ದಾವಣಗೆರೆ: ಕಣ್ಣೆದುರಲ್ಲೇ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಪ್ರಾಣಬಿಟ್ಟಿದ್ದನ್ನ ನೋಡಿ ಶಾಸಕ ರೇಣುಕಾಚಾರ್ಯ ತುಂಬಾ ನೊಂದುಕೊಂಡ ಘಟನೆ ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯಿತು.

ಶಾಸಕರು ಇಂದು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದೇ ವೇಳೆ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಉಸಿರು ಚೆಲ್ಲಿದ್ರು. ಈ ವೇಳೆ ರೋಗಿಯ ಸಂಬಂಧಿ ಶಾಸಕರ ಎದುರು ಜೋರಾಗಿ ಕಣ್ಣೀರು ಇಟ್ಟರು.

ಆಗ ತುಂಬಾ ನೊಂದುಕೊಂಡ ಶಾಸಕರು, ರೋಗಿಯ ಸಂಬಂಧಿಯನ್ನ ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಆರೋಗ್ಯದಲ್ಲಿ ಏರುಪೇರು ಆದ ತಕ್ಷಣವೇ ಆಸ್ಪತ್ರೆಗೆ ಬರೋದಿಲ್ಲ. ನಿತ್ಯ ಇಲ್ಲಿ 5-6 ಸಾವುಗಳು ಸಂಭವಿಸುತ್ತಿವೆ. ಆಸ್ಪತ್ರೆಗೆ ತಡವಾಗಿ ದಾಖಲಾಗುತ್ತಿರೋದೇ ಇದಕ್ಕೆಲ್ಲಾ ಕಾರಣ ಅಂತಾ ಭಾವುಕರಾದರು.

The post ಕಣ್ಣೆದುರಲ್ಲೇ ಪ್ರಾಣಬಿಟ್ಟ ಸೋಂಕಿತನ ಕಂಡು ಕಣ್ಣೀರಾದ ರೇಣುಕಾಚಾರ್ಯ appeared first on News First Kannada.

Source: newsfirstlive.com

Source link