ಕಣ್ಣೀರು ತರಿಸುತ್ತೇ ಪುನೀತ್​ ಬಗ್ಗೆ ರಾಘಣ್ಣ ಆಡಿದ ಈ ಮಾತುಗಳು

‘‘ಅಪ್ಪುವನ್ನ ನಾವು ಹೂತಿಲ್ಲ, ಎಲ್ಲರಲ್ಲೂ ಬಿತ್ತಿದ್ದೇವೆ’’. ‘‘ಮಗುವಾಗಿ ಬಂದ ಅಪ್ಪನಾಗಿ ಹೋಗಿ ಬಿಟ್ಟ’’. ‘‘ನನಗೂ ನನ್ನ ಅಣ್ಣನಿಗೂ ಹಾಗೂ ಎಲ್ಲರಿಗೂ ಬದುಕಿದ್ರೆ ಹೇಗೆ ಬದುಕಬೇಕು ಅನ್ನೋದನ್ನ ಹೇಳಿಕೊಟ್ಟ’’. ಈ ರೀತಿಯ ಮನಮುಟ್ಟುವ ಮಾತುಗಳನ್ನ ಆಡಿರೋರು ರಾಘವೇಂದ್ರ ರಾಜ್ ಕುಮಾರ್. ಮಗನಂತೆ ತನ್ನ ಸಹೋದರ ಅಪ್ಪು ಅವರನ್ನ ಕಾಣುತ್ತಿದ್ರು ರಾಘಣ್ಣ. ಈಗ ಅಪ್ಪು ಅಗಲಿಕೆಯ ನಂತರ ಜೀವನ ಪಾಠ ಹೇಳೋ ಗುರುವಿನಂತೆ ಮಾತನಾಡುತ್ತಿದ್ದಾರೆ. ರಾಘಣ್ಣನ ಮಾತು ನಮಗೂ ನಿಮಗೂ ಎಲ್ಲರಿಗೂ ಜೀವನಕ್ಕೆ ಸ್ಫೂರ್ತಿದಾಯಕ ಪಾಠವಾಗುತ್ತೆ. ರಾಘವೇಂದ್ರ ರಾಜ್ ಕುಮಾರ್ ; ಅಪ್ಪು ಅಗಲಿಕೆಯ ನಂತರ ಮಾತನಾಡಿರುವ ಸ್ಫೂರ್ತಿದಾಯಕ ಮಾತುಗಳ ಒಂದು ವಿಶೇಷ ನೋಟ ನಿಮಗಾಗಿ..

ಸಾಧಕರ ಬದುಕು ಅವರಿದ್ದಾಗ ಗೊತ್ತಾಗಲ್ಲ. ಅವರು ಹೋದಾಗ ಅದು ಎಷ್ಟು ಶ್ರೇಷ್ಠವಾಗಿತ್ತು ಅನ್ನೋದು ಮನವರಿಕೆ ಆಗುತ್ತೆ. ಅದಕ್ಕೆ ಹಿರಿಯರು ಹೇಳಿದ್ದು ಶರಣರ ಗುಣವನ್ನ ಮರಣದಲ್ಲಿ ಕಾಣು ಅಂತ. ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ಅರಗಿಸಿಕೊಳ್ಳಲಾಗದಂತದ್ದು. ಆದ್ರೆ, ಆ ಕಹಿ ಸತ್ಯವನ್ನ ನುಂಗಿ ನಾವು ಮನ್ನಡೆಯಲೇಬೇಕಿದೆ. ಅಪ್ಪು ಇನ್ನಿಲ್ಲ ಅನ್ನೋ ಬರಸಿಡಿಲು ಕನ್ನಡಿಗರಿಗೆ ಬಡಿದಾಗ ಎಲ್ಲಿ ಏನು ಅನಾಹುತವಾಗಿ ಬಿಡುತ್ತೋ ಎಂದು ಎಲ್ಲರೂ ಭಾವಿಸಿದ್ದರು.

ಆದ್ರೆ, ಪುನೀತ್ ರಾಜ್ ಕುಮಾರ್ 2ನೇ ಅಣ್ಣ ರಾಘವೇಂದ್ರ ರಾಜ್ ಕುಮಾರ್ ಅವರ ಆ ಒಂದು ಸ್ಟೇಟ್​ಮೆಂಟ್ ಅಪ್ಪು ಅಂತಿಮ ಯಾತ್ರೆಯನ್ನ ಇತಿಹಾಸದ ಪುಟದಲ್ಲಿ ದಾಖಲಾಗುವ ಹಾಗೆ ಮಾಡಿಬಿಡ್ತು.. ಮಹಾತ್ಮ ಗಾಂಧೀಜಿ ಅವರ ನಂತರ ಅಂತಿಮ ಯಾತ್ರೆಗೆ ಅತಿ ಹೆಚ್ಚು ಜನ ಸೇರಿದ್ದು ಪುನೀತ್ ರಾಜ್ ಕುಮಾರ್ ಅವರ ಅಂತಿಮ ಯಾತ್ರೆಗೆ ಎಂದು ಹೇಳುವ ಮಟ್ಟಕ್ಕೆ ಆಗಿ ಹೋಯ್ತು.

ರಾಘಣ್ಣನ ಪ್ರತಿ ಹೇಳಿಕೆಯೂ ಬದುಕಿಗೆ ಸ್ಫೂರ್ತಿ
ಮಹಾಯೋಗಿ ಮಾತಿನಂತೆ ಕೇಳುತ್ತಿದೆ ಅವರ ಮಾತು

ರಾಘವೇಂದ್ರ ರಾಜ್​​ಕುಮಾರ್. ಡಾ.ರಾಜ್ ಕುಮಾರ್ ಅವರ ಎರಡನೇ ಪುತ್ರ. ದೊಡ್ಮನೆಯಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಬಿಟ್ರೆ ಇವ್ರೆ ಹೆಚ್ಚು ಸೂಕ್ತ ಸಂದರ್ಭದಲ್ಲಿ ನಿರ್ಧಾರವನ್ನ ತೆಗೆದುಕೊಂಡು ಪರಿಸ್ಥಿತಿ ಅನುಗುಣವಾಗಿ ನಡೆದುಕೊಳ್ಳೋದು. ಅಕ್ಟೋಬರ್ 29ನೇ ತಾರೀಖು ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಅನ್ನೋ ಆಘಾತಕಾರಿ ಸುದ್ದಿ ಎಲ್ಲಡೆ ಹಬ್ಬಿದಾಗ ಅಭಿಮಾನಿಗಳನ್ನ ತನ್ನ ಮುತ್ತಿನಂಥ ಮಾತುಗಳಿಂದ ಸಮಾಧಾನ ಪಡಿಸಿದ್ರು ರಾಘಣ್ಣ.

ಕೇಳಿದ್ರಲ್ಲ ರಾಘಣ್ಣನ ತೂಕವಾದ ಮಾತುಗಳನ್ನ. ‘‘ನನ್ನ ತಮ್ಮ ನನ್ನ ಅಪ್ಪ ಅಮ್ಮನ ಬಳಿ ಹೋಗಿದ್ದಾನೆ’’. ‘‘ನನ್ನ ಮೇಲೆ ಪ್ರೀತಿ ಇದ್ರೆ’’ ; ‘‘ನನ್ನ ಈ ಮಾತೊಂದನ್ನ ನೀವುಗಳು ನಡೆಸಿಕೊಡಬೇಕು’’ , ‘‘ಯಾರಿಗು ತೊಂದರೆ ಮಾಡದೆ ಅಪ್ಪುವಿನ ಅಂತಿಮ ಯಾತ್ರೆಯನ್ನ ಪ್ರೀತಿಯಿಂದ ಕಳೆಸಿಕೊಡಬೇಕು’’ ಎಂದು ರಾಘಣ್ಣ ಮನವಿ ಮಾಡಿಕೊಂಡಿದ್ದರು. ಅಂದಿನಿಂದ ಇಂದಿನ ತನಕ ರಾಘಣ್ಣ ಪ್ರತಿಯೊಂದು ಸ್ಟೇಟ್ ಮೆಂಟ್​ಗಳು ಬರೆದಿಟ್ಟುಕೊಂಡು ಜೀವನಕ್ಕೆ ಅಳವಡಿಸಿಕೊಳ್ಳಬೇಕು ಅಂತಹ ಅರ್ಥಪೂರ್ಣ ಮಾತುಗಳನ್ನ ರಾಘವೇಂದ್ರ ರಾಜ್ ಕುಮಾರ್ ಆಡುತ್ತಿದ್ದಾರೆ.

ಅಪ್ಪು ಕಂಡ್ರೆ ಇಡೀ ರಾಜ್ ಕುಟುಂಬಕ್ಕೆ ಹೇಗೆ ಇಷ್ಟನೋ ಅಷ್ಟೇ ಇಷ್ಟ ರಾಘಣ್ಣನಿಗೂ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗಿಂತ ಹತ್ತು ವರ್ಷ ದೊಡ್ಡವರು ರಾಘವೇಂದ್ರ ರಾಜ್ ಕುಮಾರ್. ಅಪ್ಪು ಅವರು ಮಾಸ್ಟರ್ ಲೋಹಿತ್ ಕುಮಾರ್ ರಿಂದ ಪುನೀತ್ ರಾಜ್ ಕುಮಾರ್ ಆಗೋವರೆಗೂ ಅಪ್ಪು ಅವರ ಪ್ರತಿ ಬೆಳವಣಿಗೆಯನ್ನ ರಾಘವೇಂದ್ರ ರಾಜ್ ಕುಮಾರ್ ಕಂಡಿದ್ದಾರೆ , ತಮ್ಮನ ಬೆಳವಣಿಗೆಯನ್ನ ಕೊಂಡಾಡಿದ್ದಾರೆ. ಅಪ್ಪು ಸಮಾಧಿಯಾದ ನಂತರ ರಾಘಣ್ಣ ಒಂದು ಸ್ಟೇಟ್ ಮೆಂಟ್ ಕೊಟ್ಟಿದ್ದರು. ಆಗ ಅಪ್ಪು ಅವರ ಬಗ್ಗೆ ಅನೇಕ ಇಂಟ್ರಸ್ಟಿಂಗ್ ವಿಚಾರವನ್ನ ಹೇಳಿದ್ದರು ರಾಘಣ್ಣ..

ಪುನೀತ್ ಕನಸನ್ನ ಈಡೇರಿಸೋ ಪಣ ತೊಟ್ಟ ರಾಘಣ್ಣ
ಅಪ್ಪು ಅವರ ಯಾವ ಕನಸನ್ನ ಪೂರೈಸುತ್ತಾರೆ ರಾಘಣ್ಣ..?

ಅಪ್ಪು ಅವರು ಏನೇ ಮಾಡ್ಲಿ ಅಲ್ಲಿ ರಾಘಣ್ಣ ಇದ್ದೇ ಇರುತ್ತಿದ್ದರು. ಅಪ್ಪು ಗೆಲುವನ್ನ ರಾಘಣ್ಣ ತನ್ನ ಗೆಲುವು ಅಂತ ಸಂಭ್ರಮಿಸಿದ್ದಾರೆ. ರಾಘಣ್ಣ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡಿದಾಗ ಅಪ್ಪು ಸಂತೋಷದಿಂದ ಕೊಂಡಾಡಿದ್ದಾರೆ. ರಾಘಣ್ಣನಿಗೆ ರಾಜ್ಯ ಪ್ರಶಸ್ತಿ ಬಂದಾಗ ಸಂತೋಷದಿ ಕುಣಿದಾಡಿದ್ದರು. ಏನೇ ಆಗಿರಲಿ ಒಬ್ಬರನೊಬ್ಬರು ಬಿಟ್ಟು ಕೊಡದೆ ಆದರ್ಶ ಸಹೋದರರ ರೀತಿ ಇದ್ದವರು ಅಣ್ಣಾವ್ರ ಮಕ್ಕಳು. ಈ ಇದೇ ರಾಘಣ್ಣ ಅಪ್ಪು ಅವರ ಆ ಒಂದು ಆಸೆಯನ್ನ ಪೂರೈಸಲು ಮುಂದಾಗಿದ್ದಾರೆ.

‘ಅಪ್ಪು ಜೊತೆ ರಾಘಣ್ಣ ಲಾಸ್ಟ್ ಸೆಲ್ಫಿ’
ಇತ್ತೀಚೆಗೆ ನನಗೆ ದಾದಾ ಸಾಹೇಬ್ ಫಾಲ್ಕೆ MSK ಟ್ರಸ್ಟ್ ವತಿಯಿಂದ ‘ಜೀವಮಾನ ಸಾಧನೆ ಪ್ರಶಸ್ತಿ ’ ಬಂದ ಸಂದರ್ಭದಲ್ಲಿ ಅಪ್ಪುವಿಗೆ ಎಲ್ಲಿಲ್ಲದ ಸಂತೋಷವಾಗಿತ್ತು.. ನನ್ನನ್ನು ತಕ್ಷಣ ಭೇಟಿ ಮಾಡಿ ಈ ಸೆಲ್ಫಿ ತೆಗೆದು ರಾಘಣ್ಣ ನಾವೂ ಸಹ ಈ ಮೂರ್ತಿಯ ರೂಪದ ಹಾಗೆ ಅಪ್ಪಾಜಿಯವರ ಮೂರ್ತಿಯನ್ನು ಮಾಡಿ ಎಂದಿನಂತೆ ಡಾ.ರಾಜ್ ಕುಮಾರ್ ಟ್ರಸ್ಟ್​ನಿಂದ ನೀಡುವ ಪ್ರಶಸ್ತಿಯನ್ನು ಇದೇ ರೂಪದಲ್ಲಿ ಮಾಡೋಣ ಎಂದು ಹೇಳಿದ್ದನು.. ಅಪ್ಪು ನಿನ್ನ ಈ ಆಲೋಚನೆಗೆ ನನ್ನದೊಂದು ನಮನ.. ಲವ್ ಯೂ ಮಗನೇ
                                                                                      -ರಾಘವೇಂದ್ರ ರಾಜ್ ಕುಮಾರ್ , ನಟ-ನಿರ್ಮಾಪಕ

 

ಅಪ್ಪು ಅವರ ಇದೊಂದು ಆಸೆಯನ್ನ ಪೂರೈಸೊದಷ್ಟೆ ಅಲ್ಲ ಅಪ್ಪು ಅವರ ಬದುಕಿನ ಆದರ್ಶವನ್ನ ಗೊತ್ತು ಗೊತ್ತಿಲ್ಲದೇ ಮಾಡುತ್ತಿದ್ದ ಸಹಾಯದ ಸೇವೆಯನ್ನ ತಾನು ಕೂಡ ಮುಂದುವರೆಸಬೇಕು ಅನ್ನೋ ನಿರ್ಧಾರವನ್ನ ರಾಘವೇಂದ್ರ ರಾಜ್ ಕುಮಾರ್ ತೊಟ್ಟಿದ್ದಾರೆ. ಅಪ್ಪು ಅಗಲಿಕೆಯ ನಂತರ 13ನೇ ದಿನಕ್ಕೆ ಅಭಿಮಾನಿಗಳಿಗೆ ಅನ್ನದಾನ ಮಾಡಿತ್ತು ದೊಡ್ಮನೆ. ಅಭಿಮಾನಿಗಳಿಗೆ ಊಟ ಹಾಕಿಸಬೇಕು ಅನ್ನೋ ಕನಸು ಅಪ್ಪು ಅವರಿಗೆ ಇತ್ತು. ಆದ್ರೆ, ತಿಥಿಯ ರೂಪದಲ್ಲಿ ಆಗಿದ್ದು ನಿಜಕ್ಕೂ ಬೇಸರದ ಸಂಗತಿ. 25ರಿಂದ 35 ಸಾವಿರ ಅಭಿಮಾನಿಗಳು ಅಂದು ಊಟ ಮಾಡಿದ್ರು. ಆಗ ರಾಘಣ್ಣ ಮಾಧ್ಯಮಗಳಿಗೆ ಒಂದು ಸ್ಟೇಟ್ ಮೆಂಟ್ ಕೊಟ್ಟಿದ್ದರು. ಆ ಹೇಳಿಕೆ ಕೂಡ ಎಲ್ಲರ ಹೃದಯ ಕಣ್ಣು ಕಿವಿಯನ್ನ ತೆರೆಸಿದೆ. ತನ್ನ ತಮ್ಮನ ತನ್ನ ತಮ್ಮನ ಒಳಗಿರುವ ಪರಮಾತ್ಮನ ಬಗ್ಗೆ ರಾಘಣ್ಣ ಅಂದಿನ ಮಾತು ಇಂತಿದೆ.

ಅಪ್ಪು ನೇತ್ರದಾನದಿಂದ ಸೃಷ್ಟಿಯಾಗಿದೆ ಗಿನ್ನಿಸ್ ದಾಖಲೆ
ಒಂದೇ ದಿನ 3200 ಜನ ನೇತ್ರಾದಾನಕ್ಕೆ ನೊಂದಣಿ

ಡಾ.ರಾಜ್​​ಕುಮಾರ್ ನೇತ್ರಾದಾನ ಮಾಡಿ ಎಂದು ಇಡೀ ಭಾರತಿಯರಿಗೆ ಮಾದರಿಯಾದ್ರು. ಮರಣದ ನಂತರ ಸಾವಿರು ಮಂದಿ ನೇತ್ರಾದಾನ ಮಾಡಿದ್ರು.. ಆದ್ರೆ, ಪುನೀತ್ ರಾಜ್​​ಕುಮಾರ್ ಅಗಲಿಕೆಯ ನಂತರ ನೇತ್ರದಾನ ನೋಂದಣಿ ದಾಖಲೆಯ ಮಟ್ಟಕ್ಕೆ ಆಗುತ್ತಿದೆ. ನಾರಾಯಣ ನೇತ್ರಾಲಯದ ಡಾ.ರಾಜ್ ಕುಮಾರ್ ಐ ಬ್ಯಾಂಕ್​​ನಲ್ಲಿ ಪ್ರತಿ ದಿನ ಸಾವಿರಾರು ಮಂದಿ ನೇತ್ರಾದಾನ ಮಾಡಲು ನೊಂದಣಿ ಮಾಡಿಕೊಳ್ತಿದ್ದಾರೆ. ಅಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡುವ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್ ಆಡಿದ್ದ ಮಾತು ನಿಜಕ್ಕೂ ಸ್ಫೂರ್ತಿದಾಯಕವಾಕ್ಯಗಳು.

ಇಷ್ಟಕ್ಕೆ ಮುಗಿದಿಲ್ಲ ರಾಘಣ್ಣನ ಅದ್ಭುತ ಮಾತುಗಳ ಮೇಳ. ರಾಘಣ್ಣನ ಮಾತು ಅಕ್ಷರಶಃ ಸತ್ಯವೆನ್ನುವಂತಹ.. ಕಣ್ಣೀರು ಬರುವಂತ ಹೇಳಿಕೆಗಳನ್ನ ಪುನೀತ್ ಅಗಲಿಕೆ ನಂತರ ಕೊಟ್ಟಿದ್ದಾರೆ. ನೂರು ಮಾತನಾಡೋ ಬದ್ಲು ಒಂದೊಳ್ಳೆ ಮಾತು ಆಡಬೇಕು. ಆ ಒಂದು ಮಾತು ನೂರು ಮಾತುಗಳ ಶಕ್ತಿಯನ್ನ ತುಂಬಿರಬೇಕು. ರಾಘಣ್ಣನ ಒಂದೊಂದು ಮಾತು ಬದುಕಿನ ಶಕ್ತಿಗೆ ಮತ್ತಷ್ಟು ಸ್ಫೂರ್ತಿ ತುಂಬುವಂತದ್ದಾಗಿದೆ.

News First Live Kannada

Leave a comment

Your email address will not be published. Required fields are marked *