ಕಣ್ಣೀರು ಹಾಕುತ್ತಲೇ ‘ಅಭಿಮಾನಿ ದೇವರು’ಗಳಿಗೆ ಊಟ ಬಡಿಸಿದ ಶಿವಣ್ಣ, ಅಪ್ಪು ಪತ್ನಿ ಅಶ್ವಿನಿ


ಪವರ್​​ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರ ಅಭಿಮಾನಿಗಳಿಗೆ ಇಂದು ದೊಡ್ಮನೆ ಕುಟುಂಬ ಅನ್ನ ಸಂತರ್ಪಣೆ ಮಾಡ್ತಿದೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಭೋಜನ ಕೂಟ ನಡೆಯುತ್ತಿದ್ದು, ಡಾ.ರಾಜ್ ಕುಟುಂಬದ ಪ್ರಮುಖರು ಅಭಿಮಾನಿ ದೇವರುಗಳಿಗೆ ಊಟ ಬಡಿಸಿ ಭಾವುಕರಾದರು.

ದಿವಗಂತ ಪುನೀತ್​ ರಾಜ್​ಕುಮಾರ್ ಪತ್ನಿ ಅಶ್ವಿನಿ, ಕಣ್ಣೀರು ಇಡುತ್ತಲೇ ಅಭಿಮಾನಿಗಳಿಗೆ ಊಟ ಬಡಿಸಿದರು. ಬಳಿಕ ಶಿವಣ್ಣ, ರಾಘಣ್ಣ ಊಟ ಬಡಿಸಿದರು. ಬಳಿಕ ಶಿವಣ್ಣ, ರಾಘಣ್ಣ ಬಂದಿರುವ ಎಲ್ಲಾ ಅಭಿಮಾನಿಗಳಿಗೆ ಕೈಮುಗಿಯುತ್ತ ಮಾತನಾಡಿಸಿದರು.

ಕರುನಾಡಿನ ಮನೆಮನೆಯ ಅಪ್ಪು ತೀರಿಕೊಂಡು ಇಂದಿಗೆ 12 ದಿನ. ಈ ಹಿನ್ನೆಲೆಯಲ್ಲಿ ಡಾ.ರಾಜ್​ಕುಟುಂಬ ಅಪ್ಪು ಅಭಿಮಾನಿಗಳಿಗೆ ಅನ್ನದಾನ ಇಟ್ಟುಕೊಂಡಿದೆ. ಹಠಾತ್ ಹೃದಯಾಘಾತದಿಂದ ಪುನೀತ್​ ರಾಜ್​ಕುಮಾರ್ ಅಕ್ಟೋಬರ್ 29 ರಂದು ನಿಧನರಾಗಿದ್ದಾರೆ.

News First Live Kannada


Leave a Reply

Your email address will not be published. Required fields are marked *