

ಜನ ಸಾಮಾನ್ಯರಲ್ಲಿ, ವ್ಯಾಪಾರಸ್ಥರಲ್ಲಿ ಭಯ ಮೂಡಿಸುವುದೇ ಇವರ ಈ ಹೈಬ್ರೀಡ್ ಉಗ್ರರ ಮುಖ್ಯ ಗುರಿ. ಈ ಮೂಲಕ ವ್ಯಾಪಾರಕ್ಕೆ ಅಡ್ಡಿ ಪಡಿಸುವುದರ ಜೊತೆಗೆ ದೇಶದ ಆರ್ಥಿಕತೆಗೆ ಪೆಟ್ಟು ಕೊಡುವುದೇ ಇವರ ಮೈನ್ ಟಾರ್ಗೆಟ್ ಎನ್ನಲಾಗಿದೆ. ಒಟ್ಟಿನಲ್ಲಿ ಲಾಕ್ ಡೌನ್ ವೇಳೆ ಮಕಾಡೆ ಮಲಗಿದ್ದ ಉಗ್ರರು ಇದೀಗ ಎದ್ದು ನಿಂತ್ತಿದ್ದಾರೆ. ಕೊರೊನಾ ಕಂಟ್ರೋಲ್ ಬಂದ ಕಾರಣ ಒಂದೊಂದೆ ರಾಜ್ಯಗಳು ಅನ್ ಲಾಕ್ ಮಾಡ್ತಿದೆ. ಇವು ಉಗ್ರರು ಕೂಡ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪಲಾಯನ ಮಾಡಲು ಕೂಡ ಅವರಿಗೆ ರಹದಾರಿಯಾಗಬಹುದು. ರಕ್ಷಣಾ ಇಲಾಖೆ ಕೂಡಲೇ ಎಷ್ಟು ಬೇಗ ಇಂತಹ ನೀಚ ಹುಳಗಳನ್ನು ಬಲೆಗೆ ಬೀಳಿಸುತ್ತೋ ಅಷ್ಟು ಒಳ್ಳೆಯದು. ಇಲ್ಲವಾದ್ರೆ ಅಪಾಯ ಮಾತ್ರ ತಪ್ಪಿದಲ್ಲ.

ಅರೆಕಾಲಿಕ ಉಗ್ರರು ಮೂರು ಬಾರಿ ದಾಳಿ ಮಾಡಿದ್ರು ಕೂಡ ಇನ್ನೂ ಇವರ ಚಲನ ವಲನ ಪತ್ತೆಯಾಗದಿರುವುದು ನಿಜಕ್ಕೂ ಆತಂಕ ಹೆಚ್ಚಿಸಿದೆ. ಈ ಹೈಬ್ರೀಡ್ ಉಗ್ರರು ಇಲ್ಲೇ ನಗರದಲ್ಲಿ ಓಡಾಡಿದ್ರು ಅವರನ್ನು ಪತ್ತೆ ಹಚ್ಚುವುದು ಕಷ್ಟ. ಆದ್ದರಿಂದ ಇವರನ್ನ ಖೆಡ್ಡಾಗೆ ಕೆಡವಲು ಹೊಸ ರಣತಂತ್ರವನ್ನೇ ರೂಪಿಸಬೇಕಾಗ ಜವಾಬ್ದಾರಿ ಪೊಲೀಸರ ಮೇಲಿದ್ದು, ಅಧಿಕಾರಿಗಳು ಯಾವ ತಂತ್ರ ರೂಪಿಸ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

The post ಕಣವೆ ನಾಡಲ್ಲೀಗ ಹೈಬ್ರಿಡ್ ಉಗ್ರರ ಕಾಟ.. ಯಾರಿವರು..? ಎಷ್ಟು ಡೇಂಜರ್..? appeared first on News First Kannada.

Source: newsfirstlive.com

Source link